Cnewstv.in / 13.11.2021/ ಮಧ್ಯಪ್ರದೇಶ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಪ್ರಧಾನಿ ಮೋದಿಯ 4 ಗಂಟೆ ಕಾರ್ಯಕ್ರಮಕ್ಕಾಗಿ 23 ಕೋಟಿ ರೂಪಾಯಿ ಖರ್ಚು ಮಾಡುತ್ತಿರುವ ಮಧ್ಯಪ್ರದೇಶ ಸರ್ಕಾರ.
ಭೂಪಾಲ್ : ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಬುಡಕಟ್ಟು ಜನರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಮಧ್ಯಪ್ರದೇಶ
ಸರ್ಕಾರ 23 ಕೋಟಿ ರೂಪಾಯಿಗಳನ್ನು ರೂಪಾಯಿ ಖರ್ಚು ಮಾಡುತ್ತಿದೆ.
ಭಗವಾನ್ ಬಿಸಾ ಮುಂಡಾ ಅವರ ಸ್ಮರಣಾರ್ಥ ಮಧ್ಯಪ್ರದೇಶ ನವೆಂಬರ್ 15ರಂದು ಜಂಜಾಟಿಯ ಗೌರವ್ ದಿವಸ್ ಅನ್ನು ಆಚರಿಸಲಾಗುತ್ತಿದೆ. ಮಧ್ಯಪ್ರದೇಶದ ಜಾಂಬೂರಿ ಮೈದಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭೋಪಾಲ್ ನಲ್ಲಿ ನಾಲ್ಕು ಗಂಟೆಗಳ ಕಾಲ ಮತ್ತು ವೇದಿಕೆ ಮೇಲೆ ಒಂದು ಗಂಟೆ ಹದಿನೈದು ನಿಮಿಷಗಳ ಕಾಲ ಇರಲಿದ್ದಾರೆ.
ಮಧ್ಯಪ್ರದೇಶದ ವಿವಿಧ ಭಾಗಗಳಿಂದ ಎರಡು ಲಕ್ಷಕ್ಕೂ ಅಧಿಕ ಬುಡಕಟ್ಟು ಜನರು ಜಂಬೂರಿ ಮೈದಾನದಲ್ಲಿ ಸೇರುವ ನಿರೀಕ್ಷೆಯಿದೆ. ಇಡೀ ಮೈದಾನವನ್ನು ಬುಡಕಟ್ಟು ಕಲೆಗಳಿಂದ ಮತ್ತು ಬುಡಕಟ್ಟು ದಿಗ್ಗಜರ ಚಿತ್ರಗಳಿಂದ ಅಲಂಕರಿಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ತಯಾರಿಗಾಗಿ 300ಕ್ಕೂ ಅಧಿಕ ಕೆಲಸಗಾರರು ಕಳೆದ ಒಂದು ವಾರದಿಂದ ಕೆಲಸ ಮಾಡುತ್ತುಇದ್ದಾರೆ.
9 ಕೋಟಿಗೂ ಅಧಿಕ ವೆಚ್ಚವನ್ನು ಐದು ಗುಮ್ಮಟಗಳನ್ನು ನಿರ್ಮಿಸಲಾಗಿದೆ. 52 ಜಿಲ್ಲೆಗಳಿಂದ ಬರುವ ಜನರ ಆಹಾರ, ವಸತಿ ಹಾಗೂ ಸಾರಿಗೆಗಾಗಿ 12 ಕೋಟಿಗೂ ಅಧಿಕ ವೆಚ್ಚವಾಗಿದೆ. ಒಟ್ಟು 23 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ.
ಜಂಜಾಟಿಯ ಗೌರವ ದಿವಸ್ ಅಂಗವಾಗಿ, ಬಿಸಾ ಮುಂಡಾ ಮತ್ತು ಇತರ ಬುಡಕಟ್ಟು ಸ್ವತಂತ್ರ ಹೋರಾಟಗಾರರ ಕೊಡುಗೆಗಳನ್ನು ಸ್ಮರಿಸಲು ನವೆಂಬರ್ 15 ರಿಂದ 22 ರವರೆಗೆ ರಾಷ್ಟ್ರೀಯವಾಗಿ ಒಂದುವಾರದ ಕಾರ್ಯಕ್ರಮವನ್ನು ಆಯೋಜಿಸಲು ಕೇಂದ್ರ ಸಂಪುಟ ನಿರ್ಧರಿಸಿದೆ. ಈ ಕಾರ್ಯಕ್ರಮದಲ್ಲಿ ನರೇಂದ್ರಮೋದಿಯವರು ಭಾಗವಹಿಸಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇದನ್ನು ಒದಿ : https://cnewstv.in/?p=6789
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments