Breaking News

ಯಡಿಯೂರಪ್ಪನವರೇ ಒಮ್ಮೆ ಆತ್ಮ ವಿಮರ್ಶೆ ಮಾಡಿಕೊಳ್ಳಿ – ಹೆಚ್.ಡಿ.ಕೆ.

ಶಿವಮೊಗ್ಗ ಲೋಕಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹೆಚ್.ಡಿ.ಕೆ.ಯಡಿಯೂರಪ್ಪನವರು ಮಾತನಾಡುವ ವೇಳೆ ನಾಲಿಗೆ ಮೇಲೆ ಹಿಡಿತ ಇರಬೇಕು ಎಂದರು.
ಯಡಿಯೂರಪ್ಪ ಎಲ್ಲೆಲ್ಲಿ ಏನೇನು ಮಾಡಿದ್ದಿರಿ ಎಂಬುದನ್ನು ಶಿಕಾರಿಪುರದ ಹುಚ್ಚುರಾಯ ಸ್ವಾಮಿ ದೇವಾಲಯದಲ್ಲಿ ಕುಳಿತು ಎಲ್ಲವನ್ನು ನೆನಪಿಸಿಕೊಳ್ಳಿ. ನಾನು ಅಧಿಕಾರಿಗಳನ್ನು ಜಾತಿ ಹೆಸರಿನಲ್ಲಿ ಗುರುತಿಸಿಲ್ಲ. ಬದಲಾಗಿ ಅವರ ಮೆರಿಟ್ ಆಧಾರದಲ್ಲಿ ವರ್ಗಾವಣೆ ಮಾಡಿದ್ದೇನೆ. ವರ್ಗಾವಣೆ ಬಗ್ಗೆ ಮಾತನಾಡುವ ಯಡಿಯೂರಪ್ಪ ನೀವು ಮೊದಲು ದಾಖಲೆ ಪರಿಶೀಲಿಸಿ ಎಂದರು.

ಇನ್ನೂ ನಿಮ್ಮ ರೀತಿಯಲ್ಲಿ ನಾನು ಅಧಿಕಾರ ನಡೆಸಿಲ್ಲ. ನಾನು ಗ್ರಾಮ ವಾಸ್ತವ್ಯ ಮಾಡುತ್ತಿದ್ದರೆ, ನೀವು ಬೆಂಗಳೂರಲ್ಲಿ ಕುಳಿತು ಏನು ಮಾಡುತ್ತಿದ್ರಿ ಎಂಬುದು ಗೊತ್ತಿದೆ. ಮಾತು ಮಾತಿಗೂ ಸರ್ಕಾರ ಟೇಕ್ ಆಫ್ ಆಗಿಲ್ಲ ಎನ್ನುವ ನೀವು ಒಮ್ಮೆ ನನಗೆ ಟೇಕ್ ಆಫ್ ಮಾಡುವುದು ಹೇಗೆ ಎಂಬುದು ಹೇಳಿಕೊಡಿ ಎಂದು ಟೀಕೆ ಮಾಡಿದರು. ನಿಮಗೆ ಹೇಗೆ ಸರ್ಕಾರ ನಡೆಸಬೇಕೆಂದು ಹೇಳಿಕೊಟ್ಟವರು ನಾವೇ ಆದರೆ, ಈಗ ನೀವು ನಮಗೆ ಸರ್ಕಾರ ನಡೆಸುವುದು ಹೇಳಿಕೊಡ್ತಿರಾ ಎಂದರು.ನಿಮ್ಮ ಜೀವನದಲ್ಲಿ ಮುಖ್ಯಮಂತ್ರಿಯಾಗಿ ಎಂದಿಗೂ ನೀವು ಸಾಲಮನ್ನಾ ಮಾಡಿಲ್ಲ ಎಂದು ಯಡಿಯೂರಪ್ಪ ವಿರುದ್ಧ ಟಾಂಗ್ ನೀಡಿದ್ದರು. ಬಿಜೆಪಿಯವರು ರಾಮನ ಹೆಸರೇಳಿಕೊಂಡು ಅಧಿಕಾರ ಹಿಡಿದಿದ್ದಾರೆ. 30 ವರ್ಷದಿಂದ ರಾಮ ಮಂದಿರ ಕಟ್ಟದೇ ಇರುವವರು ಈಗ ಕಟ್ಟುತ್ತಾರಾ ಎಂದು ಲೇವಡಿ ಮಾಡಿದರು.

ಚುನಾವಣಾ ಆಯೋಗದವರಿಗೆ ಮುಖ್ಯಮಂತ್ರಿಗಳು ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ ಎಂದು ಬಿಜೆಪಿಯವರು ದೂರು ನೀಡಿದ್ದಾರೆ. ಬಿಜೆಪಿ ನಾಯಕರು ಸುಳ್ಳು ಹೇಳುವುದರಲ್ಲಿ ಎತ್ತಿದ ಕೈ. ನಮ್ಮ ಈ ಸರ್ಕಾರ ಅಧಿಕಾರಕ್ಕೆ ಬಂದು 5 ತಿಂಗಳಾಗಿದೆ. ಬಜೆಟ್ ನಲ್ಲಿ ಘೋಷಣೆಯಾಗಿದೆ. ಸಾಲಮನ್ನಾ ಬಗ್ಗೆ ನಾನು ಜನರಿಗೆ ತಿಳಿಸಬೇಕಿದೆ.ಬಿಜೆಪಿಯವರು ಸಾರ್ವಜನಿಕರಿಗೆ ಸಂಶಯ ಬರುವ ರೀತಿಯಲ್ಲಿ ಅಪಪ್ರಚಾರ ನಡೆಸುತ್ತಿದ್ದಾರೆ. ಹೀಗಾಗಿ ನಾನು ಸಾರ್ವಜನಿಕರಿಗೆ ವಾಸ್ತವಾಂಶ ತಿಳಿಸುವ ಅವಶ್ಯಕತೆ ಇದೆ. ನೀರಾವರಿ ಬಗ್ಗೆ ಜನರು ಕೇಳಿದಾಗ ನಾನು ಅವರಿಗೆ ಹೇಳಿದು ಅಷ್ಟು. ಅದು ನೀತಿ ಸಂಹಿತೆ ಉಲ್ಲಂಘನೆಯೇ ಎಂದರು ಹಾಗೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಬಾರಿ ಚುನಾವಣೆ ಸಂದರ್ಭದಲ್ಲಿ, ಬಿಜೆಪಿ ಗೆಲ್ಲುವ, ಕ್ಷೇತ್ರಗಳನ್ನು ದತ್ತು ತೆಗೆದುಕೊಳ್ಳುತ್ತೆನೆ ಎಂದಿದ್ದರು.
ಹಾಗಾದರೆ ಅದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

Leave a Reply

Your email address will not be published. Required fields are marked *

*