Cnewstv.in / 07.01.2022 / ಬಿಹಾರ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
11 ಬಾರಿ ಲಸಿಕೆ ಪಡೆದ 84 ರ ಆಸಾಮಿ.
ಬಿಹಾರ : ಕೊರೊನಾ ನಿಯಂತ್ರಣಕ್ಕಾಗಿ ಲಸಿಕೆ ಪಡೆಯುವುದು ಕಡ್ಡಾಯ ಎಂದು ಸರ್ಕಾರ ಘೋಷಣೆ ಮಾಡಿದೆ. ಇನ್ನೂ ಅನೇಕ ಮಂದಿ ಎರಡನೇ ಡೋಸ್ ಲಸಿಕೆಯನ್ನು ಪಡೆದಿಲ್ಲ. ಎರಡನೇ ಡೋಸ್ ಲಸಿಕೆಯನ್ನು ಹಾಕಿಸಿಕೊಳ್ಳಿ ಎಂದು ಸರ್ಕಾರ ಎಲ್ಲರಿಗೂ ವಿನಂತಿ ಮಾಡ್ತಾ ಇದೆ. ಆದರೆ ಇಲ್ಲೊಬ್ಬ ಭೂಪ ಕೊರೊನಾ ಲಸಿಕೆಯನ್ನು 11 ಬಾರಿ ಪಡೆದಿದ್ದಾನೆ.
ಹೌದು ಈ ವಿಚಿತ್ರ ಘಟನೆ ನಡೆದಿರುವುದು ಬಿಹಾರ ನಲ್ಲಿ. ಬ್ರಹ್ಮದೇವ್ ಮಂಡಲ್ ಎಂಬ ವೃದ್ಧನು ಬರೋಬ್ಬರಿ 11 ಬಾರಿಗೆ ಲಸಿಕೆಯನ್ನು ಪಡೆದಿದ್ದಾನೆ. 12ನೇ ಬಾರಿ ಕೋವಿಡ್ ಲಸಿಕೆಯನ್ನು ತೆಗೆದುಕೊಳ್ಳುವಾಗ ಸಿಕ್ಕಿಬಿದ್ದಿದ್ದಾನೆ.
ಬ್ರಹ್ಮದೇವ ಮಂಡಲ್, ನಿವೃತ್ತ ಅಂಚೆ ಇಲಾಖೆಯ ನೌಕರ. ಈತ ಪಾಟ್ನಾದ ಮಾಧೇಪುರ ಜಿಲ್ಲೆಯ ಓರಾಯ್ ಗ್ರಾಮದ ನಿವಾಸಿಯಾಗಿದ್ದಾನೆ. ಫೆಬ್ರವರಿ 13ರಂದು ಮೊದಲ ಡೋಸ್ ಲಸಿಕೆ ಪಡೆದಿದ್ದ ಈತನು, ಡಿಸೆಂಬರ್ 30ರೊಳಗೆ 11 ಬಾರಿ ಲಸಿಕೆಯನ್ನು ಪಡೆದಿದ್ದಾನೆ.ಲಸಿಕೆ ಪಡೆದ ನಂತರ ಅನೇಕ ಉಪಯೋಗವಾಗಿದೆ ಹಾಗಾಗಿ ಪದೇ ಪದೇ ಲಸಿಕೆ ಪಡೆದಿದ್ದೇನೆ ಎಂದು ತಿಳಿಸಿದ್ದಾನೆ.
8 ಬಾರಿ ಲಸಿಕೆಯನ್ನು ಪಡೆಯಲು ತನ್ನದೇ ಆಧಾರ್ ಕಾರ್ಡ್ ಮತ್ತು ಪೋನ್ ನಂಬರ್ ನೀಡಿದ್ದಾರೆ ನಂತರ ಮೂರು ಬಾರಿ ವೋಟರ್ ಐಡಿ ಹಾಗೂ ಹೆಂಡತಿಯ ಮೊಬೈಲ್ ನಂಬರ್ ನೀಡಿ ಲಸಿಕೆ ಪಡೆದಿದ್ದಾಗಿ ತಿಳಿಸಿದ್ದಾರೆ.
ಲಸಿಕೆ ಪಡೆದ ಮಾಹಿತಿ :
1ನೇ ಡೋಸ್: ಫೆ.13, ಹಳೇ ಪ್ರಾಥಮಿಕ ಆರೋಗ್ಯ ಕೇಂದ್ರ
2ನೇ ಡೋಸ್: ಮಾ.13, ಹಳೇ ಪ್ರಾಥಮಿಕ ಆರೋಗ್ಯ ಕೇಂದ್ರ
3ನೇ ಡೋಸ್: ಮೇ.19, ಔರೈ ಉಪ-ಆರೋಗ್ಯ ಕೇಂದ್ರ
4ನೇ ಡೋಸ್: ಜೂ.16, ಕ್ಯಾಂಪ್
5ನೇ ಡೋಸ್: ಜು.24, ಬಡೀ ಹಾತ್ ಶಾಲಾ ಕ್ಯಾಂಪ್
6ನೇ ಡೋಸ್: ಆ.31, ನಾಥ್‌ಬಾಬಾ ಕ್ಯಾಂಪ್
7ನೇ ಡೋಸ್: ಸೆ.11, ಬಡೀ ಹಾತ್ ಶಾಲಾ ಕ್ಯಾಂಪ್
8ನೇ ಡೋಸ್: ಸೆ.22, ಬಡೀ ಹಾತ್ ಶಾಲೆ
9ನೇ ಡೋಸ್: ಸೆ.24, ಕಲಾಸನ್ ಉಪ-ಆರೋಗ್ಯ ಕೇಂದ್ರ
10ನೇ ಡೋಸ್: ಪರ್ವತಾ, ಖಾಗಾರಿಯಾ ಜಿಲ್ಲೆ
11ನೇ ಡೋಸ್: ಕಹಾಗಾಂವ್, ಭಾಗಲ್ಪುರ.
ಇನ್ನು ಈ ವಿಚಾರದಲ್ಲಿ ನಡೆದ ಲೋಪದ ಬಗ್ಗೆ ತನಿಖೆ ನಡೆಸಲು ಸರ್ಕಾರ ಆದೇಶಿಸಿದೆ.
ಇದನ್ನು ಒದಿ : https://cnewstv.in/?p=7401
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments