ಶಿವಮೊಗ್ಗ : ಭಾರತಿ ಕಾಲೋನಿಯಲ್ಲಿ ಹಳೇ ದ್ಷೇಷದ ಹಿನ್ನಲೆಯಲ್ಲಿ ಅಲ್ಲಿನ ನಿವಾಸಿಯೊಬ್ಬನನ್ನ ಅದೇ ನಿವಾಸಿಗಳಿಬ್ಬರು ಲಾಂಗ್ ನಿಂದ ಮಾರಣಾಂತಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಭಾರತಿ ಕಾಲೋನಿಯ ಮನೋಹರ ಶೆಟ್ಟಿ ಎಂಬಾತ ಅದೇ ಕಾಲೋನಿಯ ನಿವಾಸಿ ರವಿ ಮತ್ತು ಕುಳ್ಳ ಕಿರಣ್ ಎಂಬುವವರ ಜೊತೆ ಫೈನಾನ್ಸ್ ಮಾಡಿಕೊಂಡು ಇದ್ದನು..ಫೈನಾನ್ಸ್ ವಿಚಾರಕ್ಕೆ ಸಂಬಂಧಿಸಿದ ವೈಷ್ಯಮ್ಯದಿಂದ ರವಿ ಮತ್ತು ಕುಳ್ಳ ಕಿರಣ್ ಮನೋಹರ ಶೆಟ್ಟಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಮನೋಹರ ಶೆಟ್ಟಿಯನ್ನ ಮೊದಲು ಮೆಗ್ಗಾನ್ ಗೆ ದಾಖಲಿಸಲಾಗಿದ್ದು ನಂತರ ನಾರಾಯಣ ಹೃದಯಾಲಯಕ್ಕೆ ಕಲುಹಿಸಲಾಗಿದೆ ಎನ್ನಲಾಗುತ್ತಿದೆ.
C News TV Kannada News Online in cnewstv