ಶಿವಮೊಗ್ಗ : ಶಿವಮೊಗ್ಗ ನಗರ ರೈಲ್ವೆ ಕಾಂಪೌಂಡ್‍ನಿಂದ ಹೊಸಪೇಟೆ-ಶಿವಮೊಗ್ಗ ರಸ್ತೆ ಸಂಪರ್ಕಿಸುವ 100ಅಡಿ ವರ್ತುಲ ರಸ್ತೆ ಕಾಮಗಾರಿ ಸ್ಥಳ ಪರಿಶೀಲನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರು ಶುಕ್ರವಾರ ನಡೆಸಿದರು. ಸದರಿ ರಸ್ತೆಯ ಎರಡು ಬದಿಯಲ್ಲಿ 750ಮೀಟರ್ ಉದ್ದಕ್ಕೆ ಸಿಮೆಂಟ್ ಕಾಂಕ್ರೀಟ್ ಚತುಷ್ಪಥ ರಸ್ತೆ, ರಸ್ತೆಯ ಎರಡೂ ಬದಿಗಳಲ್ಲಿ ಬಾಕ್ಸ್ ಚರಂಡಿ ನಿರ್ಮಾಣ, ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ 100ಮೀಟರ್ ಸಿಸಿ ರಸ್ತೆ ನಿರ್ಮಾಣ ಮತ್ತು ರೈಲ್ವೆ ನಿಲ್ದಾಣದಿಂದ ಹೊರಗೆ ಹೋಗಲು 400ಮೀಟರ್ ಡಾಂಬರ್ ರಸ್ತೆ ನಿರ್ಮಾಣ ಕಾಮಗಾರಿ ಇದರಲ್ಲಿ ...
Read More »Monthly Archives: May 2020
ಮೇ27ರಂದು ಹೃದ್ರೋಗ ವಿಭಾಗದ OPD ಆರಂಭ: ಸಚಿವ ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ : ಶಿವಮೊಗ್ಗ ಮೆಡಿಕಲ್ ಕಾಲೇಜಿನ ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೇ 27ರಂದು ಹೃದ್ರೋಗ ವಿಭಾಗದ ಹೊರ ರೋಗಿ ವಿಭಾಗವನ್ನು ಆರಂಭಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹೃದ್ರೋಗ ವಿಭಾಗದ ಒಪಿಡಿಯಲ್ಲಿ ಪ್ರತಿ ದಿನ 80ರಿಂದ 100 ಮಂದಿ ಹೃದಯ ಸಂಬಂಧಿ ಖಾಯಿಲೆ ಇರುವ ರೋಗಿಗಳಿಗೆ ಸೂಕ್ತ ತಪಾಸಣೆ, ಸಲಹೆ ಮತ್ತು ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ. ಹೃದ್ರೋಗ ತಜ್ಞರಾದ ಡಾ.ಪರಮೇಶ್ವರ ಎಸ್ ಮತ್ತು ಡಾ.ಮಹೇಶಮೂರ್ತಿ ಅವರು ಇಲ್ಲಿ ಕಾರ್ಯನಿರ್ವಹಿಸುವರು ಎಂದು ಹೇಳಿದರು. ಕಾರ್ಡಿಯಾಕ್ ...
Read More »“ವಿದ್ಯಾರ್ಥಿ ಕಿಟ್” ನೀಡಿ NSUI ಮನವಿ
ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಖಾಸಗಿ ಶಾಲಾ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಉಚಿತವಾಗಿ “ವಿದ್ಯಾರ್ಥಿ ಕೀಟ್” ವಿತರಿಸುವಂತೆ ಒತ್ತಾಯಿಸಿ ಶಿವಮೊಗ್ಗ ಜಿಲ್ಲಾ NSUI ವತಿಯಿಂದ ಜಿಲ್ಲಾಧಿಕಾರಿ ಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. 2020-2021 ರ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲಾ ಕಾಲೇಜುಗಳಲ್ಲಿ ದಾಖಲಾತಿ ಪಡೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪುಸ್ತಕಗಳು,ನೋಟ್ ಬುಕ್, ಹಾಗೂ ಅಗತ್ಯ ಶೈಕ್ಷಣಿಕ ವಸ್ತುಗಳನ್ನ ಒಳಗೊಂಡ ಕಿಟ್ ಗಳನ್ನ ವಿತರಿಸಬೇಕು ಹಾಗೂ ಈ ಕಿಟ್ ಗಳಿಗೆ ಶುಲ್ಕ ...
Read More »ಮಲೆನಾಡಿಗೂ ಕಾಲಿಟ್ಟ ಕೊರೊನಾ, ಜಿಲ್ಲೆಯಲ್ಲಿ 8 ಪಾಸಿಟಿವ್ ಕೇಸ್ ಪತ್ತೆ.
ಶಿವಮೊಗ್ಗ : ಇಷ್ಟು ದಿನ ಗ್ರೀನ್ ಝೋನ್ ನಲ್ಲಿ ನೆಮ್ಮದಿಯಾಗಿರುವ ಮಲೆನಾಡಿನಲ್ಲಿ ಇದೀಗ 8 ಕೊನೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆಎಸ್.ಈಶ್ವರಪ್ಪ ತಿಳಿಸಿದರು. ಮೊನ್ನೆ ಮಹಾರಾಷ್ಟ್ರ ಮತ್ತು ಗುಜರಾತ್ ನಿಂದ ಅಗಮಿಸಿದ ವ್ಯಕ್ತಿಗಳಿಗೆ ಪಾಸಿಟಿವ್ ದೃಢಪಟ್ಟಿದ್ದು, ಜಿಲ್ಲಾ ಕೊವಿಡ್ ಅಸತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 9 ಜನರಲ್ಲಿ 8 ಮಂದಿ ಶಿಕಾರಿಪುರಕ್ಕೆ ಸೇರಿದವರು ಹಾಗೂ ಇನ್ನೊಬ್ಬರು ತೀಥಹಳ್ಳಿಯವರು ಎಂದು ತಿಳಿದುಬಂದಿದೆ. ಜನರ ಸಹಕಾರ ಮುಖ್ಯ : ಜನರು ಗುಂಪು ಸೇರುವುದನ್ನು ಬಿಡಿ, ಜನತೆಗೆ ಬೇಕಾದ ಎಲ್ಲಾ ರೀತಿಯ ಸಹಕಾರಕ್ಕೆ ...
Read More »ಗುಜರಾತ್, ಮಾಹಾರಾಷ್ಟ್ರದಿಂದ ಬಂದವರಿಂದ ಶಿವಮೊಗ್ಗದಲ್ಲಿ ಕರೋನಾ ಆತಂಕ
ಶಿವಮೊಗ್ಗ: ಇಷ್ಟು ದಿನ ಶಿವಮೊಗ್ಗ ಜಿಲ್ಲೆ ಕರೋನಾ ವಿಷಯದಲ್ಲಿ ಹಸಿರು ವಲಯದಲ್ಲಿತ್ತು. ನಿನ್ನೆ ರಾತ್ರಿ ಶಿವಮೊಗ್ಗಕ್ಕೆ ಗುಜರಾತ್ ಹಾಗೂ ಮಹಾರಾಷ್ಟ್ರದಿಂದ 30ಕ್ಕೂ ಹೆಚ್ಚು ಜನರು ಆಗಮಿಸಿದ್ದು, ಇದರಿಂದಾಗಿ ಮಲೆನಾಡು ಆತಂಕಕ್ಕೊಳಗಾಗಿದೆ. ಗುಜರಾತ್ ನ ಅಹಮದಾಬಾದ್ ನಿಂದ ಶಿವಮೊಗ್ಗಕ್ಕೆ ಆಗಮಿಸಿದವರು ತಬ್ಲಿಘಿ ನಂಟು ಹೊಂದಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಹೀಗೆ ಶಿವಮೊಗ್ಗಕ್ಕೆ ಆಗಮಿಸಿದ ಎಲ್ಲರಿಗೂ ಸಹ್ಯಾದ್ರಿ ಕಾಲೇಜಿನ ಸ್ಟೇಡಿಯಂ ನಲ್ಲಿ ಆರೋಗ್ಯ ತಪಾಸಣೆ ನಡೆಸಲಾಗಿದ್ದು ಎಲ್ಲರನ್ನೂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
Read More »ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೃದ್ರೋಗ, ನರರೋಗ ವಿಭಾಗ ವಾರದಲ್ಲಿ ಆರಂಭ: ಸಚಿವ ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ : ಮೆಗ್ಗಾನ್ ಆಸ್ಪತ್ರೆಗೆ ಕಾಯಕಲ್ಪ ನೀಡಲಾಗುತ್ತಿದ್ದು, ಹೃದ್ರೋಗ ಮತ್ತು ನರ ರೋಗ ವಿಭಾಗ ಒಂದು ವಾರದ ಒಳಗಾಗಿ ಪ್ರಾರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು. ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸೂಪರ್ ಸ್ಪೆಷಾಲಿಟಿ ವಿಭಾಗ ಪ್ರಾರಂಭವಾಗಿ 10ವರ್ಷಗಳಾದರೂ ಇದುವರೆಗೆ ಪ್ರಾರಂಭವಾಗಿಲ್ಲ. ಇದೀಗ ಮೆಗ್ಗಾನ್ ಆಸ್ಪತ್ರೆಯ 3ಜನ ಹೃದ್ರೋಗ ತಜ್ಞರು ಮತ್ತು ಒಬ್ಬ ನರರೋಗ ತಜ್ಞರ ಸೇವೆಯನ್ನು ಪಡೆದುಕೊಂಡು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೃದ್ರೋಗ ಮತ್ತು ನರರೋಗ ವಿಭಾಗದ ಒಪಿಡಿ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಈ ...
Read More »ಶಿವಮೊಗ್ಗದಲ್ಲಿ ಅಣಕುಸೀಲ್ ಡೌನ್
ಶಿವಮೊಗ್ಗ: ಒಂದು ವೇಳೆ ಶಿವಮೊಗ್ಗದಲ್ಲಿ ಕರೋನಾ ವೈರಸ್ ಕಾಣಿಸಿಕೊಂಡರೆ ಏರಿಯಾಗಳನ್ನು ಹೇಗೆ ಸೀಲ್ ಡೌನ್ ಮಾಡಬೇಕು ಎಂಬ ಬಗ್ಗೆ ಇಂದು ಶಿವಮೊಗ್ಗದ ಸೀಗೆಹಟ್ಟಿ ಭಾಗದಲ್ಲಿ ಪೊಲೀಸರು ಅಣಕು ಸೀಲ್ ಡೌನ್ ಮಾಡಿದರು. ಸಿದ್ದಯ್ಯ ರಸ್ತೆಯಿಂದ ಸೀಗೆಹಟ್ಟಿವರೆಗೆ ಎಲ್ಲ ರಸ್ತೆಗಳಿಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಯಿತು. ಈ ಪ್ರದೇಶದಲ್ಲಿ ವಾಹನಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಒಂದು ಏರಿಯಾವನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲು ಎಷ್ಟು ಸಮಯ ಬೇಕು. ಬಫರ್ ಝೋನ್, ಕಂಟೋನ್ಮೆಂಟ್ ಏರಿಯಾ ಹೇಗೆ ಲಾಕ್ ಮಾಡಬೇಕು, ವಾಹನಸಂಚಾರವನ್ನು ಹೇಗೆ ನಿರ್ಬಂಧಿಸಬೇಕು ಎಂಬುದನ್ನು ...
Read More »ಹಳೇ ದ್ಷೇಷದ ಹಿನ್ನಲೆಯಲ್ಲಿ ಮಾರಣಾಂತಿಕ ಹಲ್ಲೆ.
ಶಿವಮೊಗ್ಗ : ಭಾರತಿ ಕಾಲೋನಿಯಲ್ಲಿ ಹಳೇ ದ್ಷೇಷದ ಹಿನ್ನಲೆಯಲ್ಲಿ ಅಲ್ಲಿನ ನಿವಾಸಿಯೊಬ್ಬನನ್ನ ಅದೇ ನಿವಾಸಿಗಳಿಬ್ಬರು ಲಾಂಗ್ ನಿಂದ ಮಾರಣಾಂತಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಭಾರತಿ ಕಾಲೋನಿಯ ಮನೋಹರ ಶೆಟ್ಟಿ ಎಂಬಾತ ಅದೇ ಕಾಲೋನಿಯ ನಿವಾಸಿ ರವಿ ಮತ್ತು ಕುಳ್ಳ ಕಿರಣ್ ಎಂಬುವವರ ಜೊತೆ ಫೈನಾನ್ಸ್ ಮಾಡಿಕೊಂಡು ಇದ್ದನು..ಫೈನಾನ್ಸ್ ವಿಚಾರಕ್ಕೆ ಸಂಬಂಧಿಸಿದ ವೈಷ್ಯಮ್ಯದಿಂದ ರವಿ ಮತ್ತು ಕುಳ್ಳ ಕಿರಣ್ ಮನೋಹರ ಶೆಟ್ಟಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಮನೋಹರ ಶೆಟ್ಟಿಯನ್ನ ಮೊದಲು ಮೆಗ್ಗಾನ್ ಗೆ ದಾಖಲಿಸಲಾಗಿದ್ದು ನಂತರ ನಾರಾಯಣ ಹೃದಯಾಲಯಕ್ಕೆ ಕಲುಹಿಸಲಾಗಿದೆ ...
Read More »ನಗರೋತ್ಥಾನ ಅನುದಾನ ಹಿಂಪಡೆಯುವುದಿಲ್ಲ: ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ
ಶಿವಮೊಗ್ಗ : ನಗರೋತ್ಥಾನ ಯೋಜನೆಯಡಿ ಶಿವಮೊಗ್ಗ ಮಹಾನಗರ ಪಾಲಿಕೆಗೆ ಬಿಡುಗಡೆ ಮಾಡಲಾಗಿರುವ 125ಕೋಟಿ ರೂ. ಯಾವುದೇ ಕಾರಣಕ್ಕೂ ಸರ್ಕಾರ ಹಿಂದಕ್ಕೆ ಪಡೆದುಕೊಳ್ಳುವುದಿಲ್ಲ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಅವರು ಸ್ಪಷ್ಪಪಡಿಸಿದರು. ಇಂದು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್‍ಸಿಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಕುಡಿಯುವ ನೀರು ಯೋಜನೆ ಪೂರ್ಣಗೊಳಿಸಿ: ಶಿವಮೊಗ್ಗ ನಗರದಲ್ಲಿ 24×7 ಕುಡಿಯುವ ನೀರಿನ ಯೋಜನೆ ತ್ವರಿತವಾಗಿ ಅನುಷ್ಟಾನಗೊಳಿಸಬೇಕು. ಆಗಸ್ಟ್ ವೇಳೆಗೆ ಟೆಂಡರ್ ಅವಧಿ ಮುಗಿಯುತ್ತಿದ್ದರೂ, ಇನ್ನೂ ಸಮರ್ಪಕವಾಗಿ ಯೋಜನೆ ಅನುಷ್ಟಾನಗೊಂಡಿಲ್ಲ. ನಿಗದಿತ ಅವಧಿಯ ಒಳಗಾಗಿ ಯೋಜನೆ ...
Read More »ರಿಲಿಪ್ ಸಿಕ್ಕಿದೆ ಎಂದು ಅನಗತ್ಯವಾಗಿ ಓಡಾಡುವ ಗಾಡಿಗಳು ಸೀಜ್ : ಕೆ.ಎಂ.ಶಾಂತರಾಜು
ಶಿವಮೊಗ್ಗದಲ್ಲಿ ಮದ್ಯದಂಗಡಿ ಓಪನ್ ಬೆನ್ನಲ್ಲೇ ವಾಹನ ಸವಾರರಿಗೆ ಪೊಲೀಸರು ಶಾಕ್ ನೀಡಿದ್ದಾರೆ. ಸಾಮಾನ್ಯ ದಿನಕ್ಕಿಂತಲೂ ವಾಹನ ಸಂಚಾರ ಹೆಚ್ಚಾದ ಹಿನ್ನೆಲೆಯಲ್ಲಿ ವಾಹನಗಳನ್ನು ಸೀಜ್ ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ. ಲಾಕ್ ಡೌನ್ ನಿಯಮ ಉಲ್ಲಂಘಿಸಿ ಹೊರಗೆ ಬಂದವರ ವಾಹನಗಳನ್ನು ಸೀಜ್ ಮಾಡಿ ವಾಹನ ಸವಾರರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ಇಬ್ಬರು ಓಡಾಡುತ್ತಿರುವ ಬೈಕ್, ಇಬ್ಬರಿಗಿಂತ ಹೆಚ್ಚು ಜನರಿರುವ ಕಾರುಗಳನ್ನು ಸೀಸ್ ಮಾಡುತ್ತಿದ್ದು, ಕೇವಲ ಅರ್ಧಗಂಟೆಯಲ್ಲಿ ನೂರಾರು ವಾಹನಗಳ ವಶಕ್ಕೆ ಪಡೆದಿದ್ದಾರೆ. ಐವತ್ತಕ್ಕೂ ಹೆಚ್ಚು ಪೊಲೀಸರು ಹಾಗೂ ಅಧಿಕಾರಿಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದು, ಎಸ್ ಪಿ ...
Read More »
C News TV Kannada News Online in cnewstv