Breaking News

ಭಾರತೀಯ ರೈಲ್ವೆಯ ಉಚಿತ ಸೇವೆಗಳು, ಮತ್ತು ನಿಯಮಗಳು ನಿಮಗೆ ಗೊತ್ತಾ ??

Www.Cnewstv.in/ ಸುದ್ದಿ‌ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಭಾರತೀಯ ರೈಲ್ವೆಯ ಉಚಿತ ಸೇವೆಗಳು, ಮತ್ತು ನಿಯಮಗಳು ನಿಮಗೆ ಗೊತ್ತಾ ??

ಭಾರತೀಯ ರೈಲ್ವೆಯನ್ನು ದೇಶದ ಜೀವನಾಡಿ ಎಂದೇ ಕರೆಯಲಾಗಿದೆ. ಭಾರತೀಯ ರೈಲ್ವೆ ವಿಶ್ವದ 4ನೇ ಅತಿದೊಡ್ಡ ಪ್ರಯಾಣದ ಸಂಪರ್ಕ ಜಾಲವಾಗಿರುವುದು ಮಾತ್ರವಲ್ಲದೆ ಇದು ದೇಶದಾದ್ಯಂತ 1.2 ಲಕ್ಷ ಕಿ.ಮೀ ವ್ಯಾಪ್ತಿ ಹೊಂದಿದೆ ಹಾಗು ರೈಲ್ವೇ ಪ್ರಯಾಣದ ಕುರಿತು ಮತ್ತಷ್ಟು ಅಭಿವೃದ್ಧಿ ಮತ್ತು ಅನ್ವೇಷನಾತ್ಮಕ ಪ್ರಯೋಗಗಳು ಭಾರತದಲ್ಲಿ ಇಲ್ಲಿನ ಭಾಗೋಳಿಕ ರಚನೆಗೆ ತಕ್ಕಂತೆ ನಡೆಯುತ್ತಿರುವುದು ಸಂತೋಷಕರ ವಿಷಯ.

ಇದನ್ನು ಒದಿ :

https://cnewstv.in/?p=11587

ಕಾಶ್ಮೀರ ಅಥವಾ ಕನ್ಯಾಕುಮಾರಿಯಾಗಿರಲಿ ದೇಶದ ಹೆಚ್ಚಿನ ಜನರು ರೈಲ್ವೆ ಪ್ರಯಾಣವನ್ನೇ ಇಷ್ಟಪಡುತ್ತಾರೆ ಮತ್ತು ಅವಲಂಬಿಸಿದ್ದಾರೆ. ರೈಲ್ವೆಯ ಮಾರ್ಗಸೂಚಿಗಳು ಹೇಳುವಂತೆ ನಿಮ್ಮ ಆಸನ, ಕಂಪಾರ್ಟ್‌ಮೆಂಟ್ ಅಥವಾ ಕೋಚ್‌ನಲ್ಲಿರುವ ಯಾವುದೇ ಪ್ರಯಾಣಿಕರು ಮೊಬೈಲ್‌ನಲ್ಲಿ ದೊಡ್ಡ ಧ್ವನಿಯಲ್ಲಿ ಮಾತನಾಡುವಂತಿಲ್ಲ ಅಥವಾ ದೊಡ್ಡ ಧ್ವನಿಯಲ್ಲಿ ಹಾಡುಗಳನ್ನು ಕೇಳುವಂತಿಲ್ಲ.

ಅನೇಕ ಪ್ರಯಾಣಿಕರು ಫೋನ್‌ನಲ್ಲಿ ಜೋರಾಗಿ ಮಾತನಾಡುತ್ತಾರೆ ಅಥವಾ ತಡರಾತ್ರಿಯವರೆಗೆ ಹಾಡುಗಳನ್ನು ಕೇಳುತ್ತಾರೆ ಎಂದು ಸಹ ಪ್ರಯಾಣಿಕರು ದೂರುವುದು ಸಾಮಾನ್ಯವಾಗಿರುತ್ತದೆ. ಇದಲ್ಲದೇ ಅನೇಕ ಪ್ರಯಾಣಿಕರು ರಾತ್ರಿ 10 ಗಂಟೆಯ ನಂತರವೂ ಲೈಟ್‌ಗಳನ್ನು ಹಾಕುವುದರಿಂದ ಅವರ ನಿದ್ದೆಗೆ ತೊಂದರೆ ಅನುಭವಿಸಿ ದೂರುವುದು ನಾವು ಕಂಡಿರುತ್ತೇವೆ ಅಥವಾ ನಮಗೆ ಅನುಭವವಾಗಿರುತ್ತವೆ.

ಯಾವುದೇ ಪ್ರಯಾಣಿಕರು ನಿಯಮಗಳನ್ನು ಪಾಲಿಸದಿದ್ದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ರೈಲ್ವೇ ಇಲಾಖೆ ತಿಳಿಸುತ್ತದೆ ಆದರೆ ಇದು ಹಲವರಿಗೆ ತಿಳಿದಿಲ್ಲ ಮತ್ತು ಹೆಚ್ಚಿನವರು ಈ ಕಿರಿಕಿರಿ ನಮಗೇಕೆ ಎಂದು ಸುಮ್ಮನಾಗುತ್ತಾರೆ.

ರೈಲ್ವೇ ನಿಯಮಗಳು…

1. ರೈಲಿನಲ್ಲಿ ಪ್ರಯಾಣಿಸುವಾಗ ರಾತ್ರಿ 10 ಗಂಟೆಯ ನಂತರ ಮೊಬೈಲ್ ನಲ್ಲಿ ಜೋರಾಗಿ ಮಾತನಾಡುತ್ತಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.
2. ಹೊಸ ನಿಯಮಗಳ ಪ್ರಕಾರ ರಾತ್ರಿ ಪ್ರಯಾಣದ ವೇಳೆ ಪ್ರಯಾಣಿಕರು ಜೋರಾಗಿ ಮಾತನಾಡುವಂತಿಲ್ಲ ಮತ್ತು ಸಂಗೀತ ಕೇಳುವಂತಿಲ್ಲ.
3. ಯಾವುದೇ ಪ್ರಯಾಣಿಕರು ದೂರು ನೀಡಿದರೆ, ಅದನ್ನು ಪರಿಹರಿಸುವ ಜವಾಬ್ದಾರಿ ರೈಲಿನಲ್ಲಿರುವ ಸಿಬ್ಬಂದಿಯಾಗಿರುತ್ತದೆ.ಈ ನಿಯಮಗಳ ಪ್ರಕಾರ ಈಗಾಗಲೆ ಹಲವರು ಆಚರಿಸುವ ಹುಟ್ಟುಹಬ್ಬ, ಸಂತೋಷಕ್ಕಾಗಿ ಆಚರಿಸುವ ಪಾರ್ಟಿ ಮುಂತಾದ ಯಾವುದೇ ರೀತಿಯ ಆಚರಣೆಗಳನ್ನು ರೈಲಿನ ಒಳಗೆ ಪ್ರಯಾಣಿಸುವಾಗ ಆಚರಿಸುವಂತಿಲ್ಲ.

ಭಾರತೀಯ ರೈಲ್ವೆಯ ಉಚಿತ ಸೇವೆಗಳು.

ಟಿಕೆಟ್‌ಗಳ ಬುಕಿಂಗ್ ಸಮಯದಲ್ಲಿ ರೈಲ್ವೆಯು ಪ್ರಯಾಣಿಕರಿಗೆ ವರ್ಗ ಉನ್ನತೀಕರಣ(Class Upgradation)ದ ಸೌಲಭ್ಯವನ್ನು ಒದಗಿಸುತ್ತದೆ. ಅಂದರೆ ಸ್ಲೀಪರ್‌ ಕೋಚ್ ಬುಕ್ ಮಾಡಿದ ಪ್ರಯಾಣಿಕರು 3ನೇ ಎಸಿ ಕ್ಲಾಸ್‍(AC 3 Tier) ಪಡೆಯಬಹುದು ಮತ್ತು 3ನೇ ಎಸಿ ಕ್ಲಾಸ್ ಪ್ರಯಾಣಿಕರು 2ನೇ ಎಸಿ ಕ್ಲಾಸ್(AC 2 Tier) ಪಡೆಯಬಹುದು.

ಇದನ್ನು ಒದಿ : https://cnewstv.in/?p=11583

2ನೇ ಎಸಿ ಕ್ಲಾಸ್ ಪ್ರಯಾಣಿಕರು ಅದೇ ದರದಲ್ಲಿ ಫಸ್ಟ್ ಎಸಿ ಕ್ಲಾಸ್ ಸೌಲಭ್ಯ(First AC Facility)ವನ್ನು ಪಡೆಯಲು ಅನುವು ಮಾಡಿ ಕೊಡಲಾಗುತ್ತದೆ. ಈ ಸೌಲಭ್ಯವನ್ನು ಪಡೆಯಲು ಪ್ರಯಾಣಿಕರು ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ಆಟೋ ಅಪ್‌ಗ್ರೇಡ್ ಆಯ್ಕೆ ಕ್ಲಿಕ್ ಮಾಡಬೇಕು. ಇದರ ನಂತರ ರೈಲ್ವೆ ಲಭ್ಯತೆಯ ಆಧಾರದ ಮೇಲೆ ಟಿಕೆಟ್ ನವೀಕರಿಸುತ್ತದೆ.ಅದೇ ರೀತಿ waiting list ಪ್ರಯಾಣಿಕರಿಗೆ ಮತ್ತೊಂದು ರೈಲಿನಲ್ಲಿ ಆಸನ ಲಭ್ಯತೆಯ ಆಧಾರದ ಮೇಲೆ ಪ್ರಯಾಣಿಸಲು ಅವಕಾಶ ನೀಡುತ್ತದೆ.

ದೃಢೀಕೃತ ಟಿಕೆಟ್ ಪಡೆಯಲು ಸಾಧ್ಯವಾಗದ ಪ್ರಯಾಣಿಕರು ಮತ್ತೊಂದು ರೈಲಿನಲ್ಲಿ ಸೀಟು ಪಡೆಯಲು ಆಯ್ಕೆ ಮಾಡಿಕೊಳ್ಳಬಹುದು. ಇದಕ್ಕಾಗಿ ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ‘Option’ ಆಯ್ಕೆ ಮಾಡಿಕೊಳ್ಳಬೇಕು. ಇದರ ನಂತರ ರೈಲ್ವೆ ಈ ಸೌಲಭ್ಯವನ್ನು ಒದಗಿಸುತ್ತದೆ.

ಭಾರತೀಯ ರೈಲ್ವೆಯು ಟಿಕೆಟ್‌ಗಳನ್ನು ವರ್ಗಾಯಿಸುವ ಆಯ್ಕೆಯನ್ನು ಸಹ ನೀಡುತ್ತದೆ. ಒಬ್ಬ ವ್ಯಕ್ತಿಯು ಯಾವುದೇ ಕಾರಣದಿಂದ ಪ್ರಯಾಣಿಸಲು ಸಾಧ್ಯವಾಗದಿದ್ದರೆ, ಅವರು ತನ್ನ ಕುಟುಂಬದ ಯಾವುದೇ ಸದಸ್ಯರ ಹೆಸರಿಗೆ ಟಿಕೆಟ್ ವರ್ಗಾಯಿಸಬಹುದು. ಆದರೆ ಪ್ರಯಾಣ ದಿನದ 24 ಗಂಟೆಗಳ ಮೊದಲು ಟಿಕೆಟ್ ವರ್ಗಾವಣೆ ಮಾಡಿಕೊಳ್ಳಬಹುದು.ಈ ಉಪಯೋಗಗಳನ್ನು ಪಡೆದುಕೊಳ್ಳೋಣ ಮತ್ತು ಸಮರ್ಪಕವಾಗಿ ಜಾರಿಯಾಗುವಂತೆ ನೋಡಿಕೊಳ್ಳೋಣ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Hosanagara JDS Kerala K S Eshwarappa MP election M P Election News NSUI Sagara Shikaripura Shimoga shimoga district Shivammoga Shivamoga Shivamogga Shivamogga NSUI SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments