Breaking News

ಶಿವಮೊಗ್ಗದಲ್ಲಿ ಅಣಕುಸೀಲ್ ಡೌನ್

ಶಿವಮೊಗ್ಗ: ಒಂದು ವೇಳೆ ಶಿವಮೊಗ್ಗದಲ್ಲಿ ಕರೋನಾ ವೈರಸ್ ಕಾಣಿಸಿಕೊಂಡರೆ ಏರಿಯಾಗಳನ್ನು ಹೇಗೆ ಸೀಲ್ ಡೌನ್ ಮಾಡಬೇಕು ಎಂಬ ಬಗ್ಗೆ ಇಂದು ಶಿವಮೊಗ್ಗದ ಸೀಗೆಹಟ್ಟಿ ಭಾಗದಲ್ಲಿ ಪೊಲೀಸರು ಅಣಕು ಸೀಲ್ ಡೌನ್ ಮಾಡಿದರು. ಸಿದ್ದಯ್ಯ ರಸ್ತೆಯಿಂದ ಸೀಗೆಹಟ್ಟಿವರೆಗೆ ಎಲ್ಲ ರಸ್ತೆಗಳಿಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಯಿತು. ಈ ಪ್ರದೇಶದಲ್ಲಿ ವಾಹನಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಒಂದು ಏರಿಯಾವನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲು ಎಷ್ಟು ಸಮಯ ಬೇಕು. ಬಫರ್‌ ಝೋನ್, ಕಂಟೋನ್ಮೆಂಟ್ ಏರಿಯಾ ಹೇಗೆ ಲಾಕ್ ಮಾಡಬೇಕು, ವಾಹನಸಂಚಾರವನ್ನು ಹೇಗೆ ನಿರ್ಬಂಧಿಸಬೇಕು ಎಂಬುದನ್ನು ಅಣಕು ಸೀಲ್ ಡೌನ್ ಮೂಲಕ ಪೊಲೀಸರು ತಿಳಿದುಕೊಂಡರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್ ಪಿ ಶಾಂತರಾಜು, ಸೀಲ್ ಡೌನ್ ಮಾಡುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಪೊಲೀಸರು ಎಂದಿನಂತೆ ತಮ್ಮ ಕಾರ್ಯನಿರ್ವಹಿಸಿದ್ದಾರೆ ಎಂದು ತಿಳಿಸಿದರು. ಅಣಕು ಸೀಲ್ ಡೌನ್ ಮಾಡಿದ್ದರಿಂದಾಗಿ ಜನ ಆತಂಕಕ್ಕೊಳಗಾಗಿದ್ದಾರೆ.

Leave a Reply

Your email address will not be published. Required fields are marked *

*