ಶಿವಮೊಗ್ಗ: ಹಾಲಿವುಡ್ ಚಿತ್ರರಂಗದಲ್ಲಿ ಮಲೆನಾಡಿನ ಪ್ರತಿಭೆ ಪೂರ್ವ ಹೊಸ ಸಂಚಲನ ಮೂಡಿಸುತ್ತಿದ್ದಾರೆ. ಡೈರಿ ಫ್ರೆಶ್ ಮಾಲೀಕರಾದ ಶಿವಮೊಗ್ಗದ ಗೋಪಾಳದ ಶಿವಕುಮಾರ್ ಹಾಗೂ ವೀಣಾ ದಂಪತಿಯ ಪುತ್ರರಾಗಿರುವ ಪೂರ್ವ ಪ್ರಸ್ತುತ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾರೆ. ಲಾಸ್ ಎಂಜಲೀಸ್ ನಲ್ಲಿ ಎಂಎಫ್ ಎ ಇನ್ ಮಾಸ್ಟರ್ ಕೋರ್ಸ್ ಮುಗಿಸಿರುವ ಪೂರ್ವ ಇದೀಗ ಹಾಲಿವುಡ್ ನ ಹೊಸ ಚಿತ್ರದ ನಾಯಕ ನಟರಾಗಿ ನಟಿಸುತ್ತಿದ್ದಾರೆ.
ಆರಂಭದ ದಿನಗಳಿಂದಲೂ ಹಾಲಿವುಡ್ ಚಿತ್ರರಂಗದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದ ಪೂರ್ವ ಲಾಸ್ ಎಂಜಲೀಸ್ ನಲ್ಲಿ ಎಂಎಫ್ ಎ ಕೋರ್ಸ್ ಮಾಡಿ ಈಗಾಗಲೇ ಹಾಲಿವುಡ್ ನಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ *ದ ಬಿಗ್ ರಾಂಟ್* ಚಿತ್ರದಲ್ಲಿ ಚಿತ್ರದಲ್ಲಿ ನಾಯಕ ನಟರಾಗಿ ನಟಿಸುತ್ತಿರುವುದು ಮಲೆನಾಡಿನ ಹೆಮ್ಮೆ. ಈಗಾಗಲೇ ದ ಬಿಗ್ ರಾಂಟ್ ಚಿತ್ರದ ಶೇಕಡಾ 70 ರಷ್ಟು ಚಿತ್ರೀಕರಣ ಮುಗಿದಿದ್ದು ಮುಂದಿನ ತಿಂಗಳು ಲಾಸ್ ಎಂಜಲೀಸ್ ನಲ್ಲಿ ನಡೆಯಲಿರುವ ಫಿಲ್ಮಂ ಫೆಸ್ಟಿವಲ್ ನಲ್ಲಿ ಈ ಚಿತ್ರ ಬಿಡುಗಡೆಗೊಳ್ಳಲಿದೆ.
ಹಾಲಿವುಡ್ ಚಿತ್ರರಂಗದಲ್ಲಿ ನಾಯಕ ನಟನಾಗಿ ಪ್ರತಿಭೆ ಹೊರಹಾಕಿರುವ ಮೊದಲ ಮಲೆನಾಡಿಗ ಎಂಬ ಕೀರ್ತಿಗೂ ಪೂರ್ವ ಪಾತ್ರರಾಗಿದ್ದಾರೆ. ಈಗಾಗಲೇ ಹಾಲಿವುಡ್ ನ ಹಲವು ಕಿರುಚಿತ್ರಗಳು, ಜಾಹಿರಾತುಗಳಲ್ಲಿ ಅಭಿನಯಿಸಿರುವ ಅನುಭವ ಹೊಂದಿರುವ ಪೂರ್ವ ಇದೀಗ ಹಾಲಿವುಡ್ ಹೀರೋ ಆಗಿ ಅಭಿನಯಿಸುತ್ತಿದ್ದಾರೆ.
Recent Comments