Breaking News

ಮಂತ್ರ ಎಜುಕೇಷನ್ ಎಕ್ಸ್ ಫೋ- 2020

ನಮ್ಮ ಮಗುವಿಗೆ ಯಾವ ಶಾಲೆ ಒಳ್ಳೆಯದು, ಯಾವ ಶಾಲೆಯಲ್ಲಿ ಏನು ಸೌಲಭ್ಯವಿದೆ, ಫೀ ಎಷ್ಟು, ಊಟ ಇರತ್ತಾ, ಬಸ್ ಇರತ್ತಾ ಇಂಥ ಹತ್ತಾರು ವಿಷಯಗಳು ಮಕ್ಕಳನ್ನು ಶಾಲೆಗೆ ಸೇರಿಸುವಾಗ ಪೋಷಕರನ್ನು ಕಾಡುವ ಪ್ರಶ್ನೆಗಳು. ಈ ಎಲ್ಲಾ ಪ್ರಶ್ನೆಗಳಿಗೆ `ಮಂತ್ರ ಎಜುಕೇಷನ್ ಎಕ್ಸ್ ಫೋ- 2020’ಪರಿಹಾರ ದೊರಕಿಸುತ್ತಿದೆ.

ರಾಜ್ಯದ ಪ್ರಮುಖ ಇವೆಂಟ್ ಮ್ಯಾನೆಜ್ಮೆಂಟ್ ಸಂಸ್ಥೆಯಾದ `ಮಂತ್ರ ಇವೆಂಟ್ಸ್’ ನಿಂದ ಶಿವಮೊಗ್ಗದಲ್ಲಿ ಇದೇ ಮೊದಲ ಬಾರಿಗೆ ಎಜುಕೇಷನ್ ಎಕ್ಸ್ ಫೋ- 2020 ಹಮ್ಮಿಕೊಳ್ಳಲಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಹಾಗೂ ಶಾಲೆಗಳ ನಡುವೆ ಸಂಪರ್ಕ ಕಲ್ಪಿಸುವ ಈ ವಿಭಿನ್ನವಾದ ಕಾರ್ಯಕ್ರಮ ನಗರದ ಶಿವಪ್ಪನಾಯಕ ಸಿಟಿ ಸೆಂಟರ್ ಮಾಲ್ ನಲ್ಲಿ ಮಾರ್ಚ್ 7, 8ರಂದು ನಡೆಯಲಿದೆ. ಈ ಎಕ್ಸ್ ಪೋನಲ್ಲಿ ನಗರದ ಪ್ರತಿಷ್ಠಿತ ಶಾಲೆಗಳು ಪಾಲ್ಗೊಳ್ಳುತ್ತಿವೆ. ಪೋಷಕರಿಗೆ ಒಂದೇ ಕಡೆ ಎಲ್ಲಾ ಶಾಲೆಗಳ ಸಂಪೂರ್ಣ ಮಾಹಿತಿ ದೊರಕಲಿದೆ. ಆಯಾ ಶಾಲೆಗಳ ಪ್ರಮುಖರು ಎಕ್ಸ್ ಫೋನಲ್ಲಿ ಉಪಸ್ಥಿತರಿದ್ದು, ತಮ್ಮ ಶಾಲೆಯ ವೈಶಿಷ್ಟ್ಯತೆಗಳ ಬಗ್ಗೆ ಪೋಷಕರಿಗ ಮಾಹಿತಿ ನೀಡಲಿದ್ದಾರೆ. ಶಿವಮೊಗ್ಗದ ಮಟ್ಟಿಗೆ ಹೇಳುವುದಾದರೆ, ಶೈಕ್ಷಣಿಕ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಪ್ರಥಮ ಎಕ್ಸ್ ಪೋ ಇದಾಗಿದೆ.

ಈ ಎಕ್ಸ್ ಫೋನ ಪ್ರಮುಖ ವೈಶಿಷ್ಟ್ಯವೆಂದರೆ ಸ್ಥಳದಲ್ಲೇ ಶಾಲೆಗೆ ಸೇರಿಸಲು ನಿರ್ಧಾರ ಕೈಗೊಳ್ಳುವ ಪೋಷಕರಿಗೆ ವಿಶೇಷ ರಿಯಾಯಿತಿಯನ್ನು ಕೆಲವು ಶಾಲೆಗಳು ನೀಡುತ್ತಿವೆ. ಶಾಲೆಗಳಿಗೆ ದೊರಕುತ್ತಿರುವ ಫಲಿತಾಂಶ, ಆಯಾ ಶಾಲೆಗಳಲ್ಲಿ ಇರುವ ಸೌಲಭ್ಯಗಳು ಇನ್ನಿತರ ಎಲ್ಲಾ ಮಾಹಿತಿಗಳೂ ಈ ಸಂದರ್ಭದಲ್ಲಿ ಫೋಷಕರಿಗೆ ಸಿಗಲಿವೆ.
ಮಂತ್ರ ಇವೆಂಟ್ಸ್ ನ ಈ ಎಜುಕೇಷನ್ ಎಕ್ಸ್ ಪೋಗೆ ಶಿವಮೊಗ್ಗದ ಟಿವಿ ಭಾರತ್ ಚಾನಲ್ ಮಾಧ್ಯಮ ಸಹಯೋಗ ನೀಡಿದೆ. ಈ ಕಾರ್ಯಕ್ರಮದ ಸಮಗ್ರ ವರದಿ ಹಾಗೂ ವಿಶೇಷ ಕಾರ್ಯಕ್ರಮಗಳನ್ನು ಟಿವಿ ಭಾರತ್ ವಿಶೇಷವಾಗಿ ಪ್ರಸಾರ ಮಾಡಲಿದೆ.

ಮಂತ್ರ ಇವೆಂಟ್ಸ್: ಶಿವಮೊಗ್ಗದಲ್ಲಿ 2013ರಿಂದ ಕಾರ್ಯಾರಂಭ ಮಾಡಿರುವ ಮಂತ್ರ ಇವೆಂಟ್ಸ್ ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಸಂಸ್ಥೆಯ ಕಾರ್ಯವೈಖರಿಗೆ ಪ್ರತಿಷ್ಠಿತ ಸೈರಾಫಿಲ್ಸ್ ಮೀಡಿಯಾ ರಿಸರ್ಚ್ ಸಂಸ್ಥೆಯ 2018-19 ನೇ ಸಾಲಿನ ಸೌಂತ್ ಇಂಡಿಯಾ ಬ್ಯೂಸಿನೆಸ್ ಅವಾರ್ಡ್ ನೀಡಿದೆ. ಇದು ಸಂಸ್ಥೆಯ ಕಾರ್ಯವೈಖರಿಗೆ ದೊರೆತ ಮನ್ನಣಿ. ಕಾರ್ಪೋರೇಟ್ ಸಂಸ್ಥೆಗಳ ಹಾಗೂ ಕಂಪನಿಗಳ ವಾರ್ಷಿಕೋತ್ಸವ ಸೇರಿ ಹತ್ತಾರು ಬಗೆಯ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸಂಸ್ಥೆ ನಿರ್ವಹಿಸುತ್ತಿದೆ.

Leave a Reply

Your email address will not be published. Required fields are marked *

*