Cnewstv.in / 07.09.2021 / ಕೇರಳ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಕೇರಳ : ಇಷ್ಟು ದಿನ ಕೊರೊನಾ ವೈರಸ್ ಆರ್ಭಟಕ್ಕೆ ಜನ ಕಂಗಾಲಾಗಿದ್ದರು, ಇದೀಗ ನಿಫಾ ವೈರಸ್ ಆರ್ಭಟ ಕೂಡ ಆರಂಭವಾಗಿದೆ. 2 ವರ್ಷಗಳ ಹಿಂದೆ ಕೇರಳ ಮಾತ್ರವಲ್ಲದೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ನಿಫಾ ವೈರಸ್ ಮತ್ತೆ ಕೇರಳದಲ್ಲಿ ಕಾಣಿಸಿಕೊಂಡಿದೆ.
2018 ರ ಮೇ 19 ರಂದು ಕೇರಳದ ಕೋಯಿಕ್ಕೋಂಡ್ ಜಿಲ್ಲೆಯಲ್ಲಿ ಮೊದಲ ನಿಫಾ ವೈರಸ್ ಪ್ರಕರಣ ಪತ್ತೆಯಾಗಿತ್ತು. 2018 ರ ಜೂನ್ 1 ರವರೆಗೆ ರಾಜ್ಯದಲ್ಲಿ 18 ಜನರಲ್ಲಿ ಸೋಂಕು ದೃಢಪಟ್ಟಿತ್ತು. 17 ಜನರು ಸಾವನ್ನಪ್ಪಿದ್ದರು.
ಕೇರಳದ ಕೋಳಿಕ್ಕೋಡ್ ಮೂಲದ 12 ವರ್ಷದ ಬಾಲಕ ನಿಫಾ ವೈರಸ್ ಗೆ ಬಲಿಯಾಗಿದ್ದಾನೆ. ತೀವ್ರ ಜ್ವರದಿಂದಾಗಿ ಮೂರು ದಿನಗಳ ಹಿಂದೆ ಬಾಲಕ ಆಸ್ಪತ್ರೆಗೆ ದಾಖಲಾಗಿದ್ದರು. ನಿಫಾ ವೈರಸ್ ನ ಎಲ್ಲಾ ಲಕ್ಷಣಗಳು ಇದ್ದ ಕಾರಣ ಆತನಿಗೆ ಮೂರು ರೀತಿಯ ಪರೀಕ್ಷೆಗಳನ್ನು ಮಾಡಲಾಯಿತು. ಮೂರು ಪರೀಕ್ಷೆ ಗಳಲ್ಲೂ ಸಹ ಬಾಲಕನಿಗೆ ನಿಫಾ ವೈರಸ್ ವರದಿ ಪಾಸಿಟಿವ್ ಬಂದಿದೆ. ಹೀಗಾಗಿ ಬಾಲಕ ಬಲಿಯಾಗಿರುವುದು ನಿಫಾ ವೈರಸ್ ಗೆ ಎಂದು ಕೇರಳ ಆರೋಗ್ಯ ಇಲಾಖೆ ಅಧಿಕೃತವಾಗಿ ಘೋಷಣೆ ಮಾಡಿದೆ.
ಇದನ್ನು ಓದಿ : https://cnewstv.in/?p=5818
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments