ಶಿವಮೊಗ್ಗ : ಇಷ್ಟು ದಿನ ಗ್ರೀನ್ ಝೋನ್ ನಲ್ಲಿ ನೆಮ್ಮದಿಯಾಗಿರುವ ಮಲೆನಾಡಿನಲ್ಲಿ ಇದೀಗ 8 ಕೊನೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆಎಸ್.ಈಶ್ವರಪ್ಪ ತಿಳಿಸಿದರು. ಮೊನ್ನೆ ಮಹಾರಾಷ್ಟ್ರ ಮತ್ತು ಗುಜರಾತ್ ನಿಂದ ಅಗಮಿಸಿದ ವ್ಯಕ್ತಿಗಳಿಗೆ ಪಾಸಿಟಿವ್ ದೃಢಪಟ್ಟಿದ್ದು, ಜಿಲ್ಲಾ ಕೊವಿಡ್ ಅಸತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 9 ಜನರಲ್ಲಿ 8 ಮಂದಿ ಶಿಕಾರಿಪುರಕ್ಕೆ ಸೇರಿದವರು ಹಾಗೂ ಇನ್ನೊಬ್ಬರು ತೀಥಹಳ್ಳಿಯವರು ಎಂದು ತಿಳಿದುಬಂದಿದೆ.
ಜನರ ಸಹಕಾರ ಮುಖ್ಯ : ಜನರು ಗುಂಪು ಸೇರುವುದನ್ನು ಬಿಡಿ, ಜನತೆಗೆ ಬೇಕಾದ ಎಲ್ಲಾ ರೀತಿಯ ಸಹಕಾರಕ್ಕೆ ಜಿಲ್ಲಾಡಳಿತ ತಯಾರಾಗಿದೆ. ಜನರು ಸಹಕಾರ ನೀಡಿದರೆ ಮತ್ತೆ ಸಹಜ ಸ್ಥಿತಿಯತ್ತ ಜಿಲ್ಲೆ ಮರಳುತ್ತದೆ, ಯಾರು ಸಹಾ ಭಯಬೀತರಾಗುವುದು ಬೇಡ ಎಂಬ ಮಾಹಿತಿಯನ್ನು ಸಹ ತಿಳಿಸಿದ್ದರು.
C News TV Kannada News Online in cnewstv