“ಐಕ್ಯತಾ ಪ್ರತಿಮೆ ವಿಶೇಷತೆಗಳು
ಭಾರತದ ಉಕ್ಕಿನ ಮನುಷ್ಯ ಎಂದೇ ಬಿಂಬಿತವಾಗಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ರ 143 ನೇ ಜನ್ಮದಿನದಂದು ಅವರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ, “ಐಕ್ಯತಾ ಪ್ರತಿಮೆ” ಯನ್ನು ಇಂದು ಪ್ರಧಾನಿ ನರೇಂದ್ರ ಮೋದಿಯವರು ಅನಾವರಣಗೊಳಿಸಿದರು. ಸ್ವಾತಂತ್ರ್ಯಾನಂತರ ಭಾರತದಲ್ಲಿ ಹರಿದುಹಂಚಿ ಹೋಗಿದ್ದ ರಾಜಮನೆತನಗಳನ್ನು ಒಗ್ಗೂಡಿಸಿ, ಅವರನ್ನೆಲ್ಲ ಭಾರತ ಎಂಬ ಒಂದೇ ಸೂರಿನಡಿ ತಂದ ಕೀರ್ತಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರಿಗೆ ಸಲ್ಲುತ್ತದೆ. ಸರ್ದಾರ್ ಸರೋವರ ತಟದಲ್ಲಿ ನರ್ಮದಾ ಡ್ಯಾಂ ಕಡೆ ಮುಖ ಮಾಡಿ ಈ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಇದು ವಿಶ್ವದಲ್ಲೇ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಕಾರಣವಾಗಿದೆ.ಅಮೆರಿಕದ ಸ್ಟ್ಯಾಚು ಆಫ್ ಲಿಬರ್ಟಿಗಿಂತ ನಾಲ್ಕು ಪಟ್ಟು ಎತ್ತರವಾಗಿದೆ. ಸುಮಾರು 3000 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಈ ಪ್ರತಿಮೆಯು ಮೂಡಿಬಂದಿದ್ದು. ಮಹಾರಾಷ್ಟ್ರ ಮೂಲದ ಖ್ಯಾತ ಶಿಲ್ಪಕಾರ ರಾಮ್ ವಾಂಜಿ ಸುತಾರ್ ಇದರ ಶಿಲ್ಪಿ.. ಪ್ರತಿಮೆಯು 600 ಅಡಿ ಎತ್ತರ, 193 ಎತ್ತರದ ಅಡಿಪಾಯ.20 ಸಾವಿರ ಚದರ ಮೀ. ವಿಸ್ತೀರ್ಣವನ್ನು ಹೊಂದಿದೆ. ಗಂಟೆಗೆ 180 ಕಿ.ಮೀ ವೇಗದಲ್ಲಿ ಬೀಸುವ ಗಾಳಿಯನ್ನು ಎದುರಿಸುವ ಶಕ್ತಿ ಈ ಪ್ರತಿಮೆಗೆ ಇದೆ ಹಾಗೂ ರಿಕ್ಟರ್ ಮಾಪಕದ್ಲಿ 6.5ರಷ್ಟು ಭೂಕಂಪನವನ್ನು ತಡೆಯುವ ಸಾಮರ್ಥ್ಯ ಹೊಂದಿದೆ. ಈ ಪ್ರತಿಮೆ ನಿರ್ಮಾಣದ ಗುತ್ತಿಗೆಯನ್ನು ಎಲ್ ಅಂಡ್ ಟಿ ಸಂಸ್ಥೆ 2989 ಕೋಟಿಗೆ ಪಡೆದಿತ್ತು. ಇದರ ನಿರ್ಮಾಣದಲ್ಲಿ ಸುಮಾರು 4000 ಕಾರ್ಮಿಕರು, 2000 ಟನ್ ತಾಮ್ರ , 25 ಸಾವಿರ ಟನ್ ಕಬ್ಬಿಣ, 90 ಸಾವಿರ ಟನ್ ಸಿಮೆಂಟ್, 200 ಚೀನಾ ಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ. 250 ಇಂಜಿನಿಯರ್ಗಳಿಂಗ ಪ್ರತಿಮೆ ವಿನ್ಯಾಸ ಮಾಡಿಸಲಾಗಿದ್ದು, ಪ್ರತಿಮೆಯ ಎದೆ ಭಾಗದಲ್ಲಿ ವಿಕ್ಷಣಾ ಗ್ಯಾಲರಿ ಇದೆ. ಅಲ್ಲಿ 200 ಮಂದಿ ಏಕಕಾಲದಲ್ಲಿ ನಿಂತು ಸುತ್ತಲಿನ ಪ್ರದೇಶ ವೀಕ್ಷಿಸಬಹುದು..
C News TV Kannada News Online in cnewstv