ಪಾಸ್‌ಪೋರ್ಟ್ ಸಿಸ್ಟಂ ಹ್ಯಾಕ್ ಮಾಡಿ ಪತ್ನಿಯನ್ನು ಇಂಪ್ರೆಸ್ ಮಾಡಲು ಹೋದ ಪತಿರಾಯನಿಗೆ ಕಾದಿತ್ತು ಶಾಕ್ ??!!!

Cnewstv / 17.02.2023 / ಬೆಂಗಳೂರು /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಪಾಸ್‌ಪೋರ್ಟ್ ಸಿಸ್ಟಂ ಹ್ಯಾಕ್ ಮಾಡಿ ಪತ್ನಿಯನ್ನು ಇಂಪ್ರೆಸ್ ಮಾಡಲು ಹೋದ ಪತಿರಾಯನಿಗೆ ಕಾದಿತ್ತು ಶಾಕ್ ??!!!

ಬೆಂಗಳೂರು : ಪತ್ನಿಗೆ ಪಾಸ್ ಪೋರ್ಟ್ ಸಿಸ್ಟಂ ಹ್ಯಾಕ್ ಮಾಡಿ ಪತಿಯೊಬ್ಬ ಸಂಕಷ್ಟಕ್ಕೆ ಸಿಲುಕಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈ ಪೊಲೀಸರ ಪಾಸ್ಪೋರ್ಟ್ ಪರಿಶೀಲನಾ ವ್ಯವಸ್ಥೆ ಹ್ಯಾಕ್ ಮಾಡಿದ ಆರೋಪದ ಮೇಲೆ 27 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ವೃತ್ತಿಯಲ್ಲಿ ಸಿವಿಲ್ ಆಗಿರುವ ಆತ ಪಾಸ್‌ಪೋರ್ಟ್ ಪರಿಶೀಲನೆ ವೇಳೆ ಸಿಕ್ಕಿಹಾಕಿಕೊಳ್ಳುವುದನ್ನು ತಪ್ಪಿಸಲು ತನ್ನ ಪತ್ನಿ ಸೇರಿದಂತೆ ಮೂವರು ಅರ್ಜಿದಾರರ ಪಾಸ್‌ಪೋರ್ಟ್ ವಿಚಾರಣೆಗೆ ಹಾಜರಾಗಿದ್ದಾರೆ.

ಇದನ್ನು ಒದಿ : https://cnewstv.in/?p=12113

ಆತನನ್ನು ಉತ್ತರ ಪ್ರದೇಶದ ಗಾಜಿಯನಲ್ಲಿ ಬಂಧಿಸಲಾಗಿದೆ, ಆರೋಪಿ ರಾಜಾ ಬಾಬು ಶಾನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವರದಿ ಪ್ರಕಾರ, ಉದ್ಯೋಗಕ್ಕಾಗಿ ವಿದೇಶಕ್ಕೆ ಬಯಸಿದ್ದ ಪತ್ನಿಯನ್ನು ಮೆಚ್ಚಿಸಲು ಆರೋಪಿ ಪಾಸ್‌ಪೋರ್ಟ್ ಪರಿಶೀಲನಾ ವ್ಯವಸ್ಥೆ ಹ್ಯಾಕ್ ಮಾಡಲು ಯತ್ನಿಸಿದ್ದ.

ಆರೋಪಿಯ ಪತ್ನಿಯ ದಾಖಲೆಗಳು ಸರಿಯಾಗಿವೆ ಎಂದು ಸಾಬೀತಾಗಿದೆ, ಆದರೆ, ಆಕೆಯ ಪಾಸ್ಪೋರ್ಟ್ ಸದ್ಯ ತಡೆಹಿಡಿಯಲಾಗಿದೆ. ರಾಜಾ ಬಾಬುಷಾ ಉತ್ತರ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಪತ್ನಿ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಉದ್ಯೋಗಕ್ಕಾಗಿ ವಿದೇಶಕ್ಕೆ ಯೋಜಿಸಿದ್ದ,ಇದಕ್ಕಾಗಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದರ ನಡುವೆ ತನ್ನ ಪತ್ನಿಯನ್ನು ಮೆಚ್ಚಿಸುವ ಪ್ಯಾಸ್‌ಪೋರ್ಟ್ ವ್ಯವಸ್ಥೆಯನ್ನೇ ಆತ ಹ್ಯಾಕ್ ಮಾಡಿದ್ದ.

ಮೂರು ಪಾಸ್‌ಪೋರ್ಟ್ ಅರ್ಜಿಗಳು ಕ್ಲಿಯರೆನ್ಸ್‌ಗಾಗಿ ಬಾಕಿ ಉಳಿದಿವೆ. ಪಾಸ್‌ಪೋರ್ಟ್ ಫೈಲ್‌ಗಳನ್ನು ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯಿಂದ ನಗರ ಪೊಲೀಸ್ ವಿಶೇಷ ಶಾಖೆಗೆ ಕಳುಹಿಸಲಾಗಿದೆ. ವಿಶೇಷ ಶಾಖೆ ನಂತರ ಸ್ಥಳೀಯ ಪೊಲೀಸರಿಗೆ ಅರ್ಜಿದಾರರ ಕುರಿತು ವರದಿ ಸಲ್ಲಿಸುವಂತೆ ಕೇಳಬೇಕಾಗಿತ್ತು. ಅದರ ನಂತರದ ಆಧಾರದ ಮೇಲೆ ಪಾಸ್‌ಪೋರ್ಟ್ ಮಂಜೂರು ಮಾಡುವ ನಿರ್ಧಾರ ತೆಗೆದುಕೊಳ್ಲಬೇಕಿತ್ತು, ಜೊತೆಗೆ ಮುಂದಿನ ಕ್ರಮಕ್ಕಾಗಿ ಪಾಸ್‌ಪೋರ್ಟ್ ಕಚೇರಿಗೆ ರವಾನಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*