Breaking News

ಅತ್ಯಾಚಾರಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಿ – ಶಿವಮೊಗ್ಗ ಜಿಲ್ಲಾ NSUI

ಶಿವಮೊಗ್ಗ: ಹೈದರಾಬಾದ್ ನಲ್ಲಿ ಪಶುವೈದ್ಯೆ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ಎನ್ ಎಸ್ ಯುಐ ಕಾರ್ಯಕರ್ತರು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಹೈದರಾಬಾದ್ ನ ಕೊಲ್ಲಾಪುರದಲ್ಲಿ‌ ನಡೆದಿರುವ ಈ ಘಟನೆ ನಾಗರೀಕ‌ಸಮಾಜ ತಲೆತಗ್ಗಿಸುವಂತ ರಕ್ಕಸ ಕೃತ್ಯವಾಗಿದೆ. ಒಬ್ಬ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಆಕೆಯನ್ನು ಜೀವಂತವಾಗಿ ಸುಟ್ಟು ಹಾಕಿರುವುದು ನೀಚ ಘಟನೆಯಾಗಿದೆ. ಇಂಥ ನೀಚ ಕೃತ್ಯ ತಡೆಯುವಲ್ಲಿ ತೆಲಂಗಾಣ ಸರ್ಕಾರ ವಿಫಲವಾಗಿದೆ. ಇದಲ್ಲದೆ ರಾಜಸ್ಥಾನದ ಜೈಪುರದಲ್ಲಿ 15 ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಿದೆ. ಒಟ್ಟಾರೆ ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದ ಸ್ಥಿತಿ‌ನಿರ್ಮಾಣವಾಗಿ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಜೊತೆಗೆ ಮಹಿಳಾ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

 

Leave a Reply

Your email address will not be published. Required fields are marked *

*