ನಮ್ಮ ಮಗುವಿಗೆ ಯಾವ ಶಾಲೆ ಒಳ್ಳೆಯದು, ಯಾವ ಶಾಲೆಯಲ್ಲಿ ಏನು ಸೌಲಭ್ಯವಿದೆ, ಫೀ ಎಷ್ಟು, ಊಟ ಇರತ್ತಾ, ಬಸ್ ಇರತ್ತಾ ಇಂಥ ಹತ್ತಾರು ವಿಷಯಗಳು ಮಕ್ಕಳನ್ನು ಶಾಲೆಗೆ ಸೇರಿಸುವಾಗ ಪೋಷಕರನ್ನು ಕಾಡುವ ಪ್ರಶ್ನೆಗಳು. ಈ ಎಲ್ಲಾ ಪ್ರಶ್ನೆಗಳಿಗೆ `ಮಂತ್ರ ಎಜುಕೇಷನ್ ಎಕ್ಸ್ ಫೋ- 2020’ಪರಿಹಾರ ದೊರಕಿಸುತ್ತಿದೆ. ರಾಜ್ಯದ ಪ್ರಮುಖ ಇವೆಂಟ್ ಮ್ಯಾನೆಜ್ಮೆಂಟ್ ಸಂಸ್ಥೆಯಾದ `ಮಂತ್ರ ಇವೆಂಟ್ಸ್’ ನಿಂದ ಶಿವಮೊಗ್ಗದಲ್ಲಿ ಇದೇ ಮೊದಲ ಬಾರಿಗೆ ಎಜುಕೇಷನ್ ಎಕ್ಸ್ ಫೋ- 2020 ಹಮ್ಮಿಕೊಳ್ಳಲಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಹಾಗೂ ಶಾಲೆಗಳ ನಡುವೆ ಸಂಪರ್ಕ ಕಲ್ಪಿಸುವ ಈ ವಿಭಿನ್ನವಾದ ಕಾರ್ಯಕ್ರಮ ...
Read More »ಶಿವಮೊಗ್ಗ
ಇಂದಿನಿಂದ ದ್ವೀತಿಯ ಪಿಯುಸಿ ಪರೀಕ್ಷೆ ಆರಂಭ, ಮಕ್ಕಳಿಗಿಂತ ಪೋಷಕರಿಗೆ ಅಂತಕ ಹೆಚ್ಚು.
ದ್ವಿತೀಯ ಪಿಯುಸಿ ಪರೀಕ್ಷೆಗಳು ಇಂದಿನಿಂದ ಆರಂಭವಾಗಿವೆ. ಪರೀಕ್ಷೆಗಳನ್ನು ಪಾರದರ್ಶಕವಾಗಿ, ಕಟ್ಟುನಿಟ್ಟಿನಿಂದ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಈ ವರ್ಷ ಒಟ್ಟು 19748 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, 8620 ವಿದ್ಯಾರ್ಥಿಗಳು ಹಾಗೂ 11128 ವಿದ್ಯಾರ್ಥಿನಿಯರು ಇದ್ದಾರೆ. ಇವರಲ್ಲಿ ಕಲಾ ವಿಭಾಗದಲ್ಲಿ 5808, ವಾಣಿಜ್ಯ 7490 ಮತ್ತು ವಿಜ್ಞಾನ ವಿಭಾಗದಲ್ಲಿ 6451 ವಿದ್ಯಾರ್ಥಿಗಳಿದ್ದಾರೆ. ಸರ್ಕಾರಿ ಶಾಲೆಯಲ್ಲಿ 10911, ಅನುದಾನಿತ 2905 ಮತ್ತು ಅನುರಾನ ರಹಿತ ಕಾಲೇಜುಗಳಲ್ಲಿ 5758 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.. ಎಲ್ಲಾ ವಿಧ್ಯಾರ್ಥಿಗಳು ಭಯ ಆತಂಕದಿಂದ ಪರೀಕ್ಷೆ ಬರೆಯಲು ತಯಾರಾಗಿ ಪರೀಕ್ಷಾ ಕೇಂದ್ರಗಳ ಮುಂದೆ ಸಾಲು ಗಟ್ಟಿನಿಂತಿರುವ ...
Read More »ಈ ಬಾರಿ ಮನೆ ಗಣತಿಗೆ ಮೊಬೈಲ್ ಆ್ಯಪ್ ಬಳಕೆ- ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್
ಶಿವಮೊಗ್ಗ : ಜನಗಣತಿಗೆ ಪೂರ್ವಭಾವಿಯಾಗಿ ಏಪ್ರಿಲ್ 15 ರಿಂದ ಮೇ 29ರ ವರೆಗೆ ಜಿಲ್ಲೆಯಾದ್ಯಂತ ಮನೆ ಪಟ್ಟಿ ಮತ್ತು ಮನೆಗಣತಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ ಪರಿಷ್ಕರಣೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು. ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಹೊಸ ಸಭಾಂಗಣದಲ್ಲಿ ಜನಗಣತಿ ಅಧಿಕಾರಿಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಈ ಬಾರಿ ಮನೆಗಣತಿ ಕಾರ್ಯವನ್ನು ಮೊಬೈಲ್ ಆ್ಯಪ್ ಮೂಲಕ ಸಹ ನಡೆಸಲು ಅವಕಾಶ ಕಲ್ಪಿಸಲಾಗಿದೆ. ದೇಶ ಸ್ವಾತಂತ್ರ್ಯ ಪಡೆದ ಬಳಿಕ ನಡೆಯುತ್ತಿರುವ 8ನೇ ಜನಗಣತಿ ಇದಾಗಿದ್ದು, ಇದೇ ಮೊದಲ ...
Read More »ಸೀಡ್ ಪೇಪರ್ ಬಳಕೆಗೆ ಮುಂದಾಗಿರುವ ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ.
ಶಿವಮೊಗ್ಗ: ಆಮಂತ್ರಣ ಪತ್ರಿಕೆ, ಕರಪತ್ರಗಳನ್ನು ವಿವಿಧ ಡಿಸೈನ್ ಗಳಲ್ಲಿ ಮಾಡುವುದನ್ನು ನೋಡಿದ್ದೇವೆ. ಆದರೆ ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ ಪರಿಸರ ಸ್ನೇಹಿ ಆಮಂತ್ರಣ ಪತ್ರಿಕೆ ಹಾಗೂ ಕರಪತ್ರಗಳ ಬಳಕೆಗೆ ವಿಶೇಷ ಪ್ರಯತ್ನ ಮಾಡಿದೆ. ಇದುವರೆಗೆ ನಾವು ಸೀಡ್ ಬಾಲ್ ಗಳನ್ನು ನೋಡಿದ್ದೆವು. ಇದೀಗ ಸೀಡ್ ಪೇಪರ್ ಸಹ ಬಂದಿದೆ. ಈ ಸೀಡ್ ಪೇಪರ್ ಬಳಕೆ ಮಾಡಿದ ಮೊದಲ ಸರ್ಕಾರಿ ಇಲಾಖೆ ಹಾಗೂ ನಿಗಮ ಎಂಬ ಹೆಗ್ಗಳಿಕೆ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮಕ್ಕೆ ಸಲ್ಲುತ್ತದೆ.. ನಿಗಮದ ಅಧ್ಯಕ್ಷರಾದ ಡಿ.ಎಸ್ ಅರುಣ್ ...
Read More »ಐಷಾರಾಮಿ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸುಟ್ಟು ಕರಕಲಾದ ಪೀಠೋಪಕರಣ ಹಾಗೂ ದಾಖಲೆಗಳು.
ಶಿವಮೊಗ್ಗ: ಮನೆಯ ಎಸಿಯಲ್ಲಿ ಕಾಣಿಸಿಕೊಂಡ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಶಿವಮೊಗ್ಗದ ಶ್ರೀಮಂತ ಕುಟುಂಬದ ಮನೆಯೊಂದು ಬೆಂಕಿಗೆ ಆಹುತಿಯಾಗಿರುವ ಘಟನೆ ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿ ನಡೆದಿದೆ. ಭೂಪಾಳಂ ಸತ್ಯನಾರಾಯಣ ಅವರಿಗೆ ಸೇರಿದ ಮನೆಯಲ್ಲಿ ಇಂದು ಬೆಳಗ್ಗೆ ಎಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದ್ದು ಮನೆಯ ಮಹಡಿಯಲ್ಲಿದ್ದ ಕೊಠಡಿಗೆ ಬೆಂಕಿ ತಗುಲಿದ ಪರಿಣಾಮ ಕೊಠಡಿಯಲ್ಲಿದ್ದ ಪೀಠೋಪಕರಣಗಳು, ದಾಖಲೆಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಅನಾಹುತವನ್ನು ತಪ್ಪಿಸಿದ್ದಾರೆ..
Read More »ಏತ ನೀರಾವರಿ ಹಾಗೂ ವಿವಿಧ ಕಾಮಗಾರಿಗಳಿಗೆ ಚಾಲನೆ
ಆನವಟ್ಟಿ : ಸೊರಬ ತಾಲೂಕು ಆನವಟ್ಟಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು. ಅವರು ಇಂದು ಸುಮಾರು 600ಕೋಟಿ ವೆಚ್ಚದ ಸೊರಬ ತಾಲೂಕಿನ ಮೂಡಿ-ಮೂಗೂರು ಏತ ನೀರಾವರಿ ಹಾಗೂ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಇದೇ ಮಾದರಿಯಲ್ಲಿ ಬಹುತೇಕ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು. ಅಧಿಕಾರ ಸ್ವೀಕರಿಸಿದ ಅತ್ಯಲ್ಪ ಅವಧಿಯಲ್ಲಿ ನಿರೀಕ್ಷೆಗೆ ಮೀರಿದ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು. ಈಗಾಗಲೇ ಮೂಗೂರು ಮತ್ತು ಮೂಡಿ ಏತ ನೀರಾವರಿ ಯೋಜನೆಗಳು ಪ್ರಗತಿಯಲ್ಲಿವೆ. ಈ ಕಾಮಗಾರಿಗಳು ...
Read More »ಬೃಹತ್ ಉದ್ಯೋಗ ಮೇಳಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ..
ಶಿವಮೊಗ್ಗ : ಶಿವಮೊಗ್ಗದಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಪೂರಕ ವಾತಾವರಣ ನಿರ್ಮಿಸುವ ಮೂಲಕ ಜಿಲ್ಲೆಯನ್ನು ರಾಜ್ಯದಲ್ಲಿಯೇ ಮಾದರಿ ಜಿಲ್ಲೆಯನ್ನಾಗಿ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.. ಇಂದು ಶಿವಮೊಗ್ಗದ ಎನ್‍ಇಎಸ್ ಕಾಲೇಜು ಆವರಣದಲ್ಲಿ ಎರಡು ದಿನಗಳ ಬೃಹತ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು. ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ ಕೈಗೆತ್ತಿಕೊಳ್ಳಲಾಗಿರುವ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಮುಂದಿನ ಮೂರುವರೆ ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು. ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗಳಿಗೆ 220ಕೋಟಿ ರೂ. ಮಂಜೂರು ಮಾಡಲಾಗಿದೆ. ಮುಂದಿನ 15ದಿನಗಳ ಒಳಗಾಗಿ ನಿರ್ಮಾಣ ಕಾಮಗಾರಿ ಆರಂಭವಾಗಲಿದ್ದು, 8ರಿಂದ 10ತಿಂಗಳ ...
Read More »ಮಾರಿ ಹಬ್ಬದ ಅಂಗವಾಗಿ ನಡೆದ ಕುರಿ ಕಾಳಗದ ಝಲಕ್
ಶಿವಮೊಗ್ಗ : ಅಖಾಡದ ಸುತ್ತಲೂ ಕಿಕ್ಕಿರಿದ ಪ್ರೇಕ್ಷಕರು, ಮೈದಾನದ ಪಕ್ಕದಲ್ಲಿರುವ ಕಟ್ಟಡಗಳ ಮೇಲೆ ಕುಳಿತಿದ್ದ ಜನ. ಇದು ಕ್ರಿಕೆಟ್ ಟೂರ್ನಿ ಅಥವಾ ಪ್ರೋ ಕಬಡ್ಡಿ ನೋಡಲು ಸೇರಿದ್ದ ಪ್ರೇಕ್ಷಕರಲ್ಲ ಬದಲಾಗಿ ನಮ್ಮ ಗ್ರಾಮೀಣ ಸೊಗಡಿನ ಕ್ರೀಡೆ ಕುರಿಕಾಳಗ ವೀಕ್ಷಣೆಗೆ ಸೇರಿದ್ದ ಜನಸಾಗರ. ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬ ಸಮಿತಿಯಿಂದ ಕೋಟೆ ಮಾರಿಕಾಂಬ ಜಾತ್ರೆ ಅಂಗವಾಗಿ ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ಆಯೋಜಿಸಿದ್ದ ಕುರಿ ಕಾಳಗವನ್ನು ವೀಕ್ಷಿಸಲು ಜನಸಾಗರವೇ ಹರಿದುಬಂದಿತ್ತು. 2, 4, 6 ಹಾಗೂ 8 ಹಲ್ಲಿನ ಕುರಿಗಳಿಗೆ ಪ್ರತ್ಯೇಕವಾಗಿ ಸ್ಪರ್ಧೆ ಆಯೋಜಿಸಲಾಗಿತ್ತು. ಕುರಿಗಳು ...
Read More »ಕೋಟೆ ಮಾರಿಕಾಂಬಾ ದೇವಿ ಜಾತ್ರೆ ಬಹುಜನರ ಧಾರ್ಮಿಕ-ಸಾಂಸ್ಕೃತಿಕ ಉತ್ಸವ
ಶಿವಮೊಗ್ಗದ ಕೋಟೆ ಶ್ರೀಮಾರಿಕಾಂಬಾ ದೇವಿ ಜಾತ್ರೆ ನಾಡಿನ ಜನಮನ ಸೆಳೆದ . ಆಸ್ತಿಕ ಭಕ್ತರನ್ನು ಸೂಜಿಗಲ್ಲಿನಂತೆ ಸೆಳೆವ ಜಾತ್ರೆ. ಶಿರಸಿ, ಸಾಗರದ ಮಾರಿಕಾಂಬಾ ಜಾತ್ರೆಗಳ ನಂತರ ಅದ್ಧೂರಿಯ ಹೆಗ್ಗಳಿಕೆಗೆ ಪಾತ್ರವಾಗಿರುವುದು ಶಿವಮೊಗ್ಗನಗರದ ಕೋಟೆ ಶ್ರೀ ಮಾರಿಕಾಂಬಾದೇವಿ ಜಾತ್ರೆ. ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರೆಯ ಹಿಂದೆ ಊರಿನ ಕ್ಷೇಮ, ಜನರ ಕಲ್ಯಾಣಕ್ಕೆ ಶಕ್ತಿ ದೇವತೆಯನ್ನು ಆರಾಧಿಸುವ ಜನಪದ ನಂಬಿಕೆಯೊಂದು ಭಕ್ತಿ ಮತ್ತು ವೈಭವದಿಂದ ನಡೆದುಕೊಂಡು ಬಂದ ಪರಂಪರೆಯೊಂದು ಹಾಸುಹೊಕ್ಕಾಗಿದೆ. ದೂರ್ವಾಸ ಕ್ಷೇತ್ರವೆಂದೆ ಪುರಾಣಗಳಲ್ಲಿ ಕರೆಯಲ್ಪಡುವ ಶಿವಮೊಗ್ಗ ನಗರದ ಕೋಟೆ ಮಾರಿಕಾಂಬೆದೇವಿಯ ಜಾತ್ರೆಗೆ ಶತಮಾನದ ...
Read More »12ನೇ ಶತಮಾನ ಒಂದು ಅದ್ಭುತ ಶತಮಾನ :ಅನುರಾಧ
ಶಿವಮೊಗ್ಗ ; 12ನೇ ಶತಮಾನದಲ್ಲಿನ ಮೂಢನಂಬಿಕೆಗಳು, ಜಾತಿ ಪದ್ಧತಿ ವಿರುದ್ಧ ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಕಾಯಕ ಶರಣರ ಕೊಡುಗೆ ಅಪಾರವಾದುದು ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ಹೇಳಿದರು. ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರುಗಳ ಸಂಯುಕ್ತಾಶ್ರಯದಲ್ಲಿ ಕಾಯಕ ಶರಣರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾಯಕ ಶರಣರು, ಬಸವಣ್ಣ, ಅಕ್ಕಮಹಾದೇವಿ ಅನೇಕ ಜ್ಞಾನಿಗಳು 12ನೇ ಶತಮಾನದಲ್ಲಿ ಬಂದು ಹೋಗಿದ್ದಾರೆ. ಹೀಗಾಗಿ ಹನ್ನೆರಡನೇ ಶತಮಾನ ...
Read More »
C News TV Kannada News Online in cnewstv