Cnewstv.in / 01.11.2022 /ನವದೆಹಲಿ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
LPG ಸಿಲಿಂಡರ್ ಬೆಲೆ ಇಳಿಕೆ.
ನವದೆಹಲಿ : ವಾಣಿಜ್ಯ ಬಳಕೆ 19 ಕೆಜಿ LPG ಸಿಲಿಂಡರ್ ಬೆಲೆ ಇಳಿಕೆ ಮಾಡಲಾಗಿದೆ ಎಂದು ಭಾರತೀಯ ತೈಲ ನಿಗಮ ತಿಳಿಸಿದೆ.
ಇಂದಿನಿಂದ, 1 ನೇ ನವೆಂಬರ್ 2022 ರಿಂದ ಅನ್ವಯವಾಗುವಂತೆ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆಯಲ್ಲಿ 115.50 ಪೈಸೆ ಇಳಿಕೆ ಮಾಡಲಾಗಿದೆ. ಆದರೆ ದೇಶಿಯ ಅಡುಗೆ ಅನಿಲ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ನವದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 1,859 ರೂಪಾಯಿ ಇದ್ದು, ಇಂದಿನಿಂದ ಪರಿಷ್ಕೃತ ದರ 1,744 ರೂಪಾಯಿಯಾಗಿದ್ದು, 115 ರೂಪಾಯಿ ಇಳಿಕೆಯಾಗಿದೆ. ಕೋಲ್ಕತ್ತಾದಲ್ಲಿ 113, ಮುಂಬೈನಲ್ಲಿ 115.5, ಚೆನ್ನೈ ನಲ್ಲಿ 116.5 ರೂಪಾಯಿ ಇಳಿಕೆಯಾಗಿದೆ.
ಗೃಹಬಳಕೆಯ ಸಿಲೆಂಡರ್ ನ ಬೆಲೆ ಸ್ಥಿರವಾಗಿದ್ದು, ವಾಣಿಜ್ಯ ಬಳಕೆಯ ಗ್ಯಾಸ್ ಸಿಲೆಂಡರ್ ನ ಬೆಲೆ ಪ್ರತಿ ತಿಂಗಳು ಇಳಿಕೆಯಾಗುತ್ತಿದೆ. 14.2 kg ದೇಸಿಯ ಅಡುಗೆ ಅನಿಲದ ಬೆಲೆ 1,053 ರೂಪಾಯಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv