Cnewstv.in / 1.11.2021/ ನವದೆಹಲಿ/ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಪೆಟ್ರೋಲ್ ಡೀಸೆಲ್ ದರ ದಿನೇದಿನೇ ಏರಿಕೆ ಆಗುತ್ತಿದೆ. ಸತತ ಆರು ದಿನಗಳಿಂದ 35ರಿಂದ 36 ಪೈಸೆ ಗಳಷ್ಟು ಪೆಟ್ರೋಲ್ ಡೀಸೆಲ್ ದರ ಏರಿಕೆ ಆಗುತ್ತಿದೆ. ಬೆಲೆ ಏರಿಕೆಯಿಂದಾಗಿ ವಾಹನ ಸವಾರರ ಕಂಗಾಲಾಗುತ್ತಿದ್ದಾರೆ. ಇಂದು ಸಹ 35 ಪೈಸೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದೆ.
ಪ್ರಸ್ತುತ ಪೆಟ್ರೋಲ್ ಪ್ರತಿ ಲೀಟರಿಗೆ 113 ರೂಪಾಯಿ 45 ಪೈಸೆಯಾಗಿದ್ದು, ಡೀಸೆಲ್ 104 ರೂಪಾಯಿ 44 ಪೈಸೆಗೆ ಏರಿಕೆಯಾಗಿದೆ.
ಪ್ರಸ್ತುತ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 190.69 ಡೀಸೆಲ್ 98.42. ಮುಂಬೈ ಪೆಟ್ರೋಲ್ 115.50 ಡೀಸೆಲ್ 106.62
ಚೆನ್ನೈ ಪೆಟ್ರೋಲ್ 106.35 ಡೀಸೆಲ್ 102.59. ಕೊಲ್ಕತ್ತಾ ಪೆಟ್ರೋಲ್ 110.15 ಡೀಸೆಲ್ 102.59. ರೂಪಾಯಿಗಳು.
ವಾಣಿಜ್ಯ ಸಿಲಿಂಡರ್‌ಗಳ (ಎಲ್‌ಪಿಜಿ) ಬೆಲೆಯನ್ನು ಇಂದು 266 ರೂಪಾಯಿ ಹೆಚ್ಚಿಸಲಾಗಿದೆ. ಅ. 1 ರಂದು ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಎಲ್‌ಪಿಜಿ ದರಗಳನ್ನು ರೂ. 25 ಹೆಚ್ಚಿಸಲಾಯಿತು. ಅ. 6 ರಂದು ಸಬ್ಸಿಡಿ ಗ್ಯಾಸ್ ಸೇರಿದಂತೆ ಎಲ್ಲಾ ವರ್ಗಗಳ ಎಲ್‌ಪಿಜಿ ಅಡುಗೆ ಅನಿಲ ಸಿಲಿಂಡರ್‌ಗಳ ಬೆಲೆಗಳನ್ನು ರೂ. 15 ಹೆಚ್ಚಿಸಲಾಯಿತು.
ಪ್ರಸುತ ಮುಂಬೈನಲ್ಲಿ 19 ಕೆಜಿಯ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 1,950 ರೂಪಾಯಿಗಳು. ಕೋಲ್ಕತ್ತಾದಲ್ಲಿ 2,073.50 ರೂಪಾಯಿಗಳು. ಚೆನ್ನೈನಲ್ಲಿ 2,133 ರಾಪಾಯಿಗಳಾಗಿದೆ.
ಇದನ್ನು ಒದಿ : https://cnewstv.in/?p=6688
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments