Cnewstv / 26.07.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
“CNEWSTV” ವರದಿ ಫಲಶೃತಿ.. ಹೆದ್ದಾರಿ ಫಲಕಗಳ ವಿಲೇವಾರಿಗೆ ದರಪಟ್ಟಿ ಆಹ್ವಾನ.
ಶಿವಮೊಗ್ಗ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಜಿಲ್ಲೆಯಲ್ಲಿ ಅಳವಡಿಸಲಾದ ಹೆದ್ದಾರಿ ಫಲಕಗಳ ಪೈಕಿ ಶಿಥಿಲಗೊಂಡ ನಾಲ್ಕು ಹೆದ್ದಾರಿ ಫಲಕಗಳ ವಿಲೇವಾರಿಗೆ ಅರ್ಹ ಬಿಡ್‌ದಾರರಿಂದ ದರಪಟ್ಟಿ ಆಹ್ವಾನಿಸಲಾಗಿದೆ.
ಜಿಲ್ಲೆಯಲ್ಲಿ ಅಳವಡಿಸಲಾದ ಹೆದ್ದಾರಿ ಫಲಕಗಳು ಶಿಥಿಲಗೊಂಡ ಬಗ್ಗೆ “cnewstv” ಪ್ರವಾಸಿಗರಿಗೆ ಸ್ವಾಗತಿಸುವ ನಾಮಫಲಕದ ಅವ್ಯವಸ್ಥೆ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.
“cnewstv” ವರದಿ ಬೆನ್ನಲೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಜಿಲ್ಲೆಯಲ್ಲಿ ಅಳವಡಿಸಲಾದ ಹೆದ್ದಾರಿ ಫಲಕಗಳ ಪೈಕಿ ಶಿಥಿಲಗೊಂಡ ನಾಲ್ಕು ಹೆದ್ದಾರಿ ಫಲಕಗಳ ವಿಲೇವಾರಿಗೆ ಅರ್ಹ ಬಿಡ್‌ದಾರರಿಂದ ದರಪಟ್ಟಿ ಆಹ್ವಾನಿಸಲಾಗಿದೆ.
ಶಿವಮೊಗ್ಗ ತಾಲೂಕಿನ ಹೊಳಲೂರು, ಆಯನೂರು ಮತ್ತು ಶಿವಮೊಗ್ಗ ನಗರದ ವಾರ್ತಾ ಇಲಾಖೆ ಆವರಣ ಹಾಗೂ ಸಾಗರ ತಾಲೂಕಿನ ತಾಳಗುಪ್ಪ ಗ್ರಾಮದಲ್ಲಿ ಅಳವಡಿಸಲಾದ 10x 20 ಅಳತೆಯ ಹೆದ್ದಾರಿ ಫಲಕಗಳನ್ನು ಇರುವ ಸ್ಥಳಗಳಲ್ಲೇ ಹರಾಜು ಮಾಡಲಾಗುವುದು. ಆಸಕ್ತ ಬಿಡ್‌ದಾರರು ಮುಚ್ಚಿದ ಲಕೋಟೆಯಲ್ಲಿ ದರಪಟ್ಟಿಯನ್ನು ಆ. 04ರೊಳಗಾಗಿ ಸರ್. ಎಂ.ವಿ. ರಸ್ತೆಯಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸುವಂತೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 8496872447 ನ್ನು ಸಂಪರ್ಕಿಸಬಹುದಾಗಿದೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
ಇದನ್ನು ಒದಿ..
Recent Comments