Breaking News

Tag Archives: News

ಫೆ.6 & 7 : ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಫೆ 06 ಮತ್ತು 07 ರಂದು ಎರಡು ದಿನಗಳ ಕಾಲ ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನ ಆಯೋಜಿಸಿದೆ. ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ, ತೀರ್ಥಹಳ್ಳಿ ತಾಲ್ಲೂಕಿನ ಹಿರಿಯ ಸಾಹಿತಿ ಡಾ ಜೆ.ಕೆ.ರಮೇಶ್ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಸಮ್ಮೇಳನದ ಮಹಾವೇದಿಕೆಗೆ ಡಾ.ನಾ.ಡಿಸೋಜ ಅವರ ಹೆಸರು ಇಡಲಾಗಿದೆ. ಸುಮಾರು 4 ಸಾವಿರ ಪ್ರತಿನಿಧಿಗಳು ಸಾಹಿತ್ಯ ಸಮ್ಮೇಳನಕ್ಕೆ ನೊಂದಣಿಯಾಗಿದ್ದು, ಎರಡು ದಿನಗಳ ಊಟೋಪಚಾರದ ಜೊತೆಗೆ ಓಓಡಿ ಸೌಲಭ್ಯ ನೀಡಲಾಗುತ್ತಿದೆ ಎಂದರು. ...

Read More »

ನಿವೃತ್ತ ಶಿಕ್ಷಕಿ ವತ್ಸಲಾರಿಗೆ ಗ್ರಾಮಸ್ಥರಿಂದ ಬೀಳ್ಕೋಡುಗೆ

ಶಿವಮೊಗ್ಗ: ತಾಲೂಕಿನ ಪುರದಾಳು ಗ್ರಾ.ಪಂ ವ್ಯಾಪ್ತಿಯ ಹನುಮಂತಾಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ, ಶುಕ್ರವಾರ ನಿವೃತ್ತರಾದ ವತ್ಸಲಾ ಕುಮಾರಿ ಅವರಿಗೆ ಗ್ರಾಮಸ್ಥರು ಆತ್ಮೀಯ ಬೀಳ್ಕೋಡುಗೆ ನೀಡಿ, ಗೌರವಿಸಿದ್ದಾರೆ. ನಿವೃತ್ತ ಶಿಕ್ಷಕಿ ವತ್ಸಲಾರಿಗೆ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮ ಪಂಚಾಯತ್ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಿ, ನಿವೃತ್ತ ಜೀವನಕ್ಕೆ ಶುಭ ಹಾರೈಸಲಾಯಿತು. ಚಿಕ್ಕಮಗಳೂರು ಜಿಲ್ಲೆಯ ಮೆಣಸೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವೃತ್ತಿ ಜೀವನ ಆರಂಭಿಸಿದ್ದ ವತ್ಸಲಾ ಅವರು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ 13 ಶಾಲೆಗಳಲ್ಲಿ ...

Read More »

ವಿಜಯನಗರದಲ್ಲಿ ಯುವತಿ ನೇಣಿಗೆ ಶರಣು

ಶಿವಮೊಗ್ಗ: ಆರೋಗ್ಯ ಸಮಸ್ಯೆಯಿಂದ ಮನನೊಂದಿದ್ದ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶಿವಮೊಗ್ಗ ನಗರದ ನೇತಾಜಿ ಸರ್ಕಲ್ ಸಮೀಪದ ವಿಜಯನಗರ 4ನೇ ಮುಖ್ಯರಸ್ತೆಯಲ್ಲಿನ ಮನೆಯಲ್ಲಿ ಯುವತಿ ನೇಣಿಗೆ ಶರಣಾಗಿರುವ ಘಟನೆ ಬುಧವಾರ ಸಂಜೆ ನಡೆದಿದೆ. ಸೌಮ್ಯ(25) ಮೃತ ಯುವತಿ. ವಿಜಯನಗರದಲ್ಲಿ ಪೋಷಕರೊಂದಿಗೆ ವಾಸವಿದ್ದ ಸೌಮ್ಯ, ಬಿಕಾಂ ವ್ಯಾಸಂಗದ ಬಳಿಕ ಕಳೆದ 3 ವರ್ಷದಿಂದ ಮಾಚೇನಹಳ್ಳಿಯಲ್ಲಿರುವ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಸೌಮ್ಯಳಿಗೆ ಪೋಷಕರು, ಶಿವಮೊಗ್ಗದ ಮೆಗ್ಗಾನ್ ಸೇರಿದಂತೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು.ಹೀಗಿದ್ದರೂ ಉಸಿರಾಟ ಸಮಸ್ಯೆ ಕಡಿಮೆಯಾಗಿರಲಿಲ್ಲ. ಇದರಿಂದ ಮನನೊಂದಿದ್ದ ಸೌಮ್ಯ, ನಿನ್ನೆ ...

Read More »

ಕೈ ಚೀಲದಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ನವಜಾತ ಶಿಶು ಪತ್ತೆ.

ಶಿವಮೊಗ್ಗ: ನವಜಾತ ಗಂಡು ಶಿಶುವನ್ನು ಚೀಲದಲ್ಲಿ ಸುತ್ತಿ ರಸ್ತೆ ಬದಿಯಲ್ಲಿ ಬಿಟ್ಟು ಹೋಗಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ನಗರದ ಶ್ರೀರಾಮಪುರದ 2ನೇ ಕ್ರಾಸ್ ನಲ್ಲಿ ಬೋರೆವಲ್ ಬಳಿ ಚೀಲದಲ್ಲಿ ಗಂಡು ಶಿಶುವನ್ನ ಬಿಟ್ಟು ಹೋಗಿದ್ದು, ಮಗು ಅಳುವುದನ್ನು ಕೇಳಿ ಇಂದು ಬೆಳಿಗ್ಗೆ ಸ್ಥಳೀಯರು ಚೀಲವನ್ನ ಪರೀಕ್ಷಿಸಿದ್ದಾರೆ. ಈ ವೇಳೆ ಚೀಲದಲ್ಲಿ ಮಗು ಇರುವುದನ್ನು ಗಮನಿಸಿ, ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಬರುವ ಮೊದಲೇ ಸ್ಥಳೀಯರು ಮಗುವಿನ ಆರೈಕೆ ಮಾಡಿದ್ದಾರೆ. ಸದ್ಯ ಮಗುವನ್ನು ಮೆಗ್ಗಾನ್ ಆಸ್ಪತ್ರೆಯ ಹೆರಿಗೆ ಮತ್ತು ...

Read More »

ತ್ಯಾವರೆಕೊಪ್ಪ ಮೃಗಾಲಯದಲ್ಲಿ ಹೆಣ್ಣು ಹುಲಿ ಸಾವು

ಶಿವಮೊಗ್ಗ: ಇಲ್ಲಿನ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ‘ಅಂಜನಿ’ ಎಂಬ ಹೆಣ್ಣು ಹುಲಿ ಮೃತಪಟ್ಟಿದೆ. 17 ವರ್ಷ ವಯಸ್ಸಿನ ಹೆಣ್ಣು ಹುಲಿಯು ವಯೋ ಸಹಜವಾದ ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಮೃಗಾಲಯದಲ್ಲಿ ಮೃತಪಟ್ಟಿದೆ. ಪಶು ವೈದ್ಯಕೀಯ ಕಾಲೇಜಿನ ಪಶುವೈದ್ಯರ ತಂಡ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯಕ್ರಿಯೆ ನಡೆಸಲಾಗಿದೆ. 2022 ರಲ್ಲಿ ಮೈಸೂರು ಜಿಲ್ಲೆಯ ಕೂರ್ಗಳ್ಳಿಯ ಚಾಮುಂಡಿ ವನ್ಯಜೀವಿ ಪುನರ್ವಸತಿ ಕೇಂದ್ರದಿಂದ ಅಂಜನಿ ಹುಲಿಯನ್ನು ಶಿವಮೊಗ್ಗ ಮೃಗಾಲಯಕ್ಕೆ ತರಲಾಗಿತ್ತು. ಈ ಹುಲಿಯ ಸಾವಿನಿಂದ ತ್ಯಾವರೆಕೊಪ್ಪ ಮೃಗಾಲಯದಲ್ಲಿ 4 ಹೆಣ್ಣು ...

Read More »

ಕಾಡಾನೆ ಬಳಿಕ ಚಿರತೆ ಹಾವಳಿ: ಗುಬ್ಬಿಗಾ ಗ್ರಾಮದಲ್ಲಿ ನಾಯಿ ಹೊತ್ತೊಯ್ದ ಚಿರತೆ

ಶಿವಮೊಗ್ಗ: ಮನೆ ಬಾಗಿಲಲ್ಲಿ ಮಲಗಿದ್ದ ನಾಯಿಯನ್ನ ಚಿರತೆ ಹೊತ್ತೊಯ್ದಿರುವ ಘಟನೆ ಗುಬ್ಬಿಗಾ ಗ್ರಾಮದಲ್ಲಿ ನಡೆದಿದೆ. ಜಿಲ್ಲೆಯ ಹೊಸನಗರ ತಾಲೂಕಿನ ಬೆಳ್ಳೂರು ಗ್ರಾ.ಪಂ ವ್ಯಾಪ್ತಿಯ ಗುಬ್ಬಿಗಾ ಗ್ರಾಮದಲ್ಲಿ ತಡರಾತ್ರಿ ಚಿರತೆ ಕಾಣಿಸಿಕೊಂಡಿದ್ದು, ನಾಯಿಯನ್ನು ಎತ್ತಿಕೊಂಡು ಹೋಗಿದೆ. ಗುಬ್ಬಿಗಾ ಗ್ರಾಮದ ಮಂಜಪ್ಪಗೌಡ ಎಂಬುವರ ಮನೆ ಬಳಿ ಚಿರತೆ ಕಾಣಿಸಿಕೊಂಡಿದ್ದು, ಮನೆ ಬಾಗಿಲ ಬಳಿಯೇ ಮಲಗಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದಿದೆ. ಇಂದು ಬೆಳಿಗ್ಗೆ ನಾಯಿ ಕಾಣಿಸದಿರುವಾಗ ಮನೆಯ ಸಿಸಿ ಕ್ಯಾಮರವನ್ನು ಪರಿಶೀಲಿಸಿದ್ದು, ಚಿರತೆ ಬಂದು ನಾಯಿಯನ್ನು ಹೊತ್ತೊಯ್ದಿರುವುದು ಗಮನಕ್ಕೆ ಬಂದಿದೆ. ಬೆಳ್ಳೂರು ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಈಗಾಗಲೇ ಆನೆಗಳ ...

Read More »

ಸಿಡಿಮದ್ದು ಸ್ಫೋಟದಿಂದ ಬಾಲಕನಿಗೆ ಗಾಯ- ಆಸ್ಪತ್ರೆಗೆ ದಾಖಲು

ತೀರ್ಥಹಳ್ಳಿ: ಪಟ್ಟಣದ ತುಂಗಾನದಿ ತೀರದಲ್ಲಿ ಸಿಡಿಮದ್ದು ಸ್ಫೋಟಗೊಂಡು, ಬಾಲಕನೋರ್ವ ಗಾಯಗೊಂಡ ಘಟನೆ ನಡೆದಿದೆ. ತೀರ್ಥಹಳ್ಳಿಯ ತೇಜು(9) ಸ್ಫೋಟದಿಂದ ಗಾಯಗೊಂಡ ಬಾಲಕ. ಎಳ್ಳಮಾವಾಸ್ಯೆ ಜಾತ್ರೆ ಅಂಗವಾಗಿ ತೀರ್ಥಹಳ್ಳಿ ಪಟ್ಟಣದ ತುಂಗಾನದಿ ತೀರದಲ್ಲಿ ತೆಪ್ಪೋತ್ಸವ ಆಚರಣಾ ಸಮಿತಿಯು ಜನವರಿ 1 ರಂದು ತೆಪ್ಪೋತ್ಸವ ಆಯೋಜಿಸಿತ್ತು. ತೆಪ್ಪೋತ್ಸವ ಮುಗಿದ ನಂತರ ಎರಡೂವರೆ ಗಂಟೆ ಸಿಡಿಮದ್ದು ಪ್ರದರ್ಶನ ಕಾರ್ಯಕ್ರಮ ಸಹ ನಡೆಸಲಾಗಿತ್ತು. ಸಿಡಿಮದ್ದು ಪ್ರದರ್ಶನ ನಡೆದ ನಾಲ್ಕು ದಿನಗಳ ಬಳಿಕ ಜ.5 ರ ಭಾನುವಾರ ಸಂಜೆ ನದಿ ತೀರದಲ್ಲಿ ಸಿಡಿಯದೇ ಅರ್ಧಂಬರ್ಧ ಉಳಿದಿದ್ದ ಪಟಾಕಿಗಳನ್ನು 3 ಬಾಲಕರು ಒಟ್ಟುಗೂಡಿಸುವ ಪ್ರಯತ್ನದಲ್ಲಿದ್ದಾಗ ...

Read More »

ಧನಂಜಯ ಸರ್ಜಿ ಹೆಸರಲ್ಲಿ ಸ್ವೀಟ್ ಗಿಫ್ಟ್: ಆರೋಪಿ ಬಂಧಿಸಿದ ಕೋಟೆ ಪೊಲೀಸರು.

ಶಿವಮೊಗ್ಗ: ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಅವರ ಹೆಸರಿನಲ್ಲಿ ಸ್ವೀಟ್ ಬಾಕ್ಸ್ ಕಳುಹಿಸಿದ್ದ ಆರೋಪಿಯನ್ನು ಕೋಟೆ ಠಾಣೆ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಭದ್ರಾವತಿ ಮೂಲದ ಸೌಹಾರ್ಧ ಪಟೇಲ್(26) ಬಂಧಿತ ಆರೋಪಿ. ಆರೋಪಿಯು ಈ ಹಿಂದೆ ಕಾನೂನು ಪದವಿ ಓದುವಾಗ ಎನ್ಇಎಸ್ ಕಾರ್ಯದರ್ಶಿ ನಾಗರಾಜ್ ಅವರು ವಿಷಯವೊಂದರ ಕುರಿತಾಗಿ ಆರೋಪಿಗೆ ಬೈಯ್ದಿದ್ದರು. ಈ ಹಿನ್ನೆಲೆಯಲ್ಲಿ ಮನ ನೊಂದಿದ್ದ ಆರೋಪಿ ಸೌಹಾರ್ದ ಪಟೇಲ್‌, ಕೊರಿಯರ್‌ ಮೂಲಕ ಡಾ. ಧನಂಜಯ ಸರ್ಜಿ ಅವರ ಹೆಸರಿನಲ್ಲಿ ಹೊಸ ವರ್ಷದ ಶುಭ ಕೋರುವ ಸಂದೇಶದೊಂದಿಗೆ ಸಿಹಿ ತಿಂಡಿಯನ್ನು ...

Read More »

ಹಿರಿಯ ಸಾಹಿತಿ ನಾ.ಡಿಸೋಜ ನಿಧನ : ಬೇಳೂರು ಸಂತಾಪ

ಶಿವಮೊಗ್ಗ: ಹಿರಿಯ ಸಾಹಿತಿ ನಾ.ಡಿಸೋಜ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು,ಮಂಗಳೂರಿನ ಫಾಧರ್ ಮುಲ್ಲರ್ ಆಸ್ಪತ್ರೆಯಲ್ಲಿ ಇಂದು ಸಂಜೆ 7.30ಕ್ಕೆ ಮೃತಪಟ್ಟಿದ್ದಾರೆ ಎಂದು ಅವರ ಪುತ್ರ ನವೀನ್, ಸಾಮಾಜಿಕ ಜಾಲತಾಣ ಹಾಗೂ ವೀಡಿಯೋ ಮೂಲಕ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ‘ನಾಡಿ’ ಎಂದೇ ಪ್ರಸಿದ್ಧರಾಗಿದ್ದ ಹಿರಿಯ ಸಾಹಿತಿ ನಾ.ಡಿಸೋಜಾ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಜತೆಗೆ ಮಡಿಕೇರಿಯಲ್ಲಿ ನಡೆದ 80 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು ಕೂಡ ಆಗಿದ್ದರು. ಸೋಮವಾರ ಪೂರ್ತಿ ದಿನ ಸಾಹಿತಿ ನಾ.ಡಿಸೋಜ ...

Read More »

ಎಂಎಸ್ಪಿ ಗೆ ಆಗ್ರಹಿಸಿ, ಶಿವಮೊಗ್ಗದಲ್ಲಿ ರೈತರ ಪ್ರತಿಭಟನೆ

ಶಿವಮೊಗ್ಗ: ರೈತ ವಿರೋಧಿಯಾದ ಮೂರು ಕೃಷಿ ಕಾಯ್ದೆಗಳನ್ನ ವಾಪಸ್ ಪಡೆಯುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಒತ್ತಾಯಿಸಿದೆ. ಶಿವಮೊಗ್ಗ ಡಿಸಿ ಕಚೇರಿ ಆವರಣದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್ ಆರ್ ಬಸವರಾಜಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು, ಎಂ ಎಸ್ ಪಿ ಯನ್ನು ಕಾನೂನಾತ್ಮಕವಾಗಿ ಜಾರಿ ಮಾಡಬೇಕು ಹಾಗೂ ವಿದ್ಯುತ್ ಶಕ್ತಿ ಖಾಸಗಿಕರಣ ಮಾಡಬಾರದು ಎಂದು ಒತ್ತಾಯಿಸಿದ್ದಾರೆ. ರೈತರು ಈ ಹಿಂದೆ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಲಿಖಿತ ಭರವಸೆ ಸಹ ನೀಡಿತ್ತು. ಭರವಸೆ ನೀಡಿ ...

Read More »