Cnewstv.in / 17.12.2021/ ನವದೆಹಲಿ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಮುಂದಿನ CDS ಹೆಸರು ಸದ್ಯದಲ್ಲಿಯೇ ಘೋಷಣೆ: ರಕ್ಷಣಾ ಸಚಿವರು.
ನವದೆಹಲಿ: ಭಾರತದ ರಕ್ಷಣಾ ಪಡೆ(CDS) ಮುಖ್ಯಸ್ಥರಾಗಿದ್ದ ಜ.ಬಿಪಿನ್ ರಾವತ್ ತಮಿಳು ನಾಡಿನ ಕೂನ್ನೂರು ಬಳಿ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಹಠಾತ್ ಆಗಿ ನಿಧನ ಹೊಂದಿದರು.
ಅವರ ನಂತರ ಅವರ ಸ್ಥಾನಕ್ಕೆ ಯಾರು ಆಯ್ಕೆಯಾಗುತ್ತಾರೆ ಆ ಜವಾಬ್ದಾರಿಯನ್ನು ಯಾರು ನಿಭಾಯಿಸುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಆ ಸ್ಥಾನಕ್ಕಾಗಿ ಆಯ್ಕೆ ಮಾಡುವಂತಹ ಪ್ರಕ್ರಿಯೆಯು ಸದ್ಯದಲ್ಲಿಯೇ ನಡೆಯುತ್ತದೆ ಹಾಗೂ ಅವರ ಹೆಸರನ್ನು ಪ್ರಕಟಿಸಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಜವಾಬ್ದಾರಿಯುತ ಸ್ಥಾನವಾದ ಸಿಡಿಎಸ್ ನೇಮಕ ಮಾಡುವ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು ಸದ್ಯದಲ್ಲಿಯೇ ಹೆಸರು ಘೋಷಣೆ ಮಾಡಲಾಗುವುದು ಎಂದರು.
2019ರ ಡಿಸೆಂಬರ್ ತಿಂಗಳಲ್ಲಿ, ಸುದೀರ್ಘ ಕಾಯುವಿಕೆಯ ನಂತರ ರಚಿಸಲಾದ ಸಿಡಿಎಸ್ ಹುದ್ದೆಯು ಮುಖ್ಯವಾಗಿದೆ. ಮೊದಲ ಸಿಡಿಎಸ್ ಆಗಿ, ಜನರಲ್ ರಾವತ್ ಅವರು ಅಧಿಕಾರ ವಹಿಸಿಕೊಂಡು, ದೇಶದ ಉನ್ನತ ರಕ್ಷಣಾ ನಿರ್ವಹಣೆಯ ಪ್ರಮುಖ ಸುಧಾರಣೆಗಳು ಮತ್ತು ಮರು ಸಂಘಟನೆಯನ್ನು ಪ್ರಾರಂಭಿಸಿದರು.
ರಕ್ಷಣಾ ಸಚಿವಾಲಯದಲ್ಲಿ ಮಿಲಿಟರಿ ವ್ಯವಹಾರಗಳ (DMA) ವಿಭಾಗದ ಮುಖ್ಯಸ್ಥರಾಗಲು ಮತ್ತು ಅದರ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲು, ರಕ್ಷಣಾ ಸಚಿವರಿಗೆ ಪ್ರಧಾನ ಮಿಲಿಟರಿ ಸಲಹೆಗಾರರಾಗಿ ಕಾರ್ಯನಿರ್ವಹಿಸುವುದು ಇತ್ಯಾದಿ ಕೆಲಸಗಳು ಸಿಡಿಎಸ್ ಆದವರಿಗಿರುತ್ತದೆ.
ಇದನ್ನು ಒದಿ : https://cnewstv.in/?p=7171
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments