Breaking News

ಗೋಡೆಗೆ ಬಾಳೆಹಣ್ಣು ಅಂಟಿಸಿ ‘ಆರ್ಟ್​’ ಅಂದ್ರು, ₹85 ಲಕ್ಷ ಕೊಟ್ಟು ತಗೊಂಡುಹೋದ್ರು..!

 

ಮಿಯಾಮಿ: ಖಾಲಿ ಗೋಡೆಯೊಂದರ ಮೇಲೆ ಟೇಪ್ ಹಾಕಿ ಬಾಳೆ ಹಣ್ಣು ಅಂಟಿಸಿದ್ದಾರೆ. ಆ ಗೋಡೆ ಮೇಲೆ ಒಂದು ಬಾಳೆ ಹಣ್ಣು, ಅದರ ಮೇಲೊಂದು ಟೇಪ್ ಅಂಟಿಸಿರೋದು ಬಿಟ್ರೆ ಬೇರೇನೂ ಇಲ್ಲ. ಹಿಂಗೆ ಬಾಳೆಹಣ್ಣು ಅಂಟಿಸಿದ್ದನ್ನ ನೋಡಿದ ಜನ ವಾವ್, ಆಸಮ್..ಬ್ರಿಲಿಯಂಟ್..ಮಾರ್ವಲಸ್ ಅಂತ ಇರೋಬರೋ ಪದಗಳನ್ನ ಬಳಸಿ ಇದೆಂಥಾ ಅದ್ಭುತ ಕಲೆ ಅಂತ ಹೊಗಳಿದ್ದಾರೆ. ಅಷ್ಟೇ ಯಾಕೆ, ಇದು ನನಗೇ ಬೇಕು ಅಂತ ಪೇಂಟಿಂಗ್​ಗಳನ್ನ ಕೆಲಕ್ಟ್ ಮಾಡಿ ಇಡೋ ವ್ಯಕ್ತಿಯೊಬ್ಬ ಬರೋಬ್ಬರಿ 85 ಲಕ್ಷ ಕೊಟ್ಟು ಆ ಬಾಳೆಹಣ್ಣು ಮತ್ತು ಡಕ್ಟ್​ ಟೇಪ್​​ ತಗೊಂಡು ಹೋಗಿದ್ದಾನೆ.

ಅರೆ, ಇದು ನಿಜಾನ ಅನ್ನೋ ಡೌಟೇ ಬೇಡ. ಇಟಲಿಯ ಕಲಾವಿದನೊಬ್ಬ ಇಂಥ ಕಲೆ ರಚಿಸಿ 85 ಲಕ್ಷಕ್ಕೆ ಮಾರಾಟ ಮಾಡಿದ್ದಾನೆ. ಅವನ ಹೆಸರು ಮೌರಿಜಿಯೊ ಕ್ಯಾಟೆಲನ್. ಮಿಯಾಮಿ ಬೀಚ್​ನಲ್ಲಿ ಆರ್ಟ್ ಬೆಸಲ್ ಅನ್ನೋ ಕಲಾ ಪ್ರದರ್ಶನದಲ್ಲಿ ಮೌರಿಜಿಯೊ ಕ್ಯಾಟೆಲನ್ ಗೋಡೆಗೆ ಬಾಳೆಹಣ್ಣು ಅಂಟಿಸಿ, 85 ಲಕ್ಷಕ್ಕೆ ಮಾರಿ ಈಗ ಭಾರೀ ಫೇಮಸ್ ಆಗ್ತಿದ್ದಾನೆ.

ಇದಕ್ಕೂ ಮೊದಲೂ ಕೂಡ ಮೌರಿಜಿಯೋ ಇಂಥದ್ದೇ ಕಂಚಿನ ಬಾಳೆಹಣ್ಣನ್ನು ಗೋಡೆಗೆ ಅಂಟಿಸಿ ತನ್ನ ಕಲಾಪ್ರದರ್ಶನ ಮಾಡ್ತಿದ್ದನಂತೆ. ಇದೀಗ ಒರಿಜಿನಲ್ ಬಾಳೆಹಣ್ಣನ್ನೇ ಹೀಗೆ ಗೋಡೆಗೆ ಅಂಟಿಸಿ ಮಾರಾಟ ಮಾಡಿದ್ದಾನೆ. ಇದನ್ನ ಸೋಷಿಯಲ್ ಮೀಡಿಯಾಗಳಲ್ಲಿ ನೋಡಿ ಗಾಬರಿಯಾದ ಜನರು ತಾವೂ ಗೋಡೆಗಳ ಮೇಲೆ ಎಂತೆಂಥದೋ ಹಣ್ಣನ್ನ ಟೇಪ್​ನಿಂದ ಅಂಟಿಸಿ ಸೆಲ್ಫಿ ತಗೊಳೋಕೆ ಶುರುಮಾಡಿದ್ದಾರೆ..

Leave a Reply

Your email address will not be published. Required fields are marked *

*