Cnewstv.in / 21.09.2021/ ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ನವದೆಹಲಿ : ದೈನಂದಿನ ಸಗಟು ಬೆಲೆಗಳಲ್ಲಿ ಖಾದ್ಯ ತೈಲದ ದರ ಕಡಿಮೆಯಾಗಿದೆ. ಪಿಐಬಿ ವರದಿಯ ಪ್ರಕಾರ ಕಳೆದ ಒಂದುವಾರದಿಂದ ಅಡುಗೆ ಎಣ್ಣೆಯ ಬೆಲೆ ಇಳಿಕೆಯಾಗುತ್ತಿದೆ. 10ನೇ ಸಪ್ಟೆಂಬರ್ 2021 ರಂದು ಕೇಂದ್ರ ಸರ್ಕಾರವು ಖಾದ್ಯತೈಲ ಬೆಳೆಗಳನ್ನು ಇಳಿಕೆ ಮಾಡುವ ಸಲುವಾಗಿ ಪ್ರಮಾಣಿತ ಸುಂಕದ ದರವನ್ನು ಮತ್ತಷ್ಟು ಕಡಿಮೆ ಮಾಡಿದೆ.
ಕಚ್ಚಾ ಪಾಮ್ ಎಣ್ಣೆ, ಸೋಯಾಬಿನ್ ಎಣ್ಣೆಯ ಮೇಲೆ ಶೇ. 2.5 ರಷ್ಟು ಸುಂಕ ಕಡಿಮೆ ಮಾಡಿದೆ. ಸಂಸ್ಕರಿತ ಸೂರ್ಯಕಾಂತಿ ಎಣ್ಣೆಯ ಮೇಲೆ ಶೇ. 32.5 ರಷ್ಟು ಸುಂಕ ಕಡಿಮೆ ಮಾಡಲಾಗಿದೆ.
ಪ್ಯಾಕ್ ಮಾಡಿದ ಪಾಮ್ ಆಯಿಲ್ ದೈನಂದಿನ ಸಗಟು ಬೆಲೆಯಲ್ಲಿ ಶೇಕಡ 2.5 ರಷ್ಟು ಕಡಿಮೆ ಮಾಡಲಾಗಿದೆ. ಸೂರ್ಯಕಾಂತಿ ಎಣ್ಣೆಯ ಮೇಲೆ ಶೇಕಡ 1.3, ಎಳ್ಳೆಣ್ಣೆ ಮೇಲೆ ಶೇ. 2.08, ವನಸ್ಪತಿ ಎಣ್ಣೆಯ ಮೇಲೆ ಶೇ. 0.71, ತೆಂಗಿನ ಎಣ್ಣೆ ಶೇ.1.2 ರಷ್ಟು ಇಳಿಕೆಯಾಗಿದೆ
ಇದನ್ನು ಓದಿ : https://cnewstv.in/?p=6143
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments