Cnewstv / 02.09.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
ಆಗಸ್ಟ್ ತಿಂಗಳಲ್ಲಿ 1.74 ಕೋಟಿ ರೂ GST ಸಂಗ್ರಹ.. ಮಹಾರಾಷ್ಟ್ರ, ಕರ್ನಾಟಕದಲ್ಲಿ ಗರಿಷ್ಠ ತೆರಿಗೆ ಸಂಗ್ರಹ..
ನವದೆಹಲಿ : ಅಗಸ್ಟ್ ತಿಂಗಳಲ್ಲಿ 1,74,962 ಕೋಟಿ ರೂನಷ್ಟು GST ಸಂಗ್ರಹವಾಗಿದೆ ಎಂದು ಸರ್ಕಾರ ಅಧಿಕೃತ ದತ್ತಾಂಶವನ್ನು ತಿಳಿಸಿದೆ. ಈ ಮೂಲಕ ತೆರಿಗೆ ಸಂಗ್ರಹದಲ್ಲಿ ಶೇ. 10 ರಷ್ಟು ಹೆಚ್ಚಳವಾಗಿದೆ.
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ 1.59 ಲಕ್ಷ ಕೋಟಿ ರೂನಷ್ಟು GST ಸಂಗ್ರಹವಾಗಿತ್ತು. ಅದಕ್ಕೆ ಹೋಲಿಸಿದರೆ ಈ ವರ್ಷ ಶೇ. 10 ರಷ್ಟು ಹೆಚ್ಚಳವಾಗಿದೆ. ಈ ವರ್ಷ ಜನವರಿಯಿಂದ ಆಗಸ್ಟ್ವರೆಗೂ ಸಂಗ್ರಹಣೆಗೊಂಡ GST ತೆರಿಗೆ ಮೊತ್ತ 9.13 ಲಕ್ಷ ಕೋಟಿ ರೂ. 2023ರ ಇದೇ ಅವಧಿಯಲ್ಲಿ 8.29 ಲಕ್ಷ ಕೋಟಿ ರೂನಷ್ಟು ತೆರಿಗೆ ಸಂಗ್ರಹವಾಗಿದೆ. ಸುಮಾರು 24,460 ಕೋಟಿ ರೂ. ಹಣವನ್ನು ರೀಫಂಡ್ ಮಾಡಲಿಲ್ಲ, ಕಳೆದ ಬಾರಿಗೆ ಶೇ. 38ರಷ್ಟು ಹೆಚ್ಚು. ರೀಫಂಡ್ ಬಳಿಕ ಜಿಎಸ್ಟಿ ಆದಾಯದಲ್ಲಿ ಶೇ. 6.5ರಷ್ಟು ಬೆಳವಣಿಗೆ ದಾಖಲಾಗಿದ್ದು, ಸಂಗ್ರಹದ ಪ್ರಮಾಣ 1.5 ಲಕ್ಷ ಕೋಟಿ ರೂ. ಇದೆ.
ಮಹಾರಾಷ್ಟ್ರ, ಕರ್ನಾಟಕದಲ್ಲಿ ಗರಿಷ್ಠ ತೆರಿಗೆ ಸಂಗ್ರಹ.
ಜಿಎಸ್ಟಿ ಸಂಗ್ರಹದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ 26,367 ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದು, ಶೇ. 13ರಷ್ಟು ಏರಿಕೆ ಕಂಡಿದೆ. ಕರ್ನಾಟಕದಲ್ಲಿ 12,344 ಕೋಟಿ ರೂ. ಪರೋಕ್ಷ ತೆರಿಗೆ ಸಂಗ್ರಹ ಮತ್ತು ಶೇ. 11ರಷ್ಟು ಬೆಳವಣಿಗೆಯಾಗಿದೆ. ಗುಜರಾತ್ 10,344 ಕೋಟಿ ರೂ., ತಮಿಳುನಾಡು 10,181 ಕೋಟಿ ರೂ., ಹರಿಯಾಣ 8,623 ಕೋಟಿ ರೂ., ಉತ್ತರ ಪ್ರದೇಶ 8,269 ಕೋಟಿ ರೂ. ಸಂಗ್ರಹದೊಂದಿಗೆ ನಂತರದ ಸ್ಥಾನದಲ್ಲಿವೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
ಇದನ್ನು ಒದಿ…
Recent Comments