Cnewstv / 15.02.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಕುಶಲಕರ್ಮಿಗಳಿಗೆ ಸಾಲ-ಸಹಾಯಧನಕ್ಕಾಗಿ ಅರ್ಜಿ ಆಹ್ವಾನ.
ಶಿವಮೊಗ್ಗ : ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರವು ಕುಶಲಕರ್ಮಿಗಳಾದ ಕುಂಬಾರ /ಟೆರಾಕೋಟ /ಮಣ್ಣಿನ ವಿಗ್ರಹ, ಕಮ್ಮಾರ, ಶಿಲ್ಪಿಗಳು, ಬುಟ್ಟಿ ಹೆಣೆಯುವವರು, ಆಭರಣ ತಯಾರಿಸುವ ಅಕ್ಕಸಾಲಿಗರು, ಶ್ರೀಗಂಧದ ಕೆತ್ತನೆ, ಕಲ್ಲಿನ ಕೆತ್ತನೆ, ಲೋಹದ ಕರಕುಶಲ ವಸ್ತು, ಬೆತ್ತ ಮತ್ತು ಬಿದಿರಿನ ಕೆಲಸ, ಸಂಡೂರು ಲಂಬಾಣಿ ಕಸೂತಿ, ಕಸೂತಿ ಕಲೆ, ಕೋಕೋನಟ್ ಸೆಲ್ ಕ್ರಾಫ್ಟ್, ಕಂಬಳಿ ನೇಯುವವರು, ಚಾಪೆ ಹೆಣೆಯುವವರು, ಕರಕುಶಲ ವಸ್ತುಗಳನ್ನು ತಯಾರಿಸುವವರು, ಕ್ಷೌರಿಕ, ಚಮ್ಮಾರಿಕೆ ಧೋಬಿ ಮತ್ತು ಬಡಗಿ ಚಟುವಟಿಕೆಗಳನ್ನು ಮಾಡುತ್ತಿರುವ ಜಿಲ್ಲೆಯ ಕುಶಲಕರ್ಮಿಗಳಿಂದ, ಅವರ ಸಾಮಾಜಿಕ, ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಅವರನ್ನು ಸಕ್ರಿಯಗೊಳಿಸುವ ಮತ್ತು ಬೆಂಬಲವನ್ನು ಒದಗಿಸುವ ಮೂಲಕ ಉದ್ಯೋಗವನ್ನು ಹೆಚ್ಚಿಸಲು ಬ್ಯಾಂಕಿನ ಸಾಲದೊಂದಿಗೆ “ಕುಶಲಕರ್ಮಿಗಳಿಗೆ ಸಾಲ-ಸಹಾಯಧನ” ಎಂಬ ಹೊಸ ಯೋಜನೆಯಡಿ ಅರ್ಜಿಯನ್ನು ಆಹ್ವಾನಿಸಿದೆ.
ಇದನ್ನು ಒದಿ : https://cnewstv.in/?p=12084
ಈ ಯೋಜನೆಯಡಿ ಮಂಜೂರಾದ ಸಾಲದ ಶೇಕಡ 30 ರಷ್ಟು ಗರಿಷ್ಟ ರೂ.15.000/- ಸಹಾಯಧನವನ್ನು ಯೋಜನಾ ವೆಚ್ಚವು ರೂ.50.000/- ಮೀರದಿರುವ ಚಟುವಟಿಕೆಗಳಿಗೆ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ ಜಂಟಿ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ ಶಿವಮೊಗ್ಗ ದೂ.ಸಂ.: 08182-222802 ಹಾಗೂ ಎಲ್ಲಾ ತಾಲ್ಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸುವುದು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv