Breaking News

ಗುಜರಾತ್, ಮಾಹಾರಾಷ್ಟ್ರದಿಂದ ಬಂದವರಿಂದ ಶಿವಮೊಗ್ಗದಲ್ಲಿ ಕರೋನಾ ಆತಂಕ

ಶಿವಮೊಗ್ಗ: ಇಷ್ಟು ದಿನ ಶಿವಮೊಗ್ಗ ಜಿಲ್ಲೆ ಕರೋನಾ ವಿಷಯದಲ್ಲಿ ಹಸಿರು ವಲಯದಲ್ಲಿತ್ತು. ನಿನ್ನೆ ರಾತ್ರಿ ಶಿವಮೊಗ್ಗಕ್ಕೆ ಗುಜರಾತ್ ಹಾಗೂ ಮಹಾರಾಷ್ಟ್ರದಿಂದ 30ಕ್ಕೂ ಹೆಚ್ಚು ಜನರು ಆಗಮಿಸಿದ್ದು, ಇದರಿಂದಾಗಿ ಮಲೆನಾಡು ಆತಂಕಕ್ಕೊಳಗಾಗಿದೆ. ಗುಜರಾತ್ ನ ಅಹಮದಾಬಾದ್ ನಿಂದ ಶಿವಮೊಗ್ಗಕ್ಕೆ ಆಗಮಿಸಿದವರು ತಬ್ಲಿಘಿ ನಂಟು ಹೊಂದಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಹೀಗೆ ಶಿವಮೊಗ್ಗಕ್ಕೆ ಆಗಮಿಸಿದ ಎಲ್ಲರಿಗೂ ಸಹ್ಯಾದ್ರಿ ಕಾಲೇಜಿನ ಸ್ಟೇಡಿಯಂ ನಲ್ಲಿ ಆರೋಗ್ಯ ತಪಾಸಣೆ ನಡೆಸಲಾಗಿದ್ದು ಎಲ್ಲರನ್ನೂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ‌.

Leave a Reply

Your email address will not be published. Required fields are marked *

*