Breaking News

ತ್ಯಾವರೆಕೊಪ್ಪ ಮೃಗಾಲಯದಲ್ಲಿ ಹೆಣ್ಣು ಹುಲಿ ಸಾವು

ಶಿವಮೊಗ್ಗ: ಇಲ್ಲಿನ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ‘ಅಂಜನಿ’ ಎಂಬ ಹೆಣ್ಣು ಹುಲಿ ಮೃತಪಟ್ಟಿದೆ.
17 ವರ್ಷ ವಯಸ್ಸಿನ ಹೆಣ್ಣು ಹುಲಿಯು ವಯೋ ಸಹಜವಾದ ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಮೃಗಾಲಯದಲ್ಲಿ ಮೃತಪಟ್ಟಿದೆ.
ಪಶು ವೈದ್ಯಕೀಯ ಕಾಲೇಜಿನ ಪಶುವೈದ್ಯರ ತಂಡ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯಕ್ರಿಯೆ ನಡೆಸಲಾಗಿದೆ.
2022 ರಲ್ಲಿ ಮೈಸೂರು ಜಿಲ್ಲೆಯ ಕೂರ್ಗಳ್ಳಿಯ ಚಾಮುಂಡಿ ವನ್ಯಜೀವಿ ಪುನರ್ವಸತಿ ಕೇಂದ್ರದಿಂದ ಅಂಜನಿ ಹುಲಿಯನ್ನು ಶಿವಮೊಗ್ಗ ಮೃಗಾಲಯಕ್ಕೆ ತರಲಾಗಿತ್ತು. ಈ ಹುಲಿಯ ಸಾವಿನಿಂದ ತ್ಯಾವರೆಕೊಪ್ಪ ಮೃಗಾಲಯದಲ್ಲಿ 4 ಹೆಣ್ಣು ಹಾಗೂ 1 ಗಂಡು ಸೇರಿದಂತೆ ಒಟ್ಟು 5 ಹುಲಿಗಳಿವೆ ಎಂದು ತ್ಯಾವರೆಕೊಪ್ಪ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

*