Breaking News

ಬಿಜೆಪಿಯವರು ದೇಶದ ಸಂಪತ್ತನ್ನು 22 ಜನರ ಕೈಗೆ ನೀಡಿದ್ದಾರೆ – ರಾಹುಲ್ ಗಾಂಧಿ.

Cnewstv / 02.05.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..

ಬಿಜೆಪಿಯವರು ದೇಶದ ಸಂಪತ್ತನ್ನು 22 ಜನರ ಕೈಗೆ ನೀಡಿದ್ದಾರೆ – ರಾಹುಲ್ ಗಾಂಧಿ.

ಶಿವಮೊಗ್ಗ : ಬಿಜೆಪಿಯವರು ದೇಶದ ಸಂಪತ್ತನ್ನು 22 ಜನರ ಕೈಗೆ ನೀಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಇಂದು ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿರುವ ಕಾಂಗ್ರೆಸ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ರೇಪಿಸ್ಟ್ ರೇವಣ್ಣ ದೇಶ ಬಿಟ್ಟು ಹೋಗಲು ಬಿಜೆಪಿ ಕಾರಣ. ಅವರ ಬಳಿ ಎಲ್ಲಾ ಸಂಸ್ಥಗಳಿದ್ದಾಗ್ಯೂ ಪ್ರಜ್ವಲ್ ಸುಲಭವಾಗಿ ಜರ್ಮನಿಗೆ ಹೋಗಲು ನೆರವಾಗಿದ್ದಾರೆ. ರಾಜ್ಯದಲ್ಲಿ ನಾವು ೫ ಗ್ಯಾರಂಟಿ ಜಾರಿಗೊಳಿಸಿದ್ದೇವೆ. ಅದೇ ರೀತಿ ರಾಷ್ಟ್ರಮಟ್ಟದಲ್ಲೂ ಗ್ಯಾರಂಟಿ ಯೋಜನೆ ಜಾರಿಗೊಳಿಸಲಿದ್ದೇವೆ. ಮಹಾಲಕ್ಷ್ಮಿ ಯೋಜನೆಯಡಿ ಬಡ ಕುಟುಂಬದ ಮಹಿಳೆಗೆ ಪ್ರತಿ ತಿಂಗಳು ೧೦ ಸಾವಿರ ನೀಡಲಿದ್ದೇವೆ ಏಕೆಂದರೆ ಬಿಜೆಪಿಯವರು ದೇಶದ ಜನರನ್ನು ಬಡವರನ್ನಾಗಿ ಮಾಡಿದ್ದಾರೆ. ಈ ಯೋಜನೆಗಳಿಂದ ಮೋದಿಗೆ ಬೇಜಾರಾಗಿದೆ. ಏಕೆಂದರೆ ಅವರ 22 ಜನ ಶ್ರೀಮಂತರಿಗೆ ಈ ಯೋಜನೆಯ ನೆರವು ಸಿಗುವುದಿಲ್ಲ. ಅದೇ ರೀತಿ ಯುವ ಸಮೂಹಕ್ಕೆ ನೆರವು ನೀಡಲಿದ್ದೇವೆ.

ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ವರ್ಷಕ್ಕೆ 1 ಲಕ್ಷ ನೀಡಲಿದ್ದೇವೆ. ತೆರವಾಗಿರುವ ೩೦ ಲಕ್ಷ ಹುದ್ದೆ ಭರ್ತಿ ಮಾಡಲಿದ್ದೇವೆ. ನರೇಗಾ ಯೋಜನೆಯಡಿ 250 ಕೂಲಿಯನ್ನು 400ಕ್ಕೆ ಹೆಚ್ಚಿಸಲಿದ್ದೇವೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸಲಾಗುವುದು.‌ರೈತರ ಸಾಲ ಮನ್ನಾ ಮಾಡಲಾಗುವುದು. ದೇಶದ ಪ್ರತಿಯೊಂದು ಕ್ಷೇತ್ರವನ್ನೂ ಬಿಜೆಪಿ ಖಾಸಗೀಕರಣ ಮಾಡಲು ಹೊರಟಿದೆ.‌ಈ ಮೂಲಕ ಯುವಕರಿಗೆ ಸಿಗಬೇಕಿರುವ ಉದ್ಯೋಗಾವಕಾಶವನ್ನು ಕಸಿದುಕೊಳ್ಳಲು ಹೊರಟಿದೆ. ಆದರೆ ಕಾಂಗ್ರೆಸ್ ಇದಕ್ಕೆ ಅವಕಾಶ ಮಾಡಿ ಕೊಡುವುದಿಲ್ಲ. ಬಿಜೆಪಿಯ ವಿರುದ್ಧ ಸಂಘಟಿತ ಹೋರಾಟ ನಡೆಸಲಿದೆ ಎಂದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಇದನ್ನು ಒದಿ..

Leave a Reply

Your email address will not be published. Required fields are marked *

*