Cnewstv.in / 6.11.2021/ ನವದೆಹಲಿ/ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ನವದೆಹಲಿ : ಕೇಂದ್ರ ಸರ್ಕಾರ ದೇಶದ ಜನರಿಗೆ ಸಿಹಿಸುದ್ದಿಯನ್ನು ನೀಡಿದೆ. ಈಗಾಗಲೇ ಪೆಟ್ರೋಲ್ ಡೀಸೆಲ್ ದರದಲ್ಲಿ ಇಳಿಕೆ ಮಾಡಿದ್ದು ಕೇಂದ್ರ ಸರ್ಕಾರ ಅಡುಗೆ ಎಣ್ಣೆ ದರದಲ್ಲೂ ಸಹ ಭಾರಿ ಇಳಿಕೆ ಮಾಡಿದೆ.
ಪೆಟ್ರೋಲ್, ಡೀಸೆಲ್ ತೈಲೋತ್ಪನ್ನಗಳ ಬೆಲೆಯಲ್ಲಿ ಏರಿಕೆ ಯಾದಂತೆ ಕಳೆದ ಒಂದು ವರ್ಷದಿಂದ ಅಡುಗೆ ಎಣ್ಣೆಯ ದರದಲ್ಲೂ ಸಹ ಬಾರಿ ಏರಿಕೆಯಾಗಿತ್ತು. ಕೇಂದ್ರ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ದರದಲ್ಲಿ ಕಡಿಮೆ ಮಾಡಿದ ಹಾಗೆಯೇ, ಅಡುಗೆ ಎಣ್ಣೆ ದರದ ಮೇಲೆ 20 ರೂಪಾಯಿ ಕಡಿಮೆ ಮಾಡಿದೆ.
ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಸುಧಾಂಶು ಪಾಂಡೆ ಮಾಹಿತಿ ನೀಡಿದ್ದು, ಸೂರ್ಯಕಾಂತಿ, ಸೋಯಾಬೀನ್ಸ್, ಕಡಲೇಕಾಯಿ ಎಣ್ಣೆ, ಶೇಂಗಾ ಎಣ್ಣೆ ರಾಮಾಯಣ್ ಸೇರಿದಂತೆ ಬಹುತೇಕ ಅಡುಗೆ ಎಣ್ಣೆಗಳ ಬೆಲೆಯಲ್ಲಿ ಇಳಿಕೆಯಾಗಿದೆ. ಕಚ್ಚಾ ಪಾಮ್ ಆಯಿಲ್ ಶೇಕಡಾ 20ರಿಂದ ಶೇಕಡ 7.5 ಇಳಿಕೆಯಾಗಿದೆ. ಸೂರ್ಯಕಾಂತಿ, ಸೋಯಾಬಿನ್ ಶೇ. 5 ಕ್ಕೆ ಇಳಿಕೆಯಾಗಿದೆ. ಪಾಮೊಲಿನ್ ಎಣ್ಣೆ, ಸಂಸ್ಕರಿತ ಸೋಯಾಬೀನ್, ಸಂಸ್ಕರಿತ ಸೂರ್ಯಕಾಂತಿ ಎಣ್ಣೆಯ ಸುಂಕವು ಶೇ. 32.5 ರಿಂದ 17ಕ್ಕೆ ಇಳಿಕೆಯಾಗಿದೆ.
ಇದನ್ನು ಒದಿ : https://cnewstv.in/?p=6712
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments