Breaking News

ನಕಲಿ ಬಂಗಾರದ ನಾಣ್ಯ ನೀಡಿ ವಂಚನೆ : ಇಬ್ಬರ ಬಂಧನ.

 

ಸಾಗರ : ಬಂಗಾರದ ನಾಣ್ಯಗಳನ್ನು ನೀಡುವುದಾಗಿ ನಂಬಿಸಿ ನಕಲಿ ನಾಣ್ಯಗಳನ್ನು ನೀಡಿದ ಆರೋಪದ ಮೇಲೆ ಇಬ್ಬರನ್ನು ಸಾಗರ ಗ್ರಾಮಾಂತರ ಪೋಲೀಸರು ಬಂಧಿಸಿದ್ದಾರೆ.
ಹೊಸದುರ್ಗದ ಸತೀಶ್ (28),ಕಡೂರಿನ ಮಂಜು (25) ಬಂದಿತ ಆರೋಪಿಗಳು. ನಿತ್ಯಾನಂದ ಎಂಬುವವರಿಗೆ ಬಂಗಾರದ ನಾಣ್ಯ ನೀಡುವುದಾಗಿ 1.30.000 ರೂ.ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಇಂದು ಬೆಳಗ್ಗೆ ತ್ಯಾಗರ್ತಿ ಕ್ರಾಸ್ ಬಳಿ ಇಬ್ಬರನ್ನು ವಶಕ್ಕೆ ಪಡೆದಿದ್ದು,ಬಂದಿತರಿಂದ 1ಲಕ್ಷ ನಗದು ಹಣ,3 ಲಕ್ಷ ಬೆಲೆಯ ಟಾಟಾ ಏಸ್ ವಾಹನ ಹಾಗೂ ನಕಲಿ ಬಂಗಾರವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಶಾಂತರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಚ್.ಟಿ ಶೇಖರ್ ಇವರ ಮಾರ್ಗದರ್ಶನದಲ್ಲಿ,ಸಾಗರ ಸಹಾಯಕ ಪೊಲೀಸ್ ಅಧೀಕ್ಷಕ ಯತೀಶ್ ಸೂಚನೆಯಂತೆ ಒಂದು ವಿಶೇಷ ತಂಡವನ್ನು ರಚಿಸಲಾಗಿತ್ತು.
ಕಾರ್ಯಾಚರಣೆಯಲ್ಲಿ ಸಾಗರ ಗ್ರಾಮಾಂತರ ಸರ್ಕಲ್ ಇನ್ಸ್ ಪೆಕ್ಟರ್ ಸುನೀಲ್ ಕುಮಾರ್,ಪಿಎಸ್ಐ ಭರತ್ ಕುಮಾರ್,ಸುಜಾತ,ಪ್ರೋಬೇಷನರಿ ಪಿಎಸ್ಐ ಸಂತೋಷ್ ಸಿಬ್ಬಂದಿಗಳಾದ ಫೈರೋಜ್ ಅಹಮದ್,ಪರಶುರಾಮ್,ಗಿರೀಶ್,ಶಿವನಗೌಡ,ಸನಾವುಲ್ಲಾ ಪಾಲ್ಗೊಂಡಿದ್ದರು..

ವರದಿ: ಇಮ್ರಾನ್ ಸಾಗರ್

Leave a Reply

Your email address will not be published. Required fields are marked *

*