Cnewstv / 12.11.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
“ವಿದ್ಯುತ್ ಬಿಲ್ ಬಾಕಿ ಇದೆ” ಸೈಬರ್ ವಂಚಕರ ಹೊಸ ಪ್ಲಾನ್.
ಜನರನ್ನ ಮೋಸ ಮಾಡಲು ವಂಚಕರು ಒಂದೆಲೊಂದು ಹೊಸ ಮಾರ್ಗವನ್ನು ಹಿಡಿಯುತ್ತಿದ್ದಾರೆ. ಸೈಬರ್ ಕ್ರೈಮ್ ನಲ್ಲಿ ಇತ್ತೀಚೆಗೆ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಇದೀಗ ಬೆಸ್ಕಾಂ ಅಧಿಕಾರಿಗಳ ಹೆಸರಿನಲ್ಲಿ ಗ್ರಾಹಕರಿಗೆ ಸಂದೇಶವನ್ನು ಕಳುಹಿಸಿ ವಂಚನೆ ಮಾಡುತ್ತಿದ್ದಾರೆ.
ಹೌದು ವಿದ್ಯುತ್ ಬಿಲ್ ಬಾಕಿ ಇದೆ ಎಂಬ ಸಂದೇಶದೊಂದಿಗೆ ಆ್ಯಪ್ ಲಿಂಕ್ ಯೊಂದನ್ನು ನಿಮ್ಮ ಮೊಬೈಲಿಗೆ ಕಳುಹಿಸುತ್ತಾರೆ. ನೀವು ಈ ಕೂಡಲೇ ವಿದ್ಯುತ್ ಬಿಲ್ ಪಾವತಿಸಬೇಕು ಇಲ್ಲವಾದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಹೆದರಿಸಲಾಗುತ್ತದೆ. ಅದಕ್ಕಾಗಿ ಅವರು ನೀಡಿದಂತಹ ಆ್ಯಪ್ ಅನ್ನ ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಒಂದು ವೇಳೆ ಗ್ರಾಹಕರು ಅವರು ಕಳುಹಿಸಿದ ಆ್ಯಪ್ ಅನ್ನು ಒಮ್ಮೆ ಡೌನ್ಲೋಡ್ ಮಾಡಿದರೆ ಅವರ ಮೊಬೈಲಿನಲ್ಲಿದ್ದ ಎಲ್ಲಾ ಮಾಹಿತಿಗಳು ದುಷ್ಕರ್ಮಿಗಳ ಕೈ ಸೇರುತ್ತದೆ. ಒಮ್ಮೆ ನೀವು ಆ ಆ್ಯಪ್ ಇನ್ಸ್ಟಾಲ್ ಮಾಡಿದರೆ ನಿಮ್ಮ ಎಲ್ಲಾ ಪರ್ಸನಲ್ ಡೇಟಾ, ಫೋಟೋ, ಫೇಸ್ಬುಕ್, ಇನ್ಸ್ಟಾಗ್ರಾಮ್, ಇ-ಮೇಲ್ ಇತ್ಯಾದಿ ಎಲ್ಲವನ್ನೂ ಸಹ ಬಳಸಬಹುದು ಇದರಿಂದ ನಿಮ್ಮ ಬ್ಯಾಂಕ್ ಖಾತೆಯ ಸಂಪೂರ್ಣ ಹಣ ಖಾಲಿಯಾಗಬಹುದು. ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳು ತಮ್ಮ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ..
ಈಗಾಗಲೇ ಗುಜರಾತ್ ಕರ್ನಾಟಕ ಮಹಾರಾಷ್ಟ್ರ ಪಂಜಾಬ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಬಿಲ್ ಪಾವತಿಸುವಂತೆ ಮೆಸೇಜ್ ಹಾರಿದಾಡುತ್ತಿದೆ. ಇದಾವುದೂ ಕೂಡ ಅಧಿಕೃತ ಮೂಲಗಳಿಂದ ಬಂದಿರುವುದಿಲ್ಲ ಬಹಳಷ್ಟು ಜನರು ಆ ಸಂಖ್ಯೆಗೆ ಕರೆ ಮಾಡಿ ಅವರು ನೀಡಿದ ಆ್ಯಪ್ ಅನ್ನು ಇನ್ಸ್ಟಾಲ್ ಮಾಡಿ ಹಣ ಕಳೆದುಕೊಂಡು ಮೋಸ ಹೋಗುತ್ತಿದ್ದಾರೆ. ದುಷ್ಕರ್ಮಿಗಳು ಹೆಚ್ಚಾಗಿ ಐಟಿ ಕಂಪನಿಗಳಲ್ಲಿ ಕೆಲಸ ಮಾಡುವವರನ್ನೇ ಟಾರ್ಗೆಟ್ ಮಾಡಿದ್ದಾರೆ.
Recent Comments