ಶರಾವತಿ ಹೊಳೆಗೆ ಇಳಿದ ಖಾಸಗಿ ಬಸ್.
Cnewstv / 26.11.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಶಿವಮೊಗ್ಗ : ಸಾಗರದ ಸಿಗಂದೂರಿನ ಶರಾವತಿ ಹೊಳೆಯಲ್ಲಿ ಖಾಸಗಿ ಬಸ್ ನೀರಿಗೆ ಇಳಿದ ಘಟನೆ ನಡೆದಿದೆ.
ಸಾಗರದಿಂದ ಹೊಳೆಬಾಗಿಲ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸು ನಿಯಂತ್ರಣ ತಪ್ಪಿ ಶರಾವತಿ ನೀರಿಗೆ ಇಳಿದಿದೆ. ಬಸ್ಸಿನಲ್ಲಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ನಂತರ ಜೆಸಿಬಿ ಬಳಸಿ ಬಸ್ಸನ್ನು ಮೇಲೆತ್ತಲಾಯಿತು.
ಹೊಳಬಾಗಿಲಿನಲ್ಲಿ ಲಾಂಚ್ ನಿಲ್ಲಿಸುವ ಜಾಗದ ಇಳಿಜಾರಿನಲ್ಲಿ ಈ ದುರ್ಘಟನೆ ನಡೆದಿದೆ. ಬಸ್ಸಿನಲ್ಲಿ ಸುಮಾರು 35 ರಿಂದ 40 ಜನ ಪ್ರಯಾಣಿಕರಿದ್ದರು ಆದರೆ ಅದೃಷ್ಟವಶಾತ್ ಕೂದಲೆಳೆಯ ಅಂತರದಲ್ಲಿ ಬಾರಿ ಅನಾಹುತ ತಪ್ಪಿದೆ.
ಇದನ್ನು ಒದಿ : http://cnewstv.in/?p=11578
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಶರಾವತಿ ಹೊಳೆಗೆ ಇಳಿದ ಖಾಸಗಿ ಬಸ್. 2022-11-27
imunify-bot-check