ತನ್ನದೇ ದಾಖಲೆಯನ್ನು ಮುರಿದು, 26 ಬಾರಿ ಮೌಂಟ್ ಎವರೆಸ್ಟ್ ಏರಿದ 52 ವರ್ಷದ ನೇಪಾಳಿ ಶೆರ್ಪಾ ರೀಟಾ..
Cnewstv.in / 08.05.2022 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ತನ್ನದೇ ದಾಖಲೆಯನ್ನು ಮುರಿದು, 26 ಬಾರಿ ಮೌಂಟ್ ಎವರೆಸ್ಟ್ ಏರಿದ 52 ವರ್ಷದ ನೇಪಾಳಿ ಶೆರ್ಪಾ ರೀಟಾ..
52 ವರ್ಷದ ಅನುಭವಿ ನೇಪಾಳಿ ಶೆರ್ಪಾ ರೀಟಾ 26 ಬಾರಿ ಮೌಂಟ್ ಎವರೆಸ್ಟ್ ಏರಿ, ಕಳೆದ ವರ್ಷದ ಅವರ ಸ್ವಂತ ದಾಖಲೆಯನ್ನು ಅವರೇ ಮುರಿದಿದ್ದಾರೆ.
ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಅನ್ನು ನೇಪಾಳಿ ಶೆರ್ಪಾ ರೀಟಾ ಹಾಗೂ ಅವರ 10 ಶೆಪಾ
ಆರೋಹಿಗಳು ಸಾಂಪ್ರದಾಯಿಕ ಅಗ್ನೇಯ ಪರ್ವತದ ಮಾರ್ಗದಲ್ಲಿ ಸ್ಥಳೀಯ ಕಾಲಮಾನ 6.15 ಕ್ಕೆ 8,849 ಮೀಟರ್ ಶಿಖರವನ್ನು ಏರಿದ್ದಾರೆ.
ಕಾಮಿ ರೀಟಾ ಅವರು ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ ಮತ್ತು ಕ್ಲೈಂಬಿಂಗ್ ನಲ್ಲಿ ಹೊಸ ವಿಶ್ವದಾಖಲೆಯನ್ನು ಸ್ಥಾಪಿಸಿದ್ದಾರೆ ಎಂದು ರಾಜಧಾನಿ ಕಠ್ಮಂಡುವಿನ ಪ್ರವಾಸೋದ್ಯಮ ಇಲಾಖೆಯ ಮಹಾನಿರ್ದೇಶಕ ತಾರಾನಾಥ್ ಹೇಳಿದ್ದಾರೆ.
1994 ರಲ್ಲಿ ಮೌಂಟ್ ಎವರೆಸ್ಟ್ ಶಿಖರವನ್ನು ರೀಟಾ ಮೊದಲ ಬಾರಿಗೆ ಏರಿದರು. ಅದರ ಜೊತೆಗೆ ಮೌಂಟ್ ಗಾಡ್ವಿನ್, ಆಸ್ಟೆನ್, ಮೌಂಟ್ ಚೋ, ಮೌಂಟ್ ಮನಸ್ಲು ಗಳನ್ನು ಸಹ ಏರಿದ್ದಾರೆ.
ಶೆರ್ಪಾ ಆರೋಹಿಗಳ ಗುಂಪನ್ನು ದಾರಿಯುದ್ದಕ್ಕೂ ಹಗ್ಗಗಳನ್ನು ಜೋಡಿಸಿದರು, ಇದರಿಂದಾಗಿ ನೂರಾರು ಇತರ ಆರೋಹಿಗಳು ಮತ್ತು ಮಾರ್ಗದರ್ಶಕರು ಈ ತಿಂಗಳ ಕೊನೆಯಲ್ಲಿ ಪರ್ವತದ ತುದಿಗೆ ಹೋಗಬಹುದು.
ಇದನ್ನು ಒದಿ : https://cnewstv.in/?p=9733
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
26 ಬಾರಿ ಮೌಂಟ್ ಎವರೆಸ್ಟ್ ಏರಿದ 52 ವರ್ಷದ ನೇಪಾಳಿ ಶೆರ್ಪಾ ರೀಟಾ.. ತನ್ನದೇ ದಾಖಲೆಯನ್ನು ಮುರಿದು 2022-05-08
Recent Comments