Cnewstv.in / 17.01.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Covid-19 : ದೇಶದಲ್ಲಿ “ಆರ್ ಮೌಲ್ಯ” (R-value) ಎಷ್ಟಿದೆ ಗೊತ್ತಾ ??
ನವದೆಹಲಿ : ದೇಶದಲ್ಲಿ ಕೊರೋನ ಆರ್ಭಟ ಹೆಚ್ಚಿದೆ. ಕೊರೊನಾ ಮೂರನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ದೇಶದಲ್ಲಿ ಪ್ರತಿದಿನವು ಎರಡು ಲಕ್ಷದ ಗಡಿಯನ್ನು ದಾಟುತ್ತಿದೆ. ಇದೆಲ್ಲದರ ಮಧ್ಯೆ ನೆಮ್ಮದಿಯ ಸಂಗತಿಯೆಂದರೆ ದೇಶದಲ್ಲಿ “ಆರ್ ಮೌಲ್ಯ” ಕಡಿಮೆಯಾಗಿದೆ.
Covid-19 : R-value, “ಆರ್ ಮೌಲ್ಯ” ಎಂದರೇನು ??
ಒಬ್ಬ ಸೋಂಕಿತ ಎಷ್ಟು ಮಂದಿಗೆ ಸೋಂಕನ್ನು ಹಬ್ಬಬಲ್ಲ ಎಂಬುದನ್ನು ತೋರಿಸುವ “ಆರ್ ಮೌಲ್ಯ”. ಆರ್ ಮೌಲ್ಯ ಯಾವಾಗ 1ಕ್ಕಿಂತ ಕೆಳಕ್ಕೆ ಇಳಿಯುತ್ತದೋ ಆಗ ಸೋಂಕು ಅಂತ್ಯವಾಯಿತು ಎಂದರ್ಥ. ದೇಶಾದ್ಯಂತ ಈಗ 2.2ಕ್ಕಿಳಿದಿರುವುದೇ ಕೊರೊನಾ ತಗ್ಗುತ್ತಿರುವ ಸುಳಿವನ್ನು ನೀಡಿದೆ.
ಐಐಟಿ ಮದ್ರಾಸ್‌ನ ಪ್ರಾಥಮಿಕ ವಿಶ್ಲೇಷಣೆಯ ಪ್ರಕಾರ, ಕೋವಿಡ್-19 ಎಷ್ಟು ವೇಗವಾಗಿ ಹರಡುತ್ತಿದೆ ಎಂಬುದನ್ನು ಸೂಚಿಸುವ ಭಾರತದ ‘ಆರ್-ಮೌಲ್ಯ’, ಡಿಸೆಂಬರ್ 25ರಿಂದ 31ರ ಅವಧಿಯಲ್ಲಿ ಆರ್ ಮೌಲ್ಯ 2.9 ರಷ್ಟಿತ್ತು. ಜನವರಿ 1ರಿಂದ 6ರ ಅವಧಿಯಲ್ಲಿ ಇದು 4ಕ್ಕೇರಿತ್ತು. ಆದರೆ ಜನವರಿ 7 ರಿಂದ 13ರ ಅವಧಿಯಲ್ಲಿ 2.2ಕ್ಕಿಳಿದಿದೆ. ಅಂದರೆ ಸೋಂಕಿನ ವ್ಯಾಪಿಸುವಿಕೆ ಕಡಿಮೆಯಾಗಿದ್ದು, 3ನೇ ಅಲೆಯ ತೀವ್ರತೆ ಇಳಿಮುಖವಾಗಿರುವುದನ್ನು ಇದು ತೋರಿಸಿದೆ. ಇದು ಹಿಂದಿನ ಎರಡು ವಾರಗಳಿಗಿಂತ ಕಡಿಮೆಯಾಗಿದೆ.
ಇದನ್ನು ಒದಿ : https://cnewstv.in/?p=7654
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments