ಶಿವಮೊಗ್ಗ: ಇಂದು ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದರು ಮಹಾನಗರ ಪಾಲಿಕೆ ಉಪಮೇಯರ್ ಎಸ್ ಎನ್ ಚನ್ನಬಸಪ್ಪ,, ಮಹಾನಗರಪಾಲಿಕೆಯಲ್ಲಿ
ಕಳೆದ ಒಂದು ವರ್ಷದಿಂದ ಆಡಳಿತ
ನಡೆಸುತ್ತಿರುವ ಬಿಜೆಪಿ ಆಡಳಿತ ಮಂಡಳಿ
ಉತ್ತಮ ಕೆಲಸ ಮಾಡುವ ಮೂಲಕ
ನಾಗರಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಶಿವಮೊಗ್ಗ ನಗರದಲ್ಲಿ ಹಲವು ಅಭಿವೃದ್ದಿ
ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇವುಗಳನ್ನು
ಮಾಡುವ ಸಂದರ್ಭದಲ್ಲಿ ನಾಗರಿಕರಿಗೆ ಒಂದಿಷ್ಟು
ತೊಂದರೆಯಾಗಿರುವುದು ನಿಜ. ಆದರೆ ಅಭಿವೃದಿಯಾಗಬೇಕಾದರೆ ಸಣ್ಣಪುಟ್ಟ ತೊಂದರೆಗಳು
ಸಹಜವಾಗಿರುತ್ತದೆ. ಮುಂದಿನ ದಿನಗಳಲ್ಲಿ ಎಲ್ಲವೂ
ಸರಿಯಾಗುತ್ತವೆ. ಈಗಾಗಲೇ ಅಭಿವೃದಿಯ ಉತ್ತಮ ಹೆಜ್ಜೆ ಇಟ್ಟಿದ್ದೇವೆ. ಮುಂದಿನ ಎರಡು ವರ್ಷಗಳ ಅವಧಿ
ಯಲ್ಲಿ ಶಿವಮೊಗ್ಗ ನಗರವನ್ನು ರಾಜ್ಯದಲ್ಲಿಯೇ
ಮಾದರಿ ನಗರವನ್ನಾಗಿ ಮಾಡಲಾಗುವುದು.ಸಂಪೂರ್ಣ ಹದಗೆಟ್ಟಿದ ಕುಡಿಯುವ ನೀರಿನ ಸಮಸ್ಯೆ
ಒಂದು ಸುಸ್ಥಿತಿಗೆ ಬಂದಿದೆ. ಶೀಘ್ರದಲ್ಲಿಯೇ 24
ಗಂಟೆಗಳ ಕಾಲ ನೀರು ಪೂರೈಕೆ ವ್ಯವಸ್ಥೆ
ಜಾರಿಯಾಗಲಿದೆ ಎಂದರು..
ಬಿಜೆಪಿಯ ಎಲ್ಲ ಪಾಲಿಕೆ ಸದಸ್ಯರು ಜಿಲ್ಲಾ
ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪನವರು ಮತ್ತು
ಜಿಲ್ಲೆಯ ಪಕ್ಷದ ಎಲ್ಲ ನಾಯಕರು ನಮಗೆ ಸಹಕಾರ
ಹಾಗೂ ಮಾರ್ಗದರ್ಶನ ನೀಡಿದ್ದಾರೆ. ಜನರ ನಂಬಿಕೆ
ಉಳಿಸಿಕೊಂಡ ಸಮಾಧಾನ ನಮಗಿದೆ. ಅಭಿವೃದ್ಧಿಗೆ ನಾವು ಯಾವಾಗಲೂ ಬದ್ಧರು.
ಉದ್ಯಾನವನ ನಿರ್ಮಾಣ, ದುರಸ್ತಿ, ಆಟಿಕೆಗಳು,
ಬಡವರಿಗೆ ನಿವೇಶನ ನೀಡುವುದು, ನೆನೆಗುದಿಗೆ ಬಿದ್ದಿದ್ದ
ಸಮಸ್ಯೆಗಳತ್ತ ಗಮನಹರಿಸುವುದು, ಕುಡಿಯುವ
ನೀರಿನ ಯೋಜನೆ, ಪಾಲಿಕೆಯ ವ್ಯಾಪ್ತಿಗೆ ಸೇರಿದ
ಸುಮಾರು 21 ಹಳ್ಳಿಗಳಲ್ಲಿ ಮೂಲಭೂತ ಸೌಲಭ್ಯ,
ಬೀದಿ ದೀಪ ನಿರ್ವಹಣೆ, ಸರ್ಕಾರಿ ಶಾಲೆಗಳ
ಅಭಿವೃದ್ಧಿ ಹೀಗೆ ಎಲ್ಲ ರೀತಿಯ ಅಭಿವೃದ್ಧಿಗಾಗಿ
ಪಾಲಿಕೆ ಗಮನಹರಿಸುತ್ತಲೇ ಇದೆ ಎಂದರು.
ಅತಿವೃಷ್ಟಿ ಆದ ಸಂದರ್ಭದಲ್ಲಿ ಪಕ್ಷಭೇದ ಮರೆತು
ಸಂಘ ಸಂಸ್ಥೆಗಳ ನೆರವಿನೊಂದಿಗೆ, ಅಧಿಕಾರಿಗಳ
ಸಹಾಯದಿಂದ ಅತ್ಯಂತ ಮಾನವೀಯತೆಯಿಂದ
ಪರಿಸ್ಥಿತಿಯನ್ನು ನಿಭಾಯಿಸಲಾಗಿದೆ. ಭಾಗಶಃ ಮನೆ
ಬಿದ್ದವರಿಗೆ 10 ಸಾವಿರ, ಪೂರ್ಣ ಮನೆ ಬಿದ್ದವರಿಗೆ
25 ಸಾವಿರ ರೂ. ಪಾಲಿಕೆ ವತಿಯಿಂದ ನೀಡಿದ್ದೇವೆ.
ಇದು ಅತ್ಯಂತ ಸ್ಮರಣೀಯ ಘಟನೆಯಾಗಿದೆ. ಇದಕ್ಕಾಗಿ
ಸಹಕರಿಸಿದ ಎಲ್ಲರಿಗೂ ಅಭಿನಂದನೆ ಎಂದರು..
Recent Comments