Cnewstv / 02.11.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಎರಡನೇ ಬಾರಿ ದಾಖಲೆಯ GST ಸಂಗ್ರಹ.
ನವದೆಹಲಿ : ಸರಕು ಮತ್ತು ಸೇವಾ ತೆರಿಗೆಯಲ್ಲಿ ಮತ್ತೆ ದಾಖಲೆ ಸೃಷ್ಟಿಯಾಗಿದ್ದು ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಎರಡನೇ ಬಾರಿ ದಾಖಲೆಯ ಜಿಎಸ್‌ಟಿ ಸಂಗ್ರಹವಾಗಿದೆ.
ಅಕ್ಟೋಬರ್ ತಿಂಗಳಿನಲ್ಲಿ 1.52 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಿದ್ದು. ಇವರಗಿನ ಎರಡನೇ ಅತ್ಯಧಿಕ ಸಂಗ್ರಹ ಇದಾಗಿದೆ. ಪ್ರಸ್ತುತ ವರ್ಷ ಶೇಕಡ 16.6 ರಷ್ಟು ಏರಿಕೆ ಕಂಡಿದೆ.
ಅಕ್ಟೋಬರ್ ತಿಂಗಳಿನಲ್ಲಿ ಒಟ್ಟು 1,51,718 ಕೋಟಿ ರೂಪಾಯಿ ಸಂಗ್ರಹವಾಗಿದೆ ಈ ಪೈಕಿ 26,039 ಕೋಟಿ ರೂಪಾಯಿ ಕೇಂದ್ರ ಜಿಎಸ್‌ಟಿ, 33,393 ಕೋಟಿ ರೂಪಾಯಿ ರಾಜ್ಯ ಜಿಎಸ್‌ಟಿಯಾಗಿದೆ. 81,778 ಕೋಟಿ ರೂಪಾಯಿ ಸಮಗ್ರ ಜಿಎಸ್‌ಟಿಗೆ ಆಗಿದೆ 10,506 ಕೋಟಿ ರೂಪಾಯಿ ಸೆನ್ಸ್ ಸಂಗ್ರಹವಾಗಿದೆ ಎಂದು ಸರ್ಕಾರ ಅಧಿಕೃತವಾಗಿ ತಿಳಿಸಿದೆ.
ಇದನ್ನು ಒದಿ : http://cnewstv.in/?p=11382
C News TV Kannada News Online in cnewstv