ಶಿವಮೊಗ್ಗ: ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಅವರ ಹೆಸರಿನಲ್ಲಿ ಸ್ವೀಟ್ ಬಾಕ್ಸ್ ಕಳುಹಿಸಿದ್ದ ಆರೋಪಿಯನ್ನು ಕೋಟೆ ಠಾಣೆ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಭದ್ರಾವತಿ ಮೂಲದ ಸೌಹಾರ್ಧ ಪಟೇಲ್(26) ಬಂಧಿತ ಆರೋಪಿ.
ಆರೋಪಿಯು ಈ ಹಿಂದೆ ಕಾನೂನು ಪದವಿ ಓದುವಾಗ ಎನ್ಇಎಸ್ ಕಾರ್ಯದರ್ಶಿ ನಾಗರಾಜ್ ಅವರು ವಿಷಯವೊಂದರ ಕುರಿತಾಗಿ ಆರೋಪಿಗೆ ಬೈಯ್ದಿದ್ದರು. ಈ ಹಿನ್ನೆಲೆಯಲ್ಲಿ ಮನ ನೊಂದಿದ್ದ ಆರೋಪಿ ಸೌಹಾರ್ದ ಪಟೇಲ್, ಕೊರಿಯರ್ ಮೂಲಕ ಡಾ. ಧನಂಜಯ ಸರ್ಜಿ ಅವರ ಹೆಸರಿನಲ್ಲಿ ಹೊಸ ವರ್ಷದ ಶುಭ ಕೋರುವ ಸಂದೇಶದೊಂದಿಗೆ ಸಿಹಿ ತಿಂಡಿಯನ್ನು ಕಾರ್ಯದರ್ಶಿ ಹಾಗೂ ಮತ್ತಿಬ್ಬರು ವೈದ್ಯರಿಗೆ ಕಳುಹಿಸಿದ್ದ. ಈ ಬಾಕ್ಸ್ ಅನ್ನು ತೆರೆದ ವೇಳೆ ಸ್ವೀಟ್ ಕಹಿಯಾಗಿರುವುದನ್ನು ಗಮನಿಸಿ, ಸರ್ಜಿ ಗಮನಕ್ಕೆ ಕಾರ್ಯದರ್ಶಿ ನಾಗರಾಜ್ ತಂದಿದ್ದರು. ಈ ಸಂಬಂಧ ಡಾ.ಧನಂಜಯ ಸರ್ಜಿ ತಮ್ಮ ಆಪ್ತ ಕಾರ್ಯದರ್ಶಿ ಮೂಲಕ ಪೊಲೀಸ್ ಠಾಣೆಗೆ ದೂರು ಕೊಡಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ವೀಟ್ ಬಾಕ್ಸ್ ಮೂಲ ಪತ್ತೆ ಹಚ್ಚಿರುವ ಕೋಟೆ ಠಾಣೆ ಪೊಲೀಸರು, ಭದ್ರಾವತಿ ಮೂಲದ ಆರೋಪಿ ಸೌಹಾರ್ದ ಪಟೇಲ್ ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Recent Comments