ಹೆಚ್​.ಡಿ ಕುಮಾರಸ್ವಾಮಿ ವಿರುದ್ಧ MeToo ಆರೋಪ ಬರಬಹುದು – ಕುಮಾರ್ ಬಂಗಾರಪ್ಪ

ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಒಂದು ಪಕ್ಷದವರ ವಿರುದ್ಧ ಮತ್ತೊಂದು ಪಕ್ಷದವರು ಕೆಸರೆರಚಾಟ ಮಾಡುವುದು ಸಾಮಾನ್ಯವಾಗಿತ್ತು.ಎಷ್ಟೇ ರಾಜಕೀಯ ವೈಷಮ್ಯವಿದ್ದರೂ ಯಾವೊಬ್ಬ ನಾಯಕರು ಸಹ ವೈಯಕ್ತಿಕ ವಿಚಾರವನ್ನು ಇದುವರೆಗೂ ತೆಗೆದಿರಲಿಲ್ಲ. ಅದರೆ ಸೊರಬದಲ್ಲಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಬಂಗಾರಪ್ಪ ಕುಟುಂಬದ ವೈಯಕ್ತಿಕ ವಿಚಾರ ಮಾತನಾಡಿರುವುದನ್ನು ಕುಮಾರ ಕುಮಾರ ಗಂಭೀರವಾಗಿ ತೆಗೆದುಕೊಂಡಿದ್ದಾರೆ.ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಆಧಾರವಿಲ್ಲದೆ ನಿಂದನೆಗೆ ಮುಂದಾಗಿದ್ದಾರೆ.. ಇತ್ತೀಚಿಗೆ ಬಹಳ ಸುದ್ದಿಯಾಗಿರುವ MeToo ಅಭಿಯಾನದ ಉದಾಹರಣೆ ತೆಗೆದುಕೊಂಡಿರೋ ಕುಮಾರ್ ಬಂಗಾರಪ್ಪ, ಹೆಚ್​.ಡಿ ಕುಮಾರಸ್ವಾಮಿ ವಿರುದ್ಧಾನೂ MeToo ಆರೋಪ ಕೇಳಿ ಬರಬಹುದು ಎಂದು ಗಂಭೀರ ಆರೋಪ ಮಾಡಿದರು. ಕುಮಾರ ಸ್ವಾಮಿ ಅವರು ರಾಧಿಕಾ ಕುಮಾರಸ್ವಾಮಿಯನ್ನು ಎರಡನೇ ಮದುವೆ ಅದ ಬಗ್ಗೆ ಮಾತನಾಡಿದಲ್ಲ, ಅವರು ನಿಮ್ಮ ಕುಟುಂಬದವರಾದರೆ, ನೀವು ಅವರನ್ನು‌ ಸಾರ್ವಜನಿಕವಾಗಿ ಪರಿಚಯ ಮಾಡಿಸಿ, ರಾಮನಗರಕ್ಕೆ ಕರೆದುಕೊಂಡು ಹೋಗಿ ಪ್ರಚಾರ ಮಾಡಿಸಲಿ ಎಂದು ಕುಮಾರ್ ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.ನನ್ನ ವೈಯಕ್ತಿಕ ವಿಚಾರಕ್ಕೆ ಬಂದಿದ್ದಕ್ಕೆ, ನಾನು ಅವರ ವೈಯಕ್ತಿಕ ವಿಚಾರ ಮಾತನಾಡುತ್ತಿರುವೆ.ಶಿವಮೊಗ್ಗ ಅಭಿವೃದ್ಧಿ ಬಗ್ಗೆ ಮಾತನಾಡಿ. ನನ್ನ ಹಾಗೂ ನನ್ನ ಕುಟುಂಬದ ವಿಚಾರದ ಬಗ್ಗೆ ಅಲ್ಲ‌ ಎಂದು ಎಚ್ಚರಿಕೆ ನೀಡಿದ್ದರು..

ಹೆಚ್​.ಡಿ ಕುಮಾರಸ್ವಾಮಿ ವಿರುದ್ಧ MeToo ಆರೋಪ ಬರಬಹುದು – ಕುಮಾರ್ ಬಂಗಾರಪ್

Leave a Reply

Your email address will not be published. Required fields are marked *

*