Breaking News

ವಾಟ್ಸಪ್ ಡೌನ್, ಟ್ವಿಟರ್ ನಲ್ಲಿ ಸಾಲುಸಾಲು ಮೀಮ್ ಗಳು..

Cnewstv.in / 25.10.2022 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ವಾಟ್ಸಪ್ ಡೌನ್, ಟ್ವಿಟರ್ ನಲ್ಲಿ ಸಾಲುಸಾಲು ಮೀಮ್ ಗಳು..

ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣವಾದ ವಾಟ್ಸಪ್ ಇದು ಸುಮಾರು ಎರಡು ಗಂಟೆಗಳ ಕಾಲ ತನ್ನ ಸೇವೆಯನ್ನು ಸ್ಥಗಿತಗೊಳಿಸಿತ್ತು. ಇದರಿಂದಾಗಿ ಗ್ರಾಹಕರು ಸಂದೇಶವನ್ನು ಕಳುಹಿಸಲು ಸ್ವೀಕರಿಸಲಾಗಿದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇಂದು 12.30 ರಿಂದ ತನ್ನ ಕಾರ್ಯವನ್ನು ವಾಟ್ಸಪ್ ನಿಲ್ಲಿಸಿದೆ. ಯಾವುದೇ ಸಂದೇಶವನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಸ್ಟೇಟಸ್ ಹಾಕಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಮಧ್ಯಾಹ್ನ 2:30ರ ನಂತರ ಮತ್ತೆ ಕೆಲಸ ಆರಂಭಿಸಿದೆ. ಅದರೆ ಈ ಬಗ್ಗೆ ಇಲ್ಲಿಯತನಕ ವಾಟ್ಸಪ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ವಾಟ್ಸಪ್ ನ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಡೌನ್ ಅದ ಪ್ರಸಂಗ ಇದಾಗಿದೆ ಎಂದು ಹೇಳಲಾಗುತ್ತದೆ. ವಾಟ್ಸಪ್ ನಲ್ಲಿ ಸರ್ವರ್ ಡೌನ್ ಆದನಂತರ ಟ್ವಿಟರ್ ನಲ್ಲಿ ವಾಟ್ಸಾಪ್ ಡೌನ್ ಹ್ಯಾಶ್ ಟ್ಯಾಗ್ ಟ್ರೆಂಡ್ ಪ್ರಾರಂಭವಾಗಿದೆ. ಅಲ್ಲದೆ ಸಾಲುಸಾಲು ನಗೆ ತರಿಸುವ ಮೀಮ್ ಗಳು ಸೃಷ್ಟಿಯಾಗಿದೆ.

 

 

ಇದನ್ನು ಓದಿ :

http://cnewstv.in/?p=11308

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*