Breaking News

ರೇಣುಕಾಸ್ವಾಮಿ ಮರ್ಡರ್ ಕೇಸ್- ಚಿತ್ರದುರ್ಗದ ಜಗದೀಶ್ ಸಹ ಬಿಡುಗಡೆ

ಶಿವಮೊಗ್ಗ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ನಿಂದ ಜಾಮೀನು ಪಡೆದಿರುವ 6ನೇ ಆರೋಪಿ ಜಗದೀಶ್ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಬುಧವಾರ ಸಂಜೆ ಬಿಡುಗಡೆಯಾಗಿದ್ದಾನೆ.
ಕಳೆದ ವಾರವೇ ನ್ಯಾಯಾಲಯವು ಏಳು ಮಂದಿಗೆ ಜಾಮೀನು ನೀಡಿದರೂ ಐವರು ಮಾತ್ರ ಜಾಮೀನು ಷರತ್ತುಗಳನ್ನು ಪೂರೈಸಿದ್ದರಿಂದ ಅವರನ್ನು ಮಂಗಳವಾರವೇ ಬಿಡುಗಡೆಗೊಳಿಸಲಾಗಿತ್ತು.
ಎ-6 ಜಗದೀಶ್ ಒಂದು ದಿನ ತಡವಾಗಿ ಜಾಮೀನು ಷರತ್ತು ಪೂರೈಸಿದ ಹಿನ್ನೆಲೆ ಬುಧವಾರ ಸಂಜೆ ಬಿಡುಗಡೆ ಮಾಡಲಾಗಿದೆ.
ಜಗದೀಶ್ ಚಿತ್ರದುರ್ಗದಲ್ಲಿ ಆಟೋ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ. ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆದೊಯ್ಯುವ ತಂಡದಲ್ಲಿದ್ದ ಜಗದೀಶ್ 6 ನೇ ಆರೋಪಿಯಾಗಿದ್ದ. ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಗೆ ರಾಜಾತಿಥ್ಯ ಆರೋಪದ ಹಿನ್ನೆಲೆ ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ವರ್ಗಾಯಿಸಲಾಗಿತ್ತು. ಆಗಸ್ಟ್ 29 ರಂದು ಆರೋಪಿಗಳಾದ ಜಗದೀಶ್ ಮತ್ತು ಲಕ್ಷಣ್ ರನ್ನು ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲಾಗಿತ್ತು. ಅಂದಿನಿಂದ ಶಿವಮೊಗ್ಗದ ಸೆಂಟ್ರಲ್ ಜೈಲಿನಿಂದ ಜಗದೀಶ್ ಇದೀಗ ಬಿಡುಗಡೆಯಾಗಿದ್ದಾನೆ.

Leave a Reply

Your email address will not be published. Required fields are marked *

*