Cnewstv / 24.01.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಜನವರಿ 26 ರಂದು ಬಿಡುಗಡೆಯಾಗಲಿದೆ ‘ರೈಸ್ ದಿ ಬಾರ್’ ಪುಸ್ತಕ…
ಶಿವಮೊಗ್ಗ : ಶಿವಮೊಗ್ಗದ ವೈದ್ಯ ಡಾ.ರಾಹುಲ್ ದೇವರಾಜ್ ಅವರು ರಚಿಸಿರುವ ‘ರೈಸ್ ದಿ ಬಾರ್’ ಪುಸ್ತಕ ಬಿಡುಗಡೆ ಸಮಾರಂಭವು ಜ.೨೬ರಂದು ಸಂಜೆ ೬ ಗಂಟೆಗೆ ಸುವರ್ಣ ಸಂಸ್ಕೃತಿ ಭವನದಲ್ಲಿ ನಡೆಯಲಿದೆ.
ರೈಸ್ ದಿ ಬಾರ್ ಒಂದು ಸ್ಫೂರ್ತಿದಾಯಕ ಸೆಲ್ಫ್ ಹೆಲ್ಪ್ ಪುಸ್ತಕವಾಗಿದ್ದು, ಯುವಕರನ್ನು ದೃಷ್ಟಿಯಲ್ಲಿಟ್ಟುಕೊಂಡು ರಚಿಸಲಾಗಿದೆ. ಹೆಸರೇ ಸೂಚಿಸುವಂತೆ ಜೀವನ ಮೌಲ್ಯಗಳನ್ನು ಹೆಚ್ಚಿಸುವ ಪುಸ್ತಕವಾಗಿದೆ. ಈ ಪುಸ್ತಕದಲ್ಲಿ ಜೀವನ, ಟೈಂ ಮ್ಯಾನೇಜ್‌ಮೆಂಟ್, ದುಡಿಮೆ ಹಾಗೂ ಹೂಡಿಕೆ, ಸೋಲು ಹಾಗೂ ಅವಮಾನಗಳನ್ನು ಎದುರಿಸುವುದು ಹೇಗೆ? ಅಹಂ, ಉತ್ತಮ ಹವ್ಯಾಸಗಳ ಕುರಿತು, ಆರೋಗ್ಯದ ಕುರಿತು ಮನಮುಟ್ಟುವ ರೀತಿಯಲ್ಲಿ ಅತ್ಯಂತ ಪ್ರಸ್ತುತವಾಗಿ ವಿವರಿಸಲಾಗಿದೆ ಎಂದು ಪುಸ್ತಕದ ಲೇಖಕ ಡಾ.ರಾಹುಲ್ ದೇವರಾಜ್ ಇಂದು ಮಥುರಾ ಪ್ಯಾರಡೈಸ್‌ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಇದನ್ನು ಒದಿ : https://cnewstv.in/?p=11937
ಎಲ್ಲಾ ವಯಸ್ಕರಿಗೂ ಪ್ರಸ್ತುತ ಎನಿಸುವ ಪುಸ್ತಕವಾಗಿದ್ದರೂ ಸಹ ವಿಶೇಷವಾಗಿ ಪ್ರತಿಯೊಬ್ಬ ಯುವಕ-ಯುವತಿಯರು ಓದಲೇಬೇಕಾದ ಕೃತಿಯಾಗಿದೆ. ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆಯುವ ಅಂತರ್‌ರಾಷ್ಟಿçÃಯ ಪುಸ್ತಕ ಮೇಳಕ್ಕೆ ಆಯ್ಕೆಗೊಂಡ ೨೦ ಸೆಲ್ಫ್ ಹೆಲ್ಪ್ ಪುಸ್ತಕಗಳ ಪೈಕಿ ನನ್ನ ಪುಸ್ತಕವು ಒಂದಾಗಿದೆ ಎಂದ ಅವರು, ೨೪೮ ಪುಟವುಳ್ಳ ಈ ಪುಸ್ತಕದ ಬೆಲೆ ೩೫೦ ರೂ. ಆಗಿದ್ದು, ಬಿಡುಗಡೆ ಕಾರ್ಯಕ್ರಮದಲ್ಲಿ ಈ ಪುಸ್ತಕವನ್ನು ೩೦೦ ರೂ.ಗೆ ನೀಡಲಾಗುವುದು ಎಂದರು.
ಈ ಪುಸ್ತಕದಿಂದ ಬಂದ ಲಾಭವನ್ನು ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರ ಒದಗಿಸಲು ಹಾಗೂ ನಿರ್ಗತಿಕರಿಗೆ ಸಹಾಯ ಮಾಡಲು ಉಪಯೋಗಿಸಲಾಗುವುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಮಂಡೇನಕೊಪ್ಪ ದೇವರಾಜ್, ಎಸ್.ಹೇಮಾವತಿ, ತಿಪ್ಪೇಶ್‌ನಾಯ್ಕ್ ಉಪಸ್ಥಿತರಿದ್ದರು.
ಡಾ.ರಾಹುಲ್ ದೇವರಾಜ್‌ರವರ ಕಿರು ಪರಿಚಯ :
ಸೂಡಾ ಮಾಜಿ ಸದಸ್ಯ, ಬಿಜೆಪಿ ಮುಖಂಡ ಮಂಡೇನಕೊಪ್ಪ ದೇವರಾಜ್ ಹಾಗೂ ಎಸ್.ಹೇಮಾವತಿ ದಂಪತಿ ಜ್ಯೇಷ್ಠ ಪುತ್ರರಾಗಿದ್ದು, ಶಿವಮೊಗ್ಗದಲ್ಲಿ ವಿದ್ಯಾಭ್ಯಾಸ ಮಾಡಿ ಬೆಂಗಳೂರಿನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪಡೆದು ಪುಣೆಯ ಸಿಂಬಯೋಸಿಸ್ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಶಿಕಾರಿಪುರದ ಹಿತ್ತಲ ಹಾಗೂ ಊರುಗಡೂರು ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಇದನ್ನು ಒದಿ : https://cnewstv.in/?p=11935
Recent Comments