Cnewstv.in / 22.01.2022/ ನವದೆಹಲಿ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
35 ಯೂಟ್ಯೂಬ್ ಚಾನೆಲ್, 2 ಟ್ವಿಟರ್, ಇನ್‌ಸ್ಟಾಗ್ರಾಮ್
ವೆಬ್‌ಸೈಟ್‌ಗಳು ಬ್ಲಾಕ್.
ನವದೆಹಲಿ : 35 ಯೂಟ್ಯೂಬ್ ಚಾನೆಲ್, ಎರಡು ಟ್ವಿಟರ್, ಎರಡು ಇನ್ ಸ್ಟಾಗ್ರಾಮ್, ಎರಡು ವೆಬ್‌ಸೈಟ್, ಮತ್ತು ಒಂದು ಫೇಸ್ ಬುಕ್ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿಕ್ರಮ್ ಸಹಾಯ್ ತಿಳಿಸಿದ್ದಾರೆ.
ಬ್ಲಾಕ್ ಮಾಡಲಾದ ಎಲ್ಲ ಖಾತೆಗಳಲ್ಲಿ ದೇಶವಿರೋಧಿ ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ಎಲ್ಲಾ ಖಾತೆಗಳು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದ್ದವು ಹಾಗೂ ಅಸಂಘಟಿತ ರೀತಿಯಲ್ಲಿ ನಕಲಿ ಸುದ್ದಿಗಳನ್ನು ಹರಡುತ್ತಿತ್ತು ಎಂದು ಹೇಳಲಾಗಿದೆ.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ‘ಭಾರತ ವಿರೋಧಿ’ ವಿಷಯವನ್ನು ಪ್ರಸಾರ ಮಾಡಿದ್ದಕ್ಕಾಗಿ 20 ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಿದಾಗ ಸಚಿವಾಲಯವು ಇದೇ ರೀತಿಯ ಕ್ರಮವನ್ನು ಪ್ರಾರಂಭಿಸಿತು.
ಬ್ಲಾಕ್ ಮಾಡಲಾದ ಯುಟ್ಯೂಬ್ ಚಾನೆಲ್ 130 ಕೋಟಿ ವೀಕ್ಷಣೆಯನ್ನು (views) ಹಾಗೂ 1.2 ಕೋಟಿ ಚಂದಾದಾರರನ್ನು (Subscriber) ಹೊಂದಿದೆ. ಈ ಯುಟ್ಯೂಬ್ ಚಾನೆಲ್ ಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಐಟಿ ನಿಯಮಾವಳಿಗಳ ಪ್ರಕಾರ ಕ್ರಮವನ್ನು ಪ್ರಾರಂಭಿಸಲಾಗಿದೆ.
ಸಚಿವಾಲಯವು ನಿರ್ಬಂಧಿಸಿದ 35 ಖಾತೆಗಳು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿವೆ ಮತ್ತು ನಾಲ್ಕು ಸಂಘಟಿತ ತಪ್ಪು ಮಾಹಿತಿ ನೆಟ್‌ವರ್ಕ್‌ಗಳ ಭಾಗವೆಂದು ಗುರುತಿಸಲಾಗಿದೆ” ಎಂದು ಐ & ಬಿ ಸಚಿವಾಲಯ ಲಿಖಿತ ಹೇಳಿಕೆಯಲ್ಲಿ ಸೇರಿಸಲಾಗಿದೆ.
ಇದನ್ನು ಒದಿ : https://cnewstv.in/?p=7812
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments