Breaking News

ಇಂದಿನಿಂದ ದ್ವೀತಿಯ ಪಿಯುಸಿ ಪರೀಕ್ಷೆ ಆರಂಭ, ಮಕ್ಕಳಿಗಿಂತ ಪೋಷಕರಿಗೆ ಅಂತಕ ಹೆಚ್ಚು.

 

ದ್ವಿತೀಯ ಪಿಯುಸಿ ಪರೀಕ್ಷೆಗಳು ಇಂದಿನಿಂದ ಆರಂಭವಾಗಿವೆ. ಪರೀಕ್ಷೆಗಳನ್ನು ಪಾರದರ್ಶಕವಾಗಿ, ಕಟ್ಟುನಿಟ್ಟಿನಿಂದ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಈ ವರ್ಷ ಒಟ್ಟು 19748 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, 8620 ವಿದ್ಯಾರ್ಥಿಗಳು ಹಾಗೂ 11128 ವಿದ್ಯಾರ್ಥಿನಿಯರು ಇದ್ದಾರೆ.

ಇವರಲ್ಲಿ ಕಲಾ ವಿಭಾಗದಲ್ಲಿ 5808, ವಾಣಿಜ್ಯ 7490 ಮತ್ತು ವಿಜ್ಞಾನ ವಿಭಾಗದಲ್ಲಿ 6451 ವಿದ್ಯಾರ್ಥಿಗಳಿದ್ದಾರೆ. ಸರ್ಕಾರಿ ಶಾಲೆಯಲ್ಲಿ 10911, ಅನುದಾನಿತ 2905 ಮತ್ತು ಅನುರಾನ ರಹಿತ ಕಾಲೇಜುಗಳಲ್ಲಿ 5758 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ..

ಎಲ್ಲಾ ವಿಧ್ಯಾರ್ಥಿಗಳು ಭಯ ಆತಂಕದಿಂದ ಪರೀಕ್ಷೆ ಬರೆಯಲು ತಯಾರಾಗಿ ಪರೀಕ್ಷಾ ಕೇಂದ್ರಗಳ ಮುಂದೆ ಸಾಲು ಗಟ್ಟಿನಿಂತಿರುವ ದೃಶ್ಯ ಒಂದು ಕಡೆಯಾದರೆ, ಮಕ್ಕಳನ್ನು ಪರೀಕ್ಷಾ ಕೇಂದ್ರಗಳಿಗೆ ಬಿಡಲು ಬಂದಿದ್ದ ಪೋಷಕರ ಟೆನ್ಷನ್ ದುಪಟ್ಟಗಿತ್ತು. ಕಾಲೇಜುಗಳ ಕಾಂಪೌಂಡ್ ಮೇಲೆ ನಿಂತು ಮಕ್ಕಳು ಪರೀಕ್ಷೆ ಬರೆಯುವುದನ್ನು ಪಾಲಕರು ವೀಕ್ಷಿಸುತ್ತಿದ್ದ ದೃಷ್ಯ ಸಾಮಾನ್ಯವಾಗಿತ್ತು.

Leave a Reply

Your email address will not be published. Required fields are marked *

*