ಶಿವಮೊಗ್ಗ: ಹಾಲಿವುಡ್ ಚಿತ್ರರಂಗದಲ್ಲಿ ಮಲೆನಾಡಿನ ಪ್ರತಿಭೆ ಪೂರ್ವ ಹೊಸ ಸಂಚಲನ ಮೂಡಿಸುತ್ತಿದ್ದಾರೆ. ಡೈರಿ ಫ್ರೆಶ್ ಮಾಲೀಕರಾದ ಶಿವಮೊಗ್ಗದ ಗೋಪಾಳದ ಶಿವಕುಮಾರ್ ಹಾಗೂ ವೀಣಾ ದಂಪತಿಯ ಪುತ್ರರಾಗಿರುವ ಪೂರ್ವ ಪ್ರಸ್ತುತ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾರೆ. ಲಾಸ್ ಎಂಜಲೀಸ್ ನಲ್ಲಿ ಎಂಎಫ್ ಎ ಇನ್ ಮಾಸ್ಟರ್ ಕೋರ್ಸ್ ಮುಗಿಸಿರುವ ಪೂರ್ವ ಇದೀಗ ಹಾಲಿವುಡ್ ನ ಹೊಸ ಚಿತ್ರದ ನಾಯಕ ನಟರಾಗಿ ನಟಿಸುತ್ತಿದ್ದಾರೆ. ಆರಂಭದ ದಿನಗಳಿಂದಲೂ ಹಾಲಿವುಡ್ ಚಿತ್ರರಂಗದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದ ಪೂರ್ವ ಲಾಸ್ ಎಂಜಲೀಸ್ ನಲ್ಲಿ ಎಂಎಫ್ ಎ ಕೋರ್ಸ್ ಮಾಡಿ ಈಗಾಗಲೇ ಹಾಲಿವುಡ್ ...
Read More »ಶಿವಮೊಗ್ಗ
ಜನರು ಇಟ್ಟ ನಂಬಿಕೆ ಗೆ ನಾವು ಮೋಸ ಮಾಡಿಲ್ಲ, ಉತ್ತಮ ಆಡಳಿತ ನಡೆಸಿದ್ದೇವೆ- ಎಸ್ ಎನ್ ಚನ್ನಬಸಪ್ಪ
ಶಿವಮೊಗ್ಗ: ಇಂದು ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದರು ಮಹಾನಗರ ಪಾಲಿಕೆ ಉಪಮೇಯರ್ ಎಸ್ ಎನ್ ಚನ್ನಬಸಪ್ಪ,, ಮಹಾನಗರಪಾಲಿಕೆಯಲ್ಲಿ ಕಳೆದ ಒಂದು ವರ್ಷದಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಆಡಳಿತ ಮಂಡಳಿ ಉತ್ತಮ ಕೆಲಸ ಮಾಡುವ ಮೂಲಕ ನಾಗರಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಶಿವಮೊಗ್ಗ ನಗರದಲ್ಲಿ ಹಲವು ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇವುಗಳನ್ನು ಮಾಡುವ ಸಂದರ್ಭದಲ್ಲಿ ನಾಗರಿಕರಿಗೆ ಒಂದಿಷ್ಟು ತೊಂದರೆಯಾಗಿರುವುದು ನಿಜ. ಆದರೆ ಅಭಿವೃದಿಯಾಗಬೇಕಾದರೆ ಸಣ್ಣಪುಟ್ಟ ತೊಂದರೆಗಳು ಸಹಜವಾಗಿರುತ್ತದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗುತ್ತವೆ. ಈಗಾಗಲೇ ಅಭಿವೃದಿಯ ಉತ್ತಮ ಹೆಜ್ಜೆ ಇಟ್ಟಿದ್ದೇವೆ. ಮುಂದಿನ ಎರಡು ವರ್ಷಗಳ ಅವಧಿ ಯಲ್ಲಿ ...
Read More »ಗೋಡೆಗೆ ಬಾಳೆಹಣ್ಣು ಅಂಟಿಸಿ ‘ಆರ್ಟ್’ ಅಂದ್ರು, ₹85 ಲಕ್ಷ ಕೊಟ್ಟು ತಗೊಂಡುಹೋದ್ರು..!
ಮಿಯಾಮಿ: ಖಾಲಿ ಗೋಡೆಯೊಂದರ ಮೇಲೆ ಟೇಪ್ ಹಾಕಿ ಬಾಳೆ ಹಣ್ಣು ಅಂಟಿಸಿದ್ದಾರೆ. ಆ ಗೋಡೆ ಮೇಲೆ ಒಂದು ಬಾಳೆ ಹಣ್ಣು, ಅದರ ಮೇಲೊಂದು ಟೇಪ್ ಅಂಟಿಸಿರೋದು ಬಿಟ್ರೆ ಬೇರೇನೂ ಇಲ್ಲ. ಹಿಂಗೆ ಬಾಳೆಹಣ್ಣು ಅಂಟಿಸಿದ್ದನ್ನ ನೋಡಿದ ಜನ ವಾವ್, ಆಸಮ್..ಬ್ರಿಲಿಯಂಟ್..ಮಾರ್ವಲಸ್ ಅಂತ ಇರೋಬರೋ ಪದಗಳನ್ನ ಬಳಸಿ ಇದೆಂಥಾ ಅದ್ಭುತ ಕಲೆ ಅಂತ ಹೊಗಳಿದ್ದಾರೆ. ಅಷ್ಟೇ ಯಾಕೆ, ಇದು ನನಗೇ ಬೇಕು ಅಂತ ಪೇಂಟಿಂಗ್ಗಳನ್ನ ಕೆಲಕ್ಟ್ ಮಾಡಿ ಇಡೋ ವ್ಯಕ್ತಿಯೊಬ್ಬ ಬರೋಬ್ಬರಿ 85 ಲಕ್ಷ ಕೊಟ್ಟು ಆ ಬಾಳೆಹಣ್ಣು ಮತ್ತು ಡಕ್ಟ್ ಟೇಪ್ ತಗೊಂಡು ...
Read More »ತುಂಗಾ ನದಿಗೆ ಹಾರಿ ಆಹಾರ ನಿರೀಕ್ಷಕ ಆತ್ಮಹತ್ಯೆ.
ಶಿವಮೊಗ್ಗ : ಹೊಸನಗರ ತಾಲೂಕು ಕಚೇರಿಯಲ್ಲಿ ಆಹಾರ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಐ.ಡಿ.ದತ್ತಾತ್ರೇಯ ಶನಿವಾರ ಬೆಳಿಗ್ಗೆ ಮಂಡಗದ್ದೆ ಸಮೀಪದ ಮುಡುಬಾ ಬಳಿ ತುಂಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ಡಾರೆ. ಘಟನೆ ಎನ್.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಫುಡ್ ಇನ್ಸಪೆಕ್ಟರ್ ದತ್ತಾತ್ರೇಯಾ ಈ ಮುನ್ನ ತಾಲೂಕಿನ ನಗರದಲ್ಲಿ ವಿಎ ಆಗಿ ಆರ್.ಐ ಆಗಿ 20 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು. ಇತ್ತೀಚೆಗಷ್ಟೆ ಆಹಾರ ನಿರೀಕ್ಷಕರಾಗಿ ಬಡ್ತಿ ಹೊಂದಿದ್ದರು. ನಿವೃತ್ತಿಯ ಅಂಚಿನಲ್ಲಿದ್ದ ದತ್ತಾತ್ರೇಯರವರು ಪತ್ನಿ, ಹಾಗು ನಾಲ್ವರು ...
Read More »ನಕಲಿ ಬಂಗಾರದ ನಾಣ್ಯ ನೀಡಿ ವಂಚನೆ : ಇಬ್ಬರ ಬಂಧನ.
ಸಾಗರ : ಬಂಗಾರದ ನಾಣ್ಯಗಳನ್ನು ನೀಡುವುದಾಗಿ ನಂಬಿಸಿ ನಕಲಿ ನಾಣ್ಯಗಳನ್ನು ನೀಡಿದ ಆರೋಪದ ಮೇಲೆ ಇಬ್ಬರನ್ನು ಸಾಗರ ಗ್ರಾಮಾಂತರ ಪೋಲೀಸರು ಬಂಧಿಸಿದ್ದಾರೆ. ಹೊಸದುರ್ಗದ ಸತೀಶ್ (28),ಕಡೂರಿನ ಮಂಜು (25) ಬಂದಿತ ಆರೋಪಿಗಳು. ನಿತ್ಯಾನಂದ ಎಂಬುವವರಿಗೆ ಬಂಗಾರದ ನಾಣ್ಯ ನೀಡುವುದಾಗಿ 1.30.000 ರೂ.ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಇಂದು ಬೆಳಗ್ಗೆ ತ್ಯಾಗರ್ತಿ ಕ್ರಾಸ್ ಬಳಿ ಇಬ್ಬರನ್ನು ವಶಕ್ಕೆ ಪಡೆದಿದ್ದು,ಬಂದಿತರಿಂದ 1ಲಕ್ಷ ನಗದು ಹಣ,3 ಲಕ್ಷ ಬೆಲೆಯ ಟಾಟಾ ಏಸ್ ವಾಹನ ಹಾಗೂ ನಕಲಿ ಬಂಗಾರವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಶಾಂತರಾಜು, ಹೆಚ್ಚುವರಿ ...
Read More »ಮಾತೃ ವಂದನಾ ಯೋಜನೆ ಪ್ರಯೋಜನ ಎಲ್ಲಾ ಗರ್ಭಿಣಿ, ಬಾಣಂತಿಯರು ಪಡೆದುಕೊಳ್ಳಬೇಕು: ಎಂ.ಎಲ್.ವೈಶಾಲಿ
ಶಿವಮೊಗ್ಗ: ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ಲಾಭವನ್ನು ಎಲ್ಲಾ ಗರ್ಭಿಣಿಯರು ಹಾಗೂ ಬಾಣಂತಿಯರು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಅವರು ತಿಳಿಸಿದರು. ಅವರು ಸೋಮವಾರ ಶರಾವತಿ ನಗರದ ಅಂಗನವಾಡಿಯಲ್ಲಿ ಪ್ರಧಾನಮಂತ್ರಿ ಮಾತೃ ವಂದನಾ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು. ಮಗುವಿನ ಜನನ ಪೂರ್ವ ಹಾಗೂ ನಂತರದ ಆರೈಕೆಗಾಗಿ ಈ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಗರ್ಭಿಣಿ/ಬಾಣಂತಿ ಮಹಿಳೆಯರಿಗೆ 5ಸಾವಿರ ರೂ.ಗಳನ್ನು ಮೂರು ಕಂತುಗಳಲ್ಲಿ ನೇರವಾಗಿ ಅವರ ಖಾತೆಗೆ ವರ್ಗಾವಣೆ ಮಾಡಲಾಗುವುದು. ಈ ಯೋಜನೆ ಮೊದಲ ಜೀವಂತ ಹೆರಿಗೆಗೆ ಮಾತ್ರ ಸೀಮಿತವಾಗಿದೆ. ...
Read More »ಅತ್ಯಾಚಾರಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಿ – ಶಿವಮೊಗ್ಗ ಜಿಲ್ಲಾ NSUI
ಶಿವಮೊಗ್ಗ: ಹೈದರಾಬಾದ್ ನಲ್ಲಿ ಪಶುವೈದ್ಯೆ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ಎನ್ ಎಸ್ ಯುಐ ಕಾರ್ಯಕರ್ತರು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಹೈದರಾಬಾದ್ ನ ಕೊಲ್ಲಾಪುರದಲ್ಲಿ ನಡೆದಿರುವ ಈ ಘಟನೆ ನಾಗರೀಕಸಮಾಜ ತಲೆತಗ್ಗಿಸುವಂತ ರಕ್ಕಸ ಕೃತ್ಯವಾಗಿದೆ. ಒಬ್ಬ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಆಕೆಯನ್ನು ಜೀವಂತವಾಗಿ ಸುಟ್ಟು ಹಾಕಿರುವುದು ನೀಚ ಘಟನೆಯಾಗಿದೆ. ಇಂಥ ನೀಚ ಕೃತ್ಯ ತಡೆಯುವಲ್ಲಿ ತೆಲಂಗಾಣ ಸರ್ಕಾರ ವಿಫಲವಾಗಿದೆ. ಇದಲ್ಲದೆ ರಾಜಸ್ಥಾನದ ಜೈಪುರದಲ್ಲಿ 15 ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಿದೆ. ಒಟ್ಟಾರೆ ದೇಶದಲ್ಲಿ ...
Read More »ಪುರದಾಳ್ ನಲ್ಲಿ ವಿಚಿತ್ರ ಕರು ಜನನ
ಮನುಷ್ಯ ಹಾಗೂ ಪ್ರಾಣಿಗಳು ಚಿತ್ರವಿಚಿತ್ರವಾಗಿ ಹುಟ್ಟಿರುವ ಸುದ್ದಿಗಳನ್ನು ಆಗಾಗ ಕೇಳಿರುತ್ತೇವೆ. ಅಂಥದೊಂದು ಘಟನೆ ಶಿವಮೊಗ್ಗ ತಾಲ್ಲೂಕಿನ ಪುರದಾಳು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬಾಬು ಎಂಬುವರಗೆ ಸೇರಿದ ಹಸುವೊಂದು ವಿಚಿತ್ರ ಕರುವಿಗೆ ಜನ್ಮ ನೀಡಿದೆ. ಕರುವಿಗೆ ಎರಡು ಕಣ್ಣು ಗಳು ಒಂದೇ ಕಡೆ ಇವೆ, ಈ ಕರುವಿಗೆ ಮೂಗು ಕೂಡ ಇಲ್ಲ, ಅದ್ದುರಿಂದ ಆ ಕರುವಿನ ನಾಲಿಗೆಯು ಹೊರಬಂದಿದೆ. ಇದರಿಂದ ಈ ಕರು ವಿಕಾರವಾಗಿ ಕಾಣುತ್ತಿದೆ. ಅದೃಷ್ಟವಶಾತ್ ಹಸು ಮತ್ತು ಕರು ಎರಡೂ ಆರೋಗ್ಯವಾಗಿವೆ. ಈ ವಿಚಿತ್ರ ಕರು ಹಾಗೂ ಹಸುವನ್ನು ನೋಡಲು ಸುತ್ತಮುತ್ತಲ ...
Read More »ISAFF India ಗೆ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಸ್ಟೆಪ್ ಹೊಲ್ಡರ್ಸ್ ನೃತ್ಯ ಸಂಸ್ಥೆಯ 43 ಪ್ರತಿಭೆಗಳು.
ಹೈದರಾಬಾದ್ ನಲ್ಲಿ ನಡೆಯುತ್ತಿರುವ ಇಂಡಿಯನ್ ಸ್ಪೋರ್ಟ್ಸ್ ಏರೋಬಿಕ್ಸ್ ಅಂಡ್ ಫಿಟ್ನೆಸ್ ಫೆಡರೇಶನ್ ಅವರು ನಡೆಸುತ್ತಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಸ್ಟೆಪ್ ಹೊಲ್ಡರ್ಸ್ ನೃತ್ಯ ಸಂಸ್ಥೆಯ 43 ಮಕ್ಕಳು ಕರ್ನಾಟಕವನ್ನ ಪ್ರತಿನಿಧಿಸಲಿದ್ದಾರೆ. ನವೆಂಬರ್ 29 ರಿಂದ ಡಿಸೆಂಬರ್ 4ರ ವರೆಗೆ ಹೈದರಾಬಾದ್ ನಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ ಅಂಡರ್ 10, 12, 14, 19 ವಯೋಮಿತಿಯ ನಾಲ್ಕು ವಿಭಾಗದಲ್ಲಿ ಶಿವಮೊಗ್ಗದ ಸ್ಪರ್ಧಿಗಳು ನೃತ್ಯ ಪ್ರದರ್ಶನ ನೀಡಲಿದ್ದಾರೆ. ISAFF ನಾ ಕಾರ್ಯದರ್ಶಿ ಶುಭ ಹಾಗೂ ಜಿಲ್ಲಾ ಕಾರ್ಯದರ್ಶಿ ಅರುಣ್ ರಾಜ್ ಶೆಟ್ಟಿ ಸಾರಥ್ಯದಲ್ಲಿ ತಂಡ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದೆ. ...
Read More »ನೆರೆ ಸಂತ್ರಸ್ಥರ ಪರಿಹಾರದಲ್ಲೂ ತಾರತಮ್ಯ – ಹೆಚ್.ಎಸ್.ಸುಂದರೇಶ್
ಶಿವಮೊಗ್ಗ : ರಾಜ್ಯ ಸರ್ಕಾರ ನೆರೆ ಸಂತ್ರಸ್ಥರಿಗೆ ಪರಿಹಾರ ನೀಡುವಲ್ಲಿಯೂ ತಾರತಮ್ಯ ಮಾಡುತ್ತಿದೆ ಎಂದು ಕಾಂಗ್ರೆಸ್ ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ದೂರಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗೋಷ್ಡಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ನೆರೆ ಪರಿಸ್ಥಿತಿ ಉಂಟಾಗಿ ಕೆಲ ತಿಂಗಳು ಕಳೆದಿವೆ. ನೆರೆಯಿಂದಾಗಿ ಹಲವು ಕುಟುಂಬಗಳು ಮನೆ, ಮಠ ಕಳೆದುಕೊಂಡು ಬೀದಿ ಪಾಲಾಗಿದ್ದರು. ಸಂತ್ರಸ್ಥರಿಗೆ ಪರಿಹಾರ ಘೋಷಣೆ ಮಾಡಿದ್ದ ರಾಜ್ಯ ಸರ್ಕಾರ, ಈವರೆಗೂ ಸಂತ್ರಸ್ತರಿಗೆ ಸವಲತ್ತು ಕೊಟ್ಟಿಲ್ಲ. ಕೆಲವರಿಗೆ 10, 25, 35 ಸಾವಿರ ಕೊಟ್ಟಿದ್ದಾರೆ. ಸ್ವಪಕ್ಷೀಯರಿಗೆ 35 ಸಾವಿರ ಕೊಟ್ಟಿದ್ದು, ಅವರ ಪಕ್ಷದ ಕಾರ್ಯಕರ್ತರ ಮನೆ ...
Read More »
C News TV Kannada News Online in cnewstv