ಹೈದರಾಬಾದ್ ನಲ್ಲಿ ನಡೆಯುತ್ತಿರುವ ಇಂಡಿಯನ್ ಸ್ಪೋರ್ಟ್ಸ್ ಏರೋಬಿಕ್ಸ್ ಅಂಡ್ ಫಿಟ್ನೆಸ್ ಫೆಡರೇಶನ್ ಅವರು ನಡೆಸುತ್ತಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಸ್ಟೆಪ್ ಹೊಲ್ಡರ್ಸ್ ನೃತ್ಯ ಸಂಸ್ಥೆಯ 43 ಮಕ್ಕಳು ಕರ್ನಾಟಕವನ್ನ ಪ್ರತಿನಿಧಿಸಲಿದ್ದಾರೆ. ನವೆಂಬರ್ 29 ರಿಂದ ಡಿಸೆಂಬರ್ 4ರ ವರೆಗೆ ಹೈದರಾಬಾದ್ ನಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ ಅಂಡರ್ 10, 12, 14, 19 ವಯೋಮಿತಿಯ ನಾಲ್ಕು ವಿಭಾಗದಲ್ಲಿ ಶಿವಮೊಗ್ಗದ ಸ್ಪರ್ಧಿಗಳು ನೃತ್ಯ ಪ್ರದರ್ಶನ ನೀಡಲಿದ್ದಾರೆ. ISAFF ನಾ ಕಾರ್ಯದರ್ಶಿ ಶುಭ ಹಾಗೂ ಜಿಲ್ಲಾ ಕಾರ್ಯದರ್ಶಿ ಅರುಣ್ ರಾಜ್ ಶೆಟ್ಟಿ ಸಾರಥ್ಯದಲ್ಲಿ ತಂಡ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದೆ.