Breaking News

ರಿಲಿಪ್ ಸಿಕ್ಕಿದೆ ಎಂದು ಅನಗತ್ಯವಾಗಿ ಓಡಾಡುವ ಗಾಡಿಗಳು ಸೀಜ್ : ಕೆ.ಎಂ.ಶಾಂತರಾಜು

 

ಶಿವಮೊಗ್ಗದಲ್ಲಿ ಮದ್ಯದಂಗಡಿ ಓಪನ್ ಬೆನ್ನಲ್ಲೇ ವಾಹನ ಸವಾರರಿಗೆ ಪೊಲೀಸರು ಶಾಕ್ ನೀಡಿದ್ದಾರೆ. ಸಾಮಾನ್ಯ ದಿನಕ್ಕಿಂತಲೂ ವಾಹನ ಸಂಚಾರ ಹೆಚ್ಚಾದ ಹಿನ್ನೆಲೆಯಲ್ಲಿ ವಾಹನಗಳನ್ನು ಸೀಜ್ ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ. ಲಾಕ್ ಡೌನ್ ನಿಯಮ ಉಲ್ಲಂಘಿಸಿ ಹೊರಗೆ ಬಂದವರ ವಾಹನಗಳನ್ನು ಸೀಜ್ ಮಾಡಿ ವಾಹನ ಸವಾರರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ.

ಇಬ್ಬರು ಓಡಾಡುತ್ತಿರುವ ಬೈಕ್, ಇಬ್ಬರಿಗಿಂತ ಹೆಚ್ಚು ಜನರಿರುವ ಕಾರುಗಳನ್ನು ಸೀಸ್ ಮಾಡುತ್ತಿದ್ದು, ಕೇವಲ ಅರ್ಧಗಂಟೆಯಲ್ಲಿ ನೂರಾರು ವಾಹನಗಳ ವಶಕ್ಕೆ ಪಡೆದಿದ್ದಾರೆ.

ಐವತ್ತಕ್ಕೂ ಹೆಚ್ಚು ಪೊಲೀಸರು ಹಾಗೂ ಅಧಿಕಾರಿಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದು, ಎಸ್ ಪಿ ಶಾಂತರಾಜು ಹಾಗೂ ಎ ಎಸ್ ಪಿ ಶೇಖರ್ ಖುದ್ದು ಕಾರ್ಯಾಚರಣೆಗೆ ಇಳಿದಿದ್ದಾರೆ..

 

 

Leave a Reply

Your email address will not be published. Required fields are marked *

*