Cnewstv.in / 20.02.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಮಾಜಿ ಸಿಎಂ ಯಡಿಯೂರಪ್ಪ.
ಬೆಂಗಳೂರು : ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರು ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದಾರೆ. ನೈಜ ಚಿತ್ರಕಥೆ ಆಧಾರಿತ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಮೊಟ್ಟಮೊದಲ ಬಾರಿಗೆ ಚಿತ್ರವೊಂದರಲ್ಲಿ ಬಣ್ಣ ಹಚ್ಚಿದ್ದಾರೆ.
ಈಗಾಗಲೇ ಸ್ಯಾಂಡಲ್ ವುಡ್ ಗೆ ಸಾಕಷ್ಟು ಜನ ರಾಜಕೀಯದಿಂದ ಆಗಮಿಸಿದ್ದಾರೆ. ಇನ್ನು ಕೆಲವರು ಸ್ಯಾಂಡಲ್ ವುಡ್ ನಿಂದ ರಾಜಕೀಯಕ್ಕೆ ಬಂದಿದ್ದಾರೆ. ಆದರೆ ಮಾಜಿ ಸಿಎಂ ಬಿಎಸ್ ವೈ ಇದೀಗ ಸಿನಿಮಾದಲ್ಲಿ ನಟಿಸಿದ್ದು ಅದು ಕೂಡ ಮುಖ್ಯಮಂತ್ರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಬಿಎಸ್ ವೈ ಸಿನಿಮಾ ಯಾವುದು ??
ನೈಜಕತೆಯಾಧಾರಿತ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಹರೀಶ್ ಎಂ.ಡಿ. ಹಳ್ಳಿ ನಿರ್ದೇಶನ ಮಾಡುತ್ತಿರುವ “ತನುಜಾ” ಚಿತ್ರದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರು ಕಾಣಿಸಿಕೊಳ್ಳಲಿದ್ದಾರೆ.
ಯಡಿಯೂರಪ್ಪನವರು ಸಿ.ಎಂ ಅಗಿದ್ದ ಸಮಯದಲ್ಲಿ
ತನುಜ ಎಂಬ ವಿದ್ಯಾರ್ಥಿನಿ ಕೋವಿಡ್ ಸಂದರ್ಭದಲ್ಲಿ
ಪರೀಕ್ಷೆ ಬರೆಯಲಾಗದೇ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದ್ದಳು. ನಂತರ ಪತ್ರಕರ್ತರ ಸಹಾಯದಿಂದ
ಪರೀಕ್ಷೆ ಬರೆದು ಪಾಸಾಗಿದ್ದಳು. ಆ ಸಮಯದಲ್ಲಿ ತನುಜಾ ಹೇಗೆ 350 ದೂರ ಪಯಣ ಮಾಡಿದಳು ಹಾಗೂ ಆಗ ನಡೆದಂತಹ ರೋಚಕ ಘಟನೆಗಳನ್ನು ಆಧರಿಸಿ ಸಿನಿಮಾವನ್ನು ನಿರ್ದೇಶನ ಮಾಡಲಾಗಿದೆ.
ಬಿಯಾಂಡ್ ವಿಷನ್ಸ್ ಸಿನಿಮಾಸ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ತನುಜಾ ಸಿನಿಮಾವನ್ನು ಶಿವಮೊಗ್ಗ ಹಾಗೂ ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಉಮೇಶ್ ಆರ್ ಬಿ ಸಂಕಲನ ಮಾಡಿದ್ದು, ಚಂದ್ರಶೇಖರ್ ಪ್ರಸಾದ್ ಹಾಗೂ ಪ್ರಹ್ಲಾದ ಸಂಭಾಷಣೆ ಬರೆದಿದ್ದಾರೆ. ಪ್ರದ್ಯೋತನ ಸಂಗೀತ ನಿರ್ದೇಶನ ಮಾಡಿದ್ದಾರೆ.
ತನುಜಾ ಸಿನಿಮಾದಲ್ಲಿ ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯ ಪ್ರಾತದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರದಲ್ಲಿ ಪತ್ರಕರ್ತ ವಿಶ್ವೇಶ್ವರ ಭಟ್, ಡಾ. ಕೆ ಸುಧಾಕರ್, ಬೇಬಿ ಶ್ರೀ, ರಾಜೇಶ್ ನಟರಂಗ ನಟಿಸುತ್ತಿದ್ದಾರೆ.
ಇದನ್ನು ಒದಿ : https://cnewstv.in/?p=8568
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments