Cnewstv.in / 24.03.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಬಿಡುಗಡೆಯಾದ 2 ವಾರಗಳಲ್ಲಿ 200 ಕೋಟಿ ಕ್ಲಬ್ ಸೇರಿದ “ದಿ ಕಾಶ್ಮೀರ್ ಫೈಲ್ಸ್”.
ನೈಜಕತೆಯಾಧಾರಿತ ” ದಿ ಕಾಶ್ಮೀರ್ ಫೈಲ್ಸ್ ” ಸಿನಿಮಾ ಬಿಡುಗಡೆಯಾದ ಎರಡು ವಾರಗಳಲ್ಲಿ 200 ಕೋಟಿ ಕ್ಲಬ್ ಸೇರಿದೆ.
ವಿವೇಕ್ ರಂಜನ್ ಅಗ್ನಿಹೊತ್ರಿ ನಿರ್ದೇಶನದ ದಿ ಕಾಶ್ಮೀರಿ ಫೈಲ್ಸ್ ಚಿತ್ರ ಕರ್ನಾಟಕದಲ್ಲಿ ಮಾತ್ರವಲ್ಲದೇ ಇಡೀ ದೇಶಾದ್ಯಂತ ಸಹ ಸದ್ದು ಮಾಡಿದೆ. ಸಿನಿಮಾ ತೆರೆಗೆ ಬಂದ ಮೊದಲ ದಿನವೇ 3.55 ಕೋಟಿ ರೂಪಾಯಿ ಮೊತ್ತವನ್ನು ಗಳಿಸಿತ್ತು. ಎರಡು ವಾರಗಳಲ್ಲಿ 200ಕೋಟಿ ಕ್ಲಬ್ ಸೇರಿದೆ.
ಮಾರ್ಚ್ 11ರಂದು ಭಾರತದಾದ್ಯಂತ ಬಿಡುಗಡೆಯಾದ. “ದಿ ಕಾಶ್ಮೀರಿ ಫೈಲ್ಸ್” ಚಿತ್ರ 12 ದಿನಗಳಲ್ಲಿ 198 ಕೋಟಿ ಗಳಿಕೆ ಮಾಡಿತ್ತು. ಕೋವಿಡ್ 19 ಕಾಲದ ನಂತರ ಸಿನಿಮಾ ಜಗತ್ತಿನಲ್ಲಿ ಅತಿ ಹೆಚ್ಚು ಗಳಿಕೆ ಪಡೆದಿರುವ ಸಿನಿಮಾ “ದಿ ಕಾಶ್ಮೀರಿ ಫೈಲ್ಸ್”. ಈಗ 200 ಕೋಟಿ ಕ್ಲಬ್ ಪ್ರವೇಶಿಸುವ ಮೂಲಕ ಮತ್ತೊಂದು ಹೊಸ ಇತಿಹಾಸವನ್ನೇ ಸೃಷ್ಟಿಸುತ್ತಿದೆ.
ಮಾಹಿತಿಗಳ ಪ್ರಕಾರ ಬಾಹುಬಲಿ ಚಿತ್ರವು ಬಿಡುಗಡೆಯಾದ ಎರಡು ವಾರಗಳಲ್ಲಿ 120 ಕೋಟಿ ಗಳಿಕೆ ಮಾಡಿದ್ದು, ಆ ಸಿನಿಮಾದ ನಂತರ ಎರಡು ವಾರಗಳಲ್ಲಿ 120 ಕೋಟಿ ರೂಪಾಯಿ ಸಂಗ್ರಹಿಸಿದ ಎರಡನೇ ಸಿನಿಮಾ ದಿ ಕಾಶ್ಮೀರ್ ಫೈಲ್.
ಇದನ್ನು ಒದಿ : https://cnewstv.in/?p=9137
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments