Cnewstv / 22.07.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
ನಾಮಫಲಕದ ಪದಗಳೇ ನಾಪತ್ತೆ….? ಇದು ಪ್ರವಾಸಿಗರಿಗೆ ಸ್ವಾಗತಿಸುವ ನಾಮಫಲಕದ ಅವ್ಯವಸ್ಥೆ
ಶಿವಮೊಗ್ಗ: ಮಲೆನಾಡು ಶಿವಮೊಗ್ಗ ಪ್ರವಾಸಿಗರ ತವರೂರು ಎಂಬ ಖ್ಯಾತಿ ಹೊಂದಿದೆ. ರಾಜ್ಯದ ನಾನಾ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಬರುವ ಪ್ರವಾಸಿಗರನ್ನು ಸ್ವಾಗತಿಸುವ ನಾಮಫಲಕ ಈಗ ಅವ್ಯವಸ್ಥೆಯಿಂದ ಕೂಡಿದೆ.
ಹೌದು, ನಗರದ ಪ್ರಮುಖ ಸರ್ಕಲ್ ನಲ್ಲಿ ಅಳವಡಿಸಿರುವ ನಾಮಫಲಕ ಹಾಳಾಗುತ್ತಿದೆ.ಲೋಕೋಪಯೋಗಿ ಇಲಾಖೆಯಿಂದ ಈ ನಾಮಫಲಕ ಅಳವಡಿಸಲಾಗಿದೆ ಎನ್ನಲಾಗಿದೆ.ಈ ನಾಮಫಲಕದಲ್ಲಿ ರಾಜ್ಯದ ಹೊರ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರನ್ನು ಸ್ವಾಗತಿಸಲಾಗುತ್ತದೆ.ನಾಮಫಲಕದಲ್ಲಿ ಅಂಟಿಸಿರುವ ಪದಗಳು ಕಳಚಿ ಬೀಳುತ್ತಿವೆ. ಸಾವಿರಾರು ರೂಪಾಯಿ ವೆಚ್ಚ ಮಾಡಿ ಅಳವಡಿಸಿರುವ ನಾಮಫಲಕ ಕಡಿಮೆ ಅವಧಿಯಲ್ಲಿ ಹಾಳಾಗಿದೆ.ಈ ಬಗ್ಗೆ ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ ಇಲಾಖೆ ಎಚ್ಚೆತ್ತುಕೊಂಡು ನಾಮಫಲಕ ಸರಿಪಡಿಸಿ ಪ್ರವಾಸಿಗರಿಗೆ ಸ್ಪಷ್ಟ ಮಾಹಿತಿ ದೊರೆಯುವಂತೆ ಮಾಡಬೇಕಿದೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
ಇದನ್ನು ಒದಿ…
Recent Comments