Cnewstv.in / 03.03.2022 / ನವದೆಹಲಿ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
19 ವಿಮಾನಗಳಲ್ಲಿ 3,726 ಭಾರತೀಯರು ಇಂದು ತಾಯ್ನಾಡಿಗೆ ವಾಪಸ್.
ನವದೆಹಲಿ : ಇಂದು 19 ವಿಮಾನಗಳಲ್ಲಿ 3,726 ಭಾರತೀಯರು ತಾಯ್ನಾಡಿಗೆ ವಾಪಸ್ ಆಗಲಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವ ಜೋತಿರಾಧಿತ್ಯ ಸಿಂಧಿಯಾ ಹೇಳಿದ್ದಾರೆ.
ಭಾರತೀಯ ವಾಯುಪಡೆ (IAF) ತನ್ನ C-17 ಮಿಲಿಟರಿ ಸಾರಿಗೆ ವಿಮಾನವನ್ನು ಈ ಸ್ಥಳಾಂತರಿಸುವ ಕಾರ್ಯಾಚರಣೆಗೆ ಬಳಸುತ್ತಿದೆ. ಆಪರೇಷನ್ ಗಂಗಾ ಸ್ಥಳಾಂತರ ಕಾರ್ಯಕ್ರಮದಡಿ ವಾಯುಪಡೆಯ 8 ವಿಮಾನಗಳು, ಏರ್ ಇಂಡಿಯಾ ಮತ್ತು ಇಂಡಿಗೋ ರೊಮಾನಿಯಾದ ರಾಜಧಾನಿ ಬುಚಾರೆಸ್ಟ್ ನಿಂದ ಆಗಮಿಸುತ್ತಿರುವುದಾಗಿ ಅವರು ಟ್ವೀಟ್ ಮಾಡಿದ್ದಾರೆ.
ರಷ್ಯಾದ ಸೇನಾ ದಾಳಿಯಿಂದಾಗಿ ಫೆಬ್ರವರಿ 24 ರಿಂದ ಉಕ್ರೇನಿಯನ್ ವಾಯುಪ್ರದೇಶವನ್ನು ಮುಚ್ಚಲಾಗಿರುವುದರಿಂದ ಉಕ್ರೇನ್‌ನ ಪಶ್ಚಿಮ ನೆರೆಯ ದೇಶಗಳಾದ ರೊಮೇನಿಯಾ, ಹಂಗೇರಿ ಮತ್ತು ಪೋಲೆಂಡ್‌ನಿಂದ ವಿಶೇಷ ವಿಮಾನಗಳ ಮೂಲಕ ಭಾರತವು ತನ್ನ ನಾಗರಿಕರನ್ನು ಸ್ಥಳಾಂತರಿಸುತ್ತಿದೆ.
ಎರಡು ಇಂಡಿಯೋ ವಿಮಾನಗಳು ರೊಮಾನಿಯಾದ ನಗರ ಸುಸೇವಾದಿಂದ ಬರಲಿದೆ. ಒಂದು ಸ್ಪೈಸ್ ಜೆಟ್ ವಿಮಾನ ಸ್ಲೊವಾಕಿಯಾದ ಕೋಸಿಸ್, ಬುಡಾಪೆಸ್ಟ್ ನಿಂದ ಐದು ಮತ್ತು ರ್ಜೆಸ್ಜೋವ್ ದಿಂದ ಮೂರು ವಿಮಾನಗಳು ಬರಲಿವೆ. ಮುಂದಿನ 24 ಗಂಟೆಗಳಲ್ಲಿ ನೆರೆಯ ಉಕ್ರೇನ್ ರಾಷ್ಚ್ರದಿಂದ 15 ವಿಮಾನಗಳಲ್ಲಿ ಭಾರತೀಯರನ್ನು ಸ್ವದೇಶಕ್ಕೆ ಕರೆ ತರಲಾಗುವುದು ಎಂದು ಸರ್ಕಾರ ಹೇಳಿತ್ತು.
ಇದನ್ನು ಒದಿ : https://cnewstv.in/?p=8835
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments