Breaking News

ರಾಷ್ಟ್ರೀಯ ನೆಟ್ ಬಾಲ್ ತಂಡಕ್ಕೆ ಜಿಲ್ಲೆಯ ಮೂವರು ಆಯ್ಕೆ

ಶಿವಮೊಗ್ಗ: ರಾಜಸ್ಥಾನದ ಜೈಪುರದಲ್ಲಿ ಜನವರಿ 3 ರಿಂದ 7 ವರೆಗೆ ನಡೆಯಲಿರುವ ರಾಷ್ಟ್ರೀಯ ನೆಟ್ ಬಾಲ್ ತಂಡಕ್ಕೆ ಶರಾವತಿ ಹಿನ್ನೀರಿನ ಕರೂರು ಹೋಬಳಿಯ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಇಲ್ಲಿನ ಮಳೂರು ಗ್ರಾಮದ ಕೀರ್ತನ್. ಆರ್, ಕಿರೇತೋಡಿ ಗ್ರಾಮದ ಗಣೇಶ್.ಎಂ ಹಾಗೂ ಹೊನಗಲು ಗ್ರಾಮದ ಮಣಿಕಂಠ.ಎಂ.ಸಿ ಆಯ್ಕೆಯಾಗಿದ್ದಾರೆ.

 

ಈ ಮೂವರು ಕೂಡ ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ದ್ವೀತಿಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ನಿತಿನ್ ತಂಡದ ಕೋಚ್ ಆಗಿದ್ದು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

*